More

    ಇನ್​ಫ್ರಾರೆಡ್ ಫೋರ್​ಹೆಡ್​ ಥರ್ಮಾಮೀಟರ್​ ಎಂಆರ್​ಪಿಗಿಂತ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾತನ ಬಂಧನ

    ಬೆಂಗಳೂರು: ಸಾರ್ವಕಜನಿಕರು ಕರೊನಾ ವೈರಸ್ ಭೀತಿಯಲ್ಲಿರುವ ಸಂದರ್ಭವನ್ನು ದುರುಪಯೋಗಿ ಪಡಿಸಿಕೊಂಡು ಇನ್​ಫ್ರಾರೆಡ್​ ಫೋರ್​ಹೆಡ್ ಥರ್ಮಾಮೀಟರ್ ಗಳನ್ನು ಮ್ಯಾಕ್ಸಿಮಮ್​ ರಿಟೇಲ್ ಪ್ರೈಸ್​(ಎಂಆರ್​ಪಿ)ಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾತ ಈಗ ಸಿಸಿಬಿ ಪೊಲೀಸರ ಅತಿಥಿ.

    ಬಂಧಿತನ ಹೆಸರು ಕೇಶವನ್​ ಎನ್​ (32). ಈತ ನಗರದ ಕುರುಬರಹಳ್ಳಿಯ ಪೈಪ್​ಲೇನ್ ರೋಡ್​ನ ಜೆಸಿನಗರದ ನಿವಾಸಿ. ರಾಜಾಜಿನಗರದ 1ನೇ ಬ್ಲಾಕ್​ನ 19ನೇ ಮುಖ್ಯರಸ್ತೆಯ ಪ್ರಜ್ವಲ್ ಸರ್ಜಿಕಲ್ ಆ್ಯಂಡ್ ಸೈಂಟಿಫಿಕ್ಸ್ ಎಂಬ ಸರ್ಜಿಕಲ್ ಅಂಗಡಿಯಲ್ಲಿ ಮ್ಯಾನೇಜರ್​. ಅದರ ಮಾಲೀಕರು ಚೆನ್ನೈನಿಂದ ಕಡಿಮೆ ಬೆಲೆಗೆ ಇನ್​ಫ್ರಾರೆಡ್​ ಥರ್ಮಾ ಮೀಟರ್ ಗಳನ್ನು ತರಿಸುತ್ತಿದ್ದರು. ಅದನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು.

    ಈ ಕುರಿತ ಖಚಿತ ಮಾಹಿತಿ ಆಧಾರ ಮೇಲೆ ಅಂಗಡಿ ಮೇಲೆ ದಾಳಿ ನಡೆಸಿದಾಗ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಖಚಿತವಾಗಿದೆ. ಕೂಡಲೇ ಅಲ್ಲಿದ್ದ ಸುಮಾರು 8 ಲಕ್ಷ ರೂಪಾಯಿ ಬೆಲೆಬಾಳುವ 70 ಇನ್​ಫ್ರಾರೆಡ್ ಫೋರ್​ಹೆಡ್​ ಥರ್ಮಾ ಮೀಟರ್​ಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ 60 ಬ್ಯಾಟರಿಗಳನ್ನು ವಶಪಡಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ. ಈ ಬಗ್ರಗೆ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ನಿರಾಶ್ರಿತರಿಗೆ ನೆರವಾದ ಇಂದಿರಾ ಕ್ಯಾಂಟೀನ್- ಕೂಲಿ ಕಾರ್ವಿುಕರು, ನಿರಾಶ್ರಿತರ ಕೇಂದ್ರಕ್ಕೂ ರವಾನೆ | ಉಪಾಹಾರದ ಜತೆಗೆ ನಿತ್ಯ 2 ಹೊತ್ತು ಊಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts