More

    7 ಪಾಸಿಟಿವ್, 6 ಜನ ಚೇತರಿಕೆ

    ಮಂಡ್ಯ: ಹೆಮ್ಮಾರಿ ಕರೊನಾ ಸೋಂಕು ಜಿಲ್ಲೆಯಲ್ಲಿ ಬುಧವಾರ ಮತ್ತೆ 7 ಜನರಿಗೆ ದೃಢಪಟ್ಟಿದ್ದರೆ, ಇದೇ ದಿನ 6 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಆ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 62ಕ್ಕೆ ಇಳಿಕೆಯಾಗಿದೆ. ಸೋಮವಾರ, ಮಂಗಳವಾರ ನಿರಾಳವಾಗಿದ್ದ ಜಿಲ್ಲೆಗೆ ಬುಧವಾರ ಆತಂಕ ಸೃಷ್ಟಿಸಿದೆ. ಸೋಂಕು ದೃಢಪಟ್ಟ 7 ಜನರ ಪೈಕಿ 6 ಜನರು ಮುಂಬೈನಿಂದ ವಾಪಸಾಗಿರುವ ಕೆ.ಆರ್.ಪೇಟೆ ತಾಲೂಕಿನ ನಿವಾಸಿಗಳು. ಒಬ್ಬರು ಪಾಂಡವಪುರ ತಾಲೂಕಿನವರಾಗಿದ್ದು, ಇವರಿಗೆ ಯಾರಿಂದ ಸೋಂಕು ತಗುಲಿದೆ ಎಂಬುದು ಖಚಿತವಾಗಿಲ್ಲ.
    ಬುಧವಾರ 33, 57, 70, 50, 19 ವರ್ಷದ ಪುರಷರು, 40 ವರ್ಷದ ಮಹಿಳೆ, 16 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದ್ದರೆ, ಪಿ.3914, 3915, 3916, 3916, 3920, 2224 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
    ಮೂಲತಃ ಪಾಂಡವಪುರ ತಾಲೂಕಿನವರಾಗಿರುವ ಒಬ್ಬರು ಟಯೋಟಾ ಕಂಪನಿ ನೌಕರನಾಗಿದ್ದು, ಮದ್ದೂರು ಪಟ್ಟಣದ ಲೀಲಾವತಿ ಬಡಾವಣೆಯ ಮನೆಯಲ್ಲಿ ಬಾಡಿಗೆಗಿದ್ದರು. ಜು.15ರಂದು ಊರಿನಿಂದ ಮದ್ದೂರಿಗೆ ಬೈಕ್‌ನಲ್ಲಿ ಬಂದು ರಾತ್ರಿ ತಂಗಿದ್ದು ಮಾರನೆ ದಿನ 6.20ಕ್ಕೆ ಕೆಲಸಕ್ಕೆ ಹೋಗಿದ್ದಾರೆ. ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಜೂ.13ರಂದು ಇವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, 16ರಂದು ಪಾಸಿಟಿವ್ ಬಂದಿದೆ.

    ಇವರು ಪತ್ನಿ ಮನೆಗೂ ತೆರಳಿದ್ದ ಹಿನ್ನೆಲೆಯಲ್ಲಿ ಸ್ವಗ್ರಾಮ, ಪತ್ನಿ ತವರು, ಮದ್ದೂರಿನಲ್ಲಿ ಆತ ಇದ್ದ ಎಲ್ಲ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೀಲ್ ಡೌನ್ ಸೇರಿ ಇತರೆ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿದೆ.

    ಜಿಲ್ಲೆಯಲ್ಲಿ ಈತನಕ 13177 ಜನರ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದು, 12,290 ಜನರ ಫಲಿತಾಂಶ ನೆಗೆಟಿವ್ ಬಂದಿದೆ. 480 ಜನರ ಫಲಿತಾಂಶ ಬರಬೇಕಿದೆ. ಆಸ್ಪತ್ರೆ ಕ್ವಾರಂಟೈನ್‌ನಲ್ಲಿ ಇಬ್ಬರಿದ್ದರೆ, ವಸತಿ ಶಾಲೆ ಕ್ವಾರಂಟೈನ್‌ನಲ್ಲಿ 264 ಜನರಿದ್ದಾರೆ. 5312 ಜನ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts