More

    7.87 ಲಕ್ಷ ರೂ. ಉಳಿತಾಯ ಬಜೆಟ್

    ಬ್ಯಾಡಗಿ: ಪುರಸಭೆಯ 2021-22 ಸಾಲಿನ ಬಜೆಟ್ ಅನ್ನು ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಅವರು ಮಂಗಳವಾರ ಮಂಡಿಸಿದರು.

    ಕೋವಿಡ್ ಸಮಸ್ಯೆ ಮಧ್ಯೆಯೂ ಹಿಂದಿನ ವರ್ಷಕ್ಕಿಂತ ಅಧಿಕ ಗುರಿ ಸಾಧಿಸುವತ್ತ ದೃಢ ಹೆಜ್ಜೆಯಿಟ್ಟಿದ್ದು, 7,87,200 ರೂ. ಉಳಿತಾಯ ಬಜೆಟ್ ಮಂಡಿಸಿದೆ ಎಂದರು.

    ವಾಣಿಜ್ಯ ಮಳಿಗೆ ಬಾಡಿಗೆ 38.33 ಲಕ್ಷ ರೂ., ಅಭಿವೃದ್ಧಿ ಶುಲ್ಕ 23 ಲಕ್ಷ ರೂ., ಮೇಲ್ವಿಚಾರಣೆ ಶುಲ್ಕ 16 ಲಕ್ಷ ರೂ., ನೀರಿನ ಕರ 89 ಲಕ್ಷ ರೂ., ಸಂತೆ ಶುಲ್ಕ 14 ಲಕ್ಷ ರೂ., ಆಸ್ತಿ ತೆರಿಗೆ 1 ಕೋಟಿ 5 ಲಕ್ಷ ರೂ., ವ್ಯಾಪಾರ ಪರವಾನಗಿ 5 ಲಕ್ಷ 80 ಸಾವಿರ ರೂ. ಸೇರಿ ಒಟ್ಟು ವಿವಿಧ ಮೂಲಗಳಿಂದ 19 ಕೋಟಿ 19 ಲಕ್ಷ 46 ಸಾವಿರ 700 ರೂ. ಆದಾಯ ನಿರೀಕ್ಷಿಸಿದೆ. ಪುರಸಭೆ ಸ್ವಚ್ಛತಾ ಕಾರ್ವಿುಕರ

    ವೇತನ, ಗುತ್ತಿಗೆ ನೌಕರರ ವೇತನ, ಬಡಾವಣೆ ಸ್ವಚ್ಛತೆ, ನೀರು ಪೂರೈಕೆ, ರಸ್ತೆ, ಕಟ್ಟಡ ದುರಸ್ತಿ ಇತ್ಯಾದಿ ಕಾಮಗಾರಿ ಹಾಗೂ ವಿವಿಧ ನಿರ್ವಹಣೆ ವೆಚ್ಚ ಸೇರಿ ಒಟ್ಟು 19,11,59,500 ರೂ. ಖರ್ಚಾಗಲಿದೆ ಎಂದರು.

    ನಗರ ಸ್ವಚ್ಛವಾಗಿಟ್ಟುಕೊಳ್ಳಲು ಸರ್ಕಾರದ ವಿವಿಧ ಯೋಜನೆ ಹಾಗೂ ಪುರಸಭೆ ಅನುದಾನ ಬಳಸಿಕೊಂಡು ಜಿಲ್ಲೆಯಲ್ಲಿ ಮಾದರಿ ಪಟ್ಟಣವನ್ನಾಗಿಸುವ ಗುರಿ ಹೊಂದಿದೆ. 24ಗಿ7 ಯೋಜನೆ ಜಾರಿಗೊಳಿಸಿ, ಮನೆಮನೆಗೂ ಸಮರ್ಪಕವಾಗಿ ನೀರು ಪೂರೈಸುವ ಕಾಮಗಾರಿ ಶೀಘ್ರದಲ್ಲೆ ಪೂರ್ಣಗೊಳ್ಳಲಿದೆ. ಯುಜಿಡಿ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಕೆಲವೇ ತಿಂಗಳಲ್ಲಿ ಮುಗಿಯಲಿದೆ. ಇದರಿಂದ ಎಲ್ಲ ಕುಟುಂಬಗಳಿಗೂ ಅನುಕೂಲವಾಗಲಿದೆ. ಪಟ್ಟಣದ ಎಲ್ಲ ಕುಟುಂಬಗಳು ಕಡ್ಡಾಯವಾಗಿ ಶೌಚಗೃಹ ನಿರ್ವಿುಸಿಕೊಳ್ಳಬೇಕು. ಇದಕ್ಕಾಗಿ ಎಲ್ಲ ವಾರ್ಡ್​ಗಳ ಸರ್ವೆ ಕಾರ್ಯ ಮುಗಿದಿದೆ. ಬಡವರ ಭಾಗ್ಯಕ್ಕಾಗಿ ಸರ್ಕಾರದ ಹಲವು ಯೋಜನೆಗಳನ್ನು ಜಾರಿಗೊಳಿಸಲು ಅಧಿಕಾರಿಗಳು ಮುತುವರ್ಜಿ ವಹಿಸುವಂತೆ ಅಧ್ಯಕ್ಷೆ ಸೊಪ್ಪಿನಮಠ ಸೂಚಿಸಿದರು.

    ಪುರಸಭೆ ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಸದಸ್ಯರಾದ ಬಾಲಚಂದ್ರಗೌಡ್ರ ಪಾಟೀಲ, ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ವಿನಯ ಹಿರೇಮಠ, ಸರೋಜ ಉಳ್ಳಾಗಡ್ಡಿ, ಗಾಯತ್ರಿ ರಾಯ್ಕರ, ಫಕೀರಮ್ಮ ಚಲವಾದಿ ಇತರರಿದ್ದರು.

    ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ, ಲೆಕ್ಕಪರಿಶೋಧಕಿ ಸೌಭಾಗ್ಯ ಬಳಿಗಾರ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts