More

    69.64 ಲಕ್ಷ ರೂ. ಉಳಿತಾಯ ಬಜೆಟ್

    ಎಚ್.ಡಿ.ಕೋಟೆ: ಹುಣಸೂರು ಉಪವಿಭಾಗಾಧಿಕಾರಿ ಹಾಗೂ ಎಚ್.ಡಿ.ಕೋಟೆ ಪುರಸಭಾ ಆಡಳಿತ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್ ನೇತೃತ್ವದಲ್ಲಿ ಮುಖ್ಯಾಧಿಕಾರಿ ಪಿ.ಸುರೇಶ್ ಸೋಮವಾರ ಪಟ್ಟಣದ ಪುರಸಭಾ ಸಭಾಂಗಣದಲ್ಲಿ 2024-25ನೇ ಸಾಲಿನ ಪುರಸಭಾ ಆಯವ್ಯಯ ಮಂಡನೆ ಮಾಡಿದರು.

    ಮುಖ್ಯಾಧಿಕಾರಿ ಪಿ.ಸುರೇಶ್ ಮಾತನಾಡಿ, ಪುರಸಭೆಗೆ ವಿವಿಧ ಮೂಲಗಳಿಂದ 16.83 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಇದರಲ್ಲಿ 16.13 ಕೋಟಿ ರೂ. ಖರ್ಚು ಆಗಲಿದ್ದು, 69.64 ಲಕ್ಷ ರೂ. ಉಳಿತಾಯವಾಗಲಿದೆ ಎಂದು ತಿಳಿಸಿದರು.

    ಆಸ್ತಿ ತೆರಿಗೆಯಿಂದ 1.75 ಲಕ್ಷ ರೂ., ನೀರಿನ ತೆರಿಗೆಯಿಂದ 45.5 ಲಕ್ಷ ರೂ., ಮಳಿಗೆಗಳ ಬಾಡಿಗೆಯಿಂದ 3.10 ಲಕ್ಷ ರೂ., ಉದ್ದಿಮೆ ಪರವಾನಗಿಯಿಂದ 12 ಲಕ್ಷ ರೂ., ನೆಲ ಬಾಡಿಗೆಯಿಂದ 28.05 ಲಕ್ಷ ರೂ., ಇತರ ಮೂಲಗಳಿಂದ 23.50 ಲಕ್ಷ ರೂ. ಆದಾಯ ಬರಲಿದೆ ಎಂದರು.
    ಸರ್ಕಾರದಿಂದ 15ನೇ ಹಣಕಾಸು ಅನುದಾನ 96 ಲಕ್ಷ ರೂ., ಎಸ್‌ಎಸ್‌ಸಿ ಅನುದಾನ 34 ಲಕ್ಷ ರೂ., ಸೆಸ್ಕ್ ಅನುದಾನ 1.90 ಕೋಟಿ ರೂ., ವೇತನ ಅನುದಾನ 2.41 ಕೋಟಿ ರೂ., ಕುಡಿಯುವ ನೀರಿನ ಅನುದಾನ 3 ಲಕ್ಷ ರೂ. ಬರುವ ನಿರೀಕ್ಷೆ ಇದೆ ಎಂದರು.

    ಪುರಸಭಾ ಕಚೇರಿಯ ನಿರ್ವಹಣೆಯ ವೆಚ್ಚ 57.85 ಲಕ್ಷ ರೂ., ರಸ್ತೆಗಳಿಗೆ ಕಲ್ಲು ಹಾಸು ಅಳವಡಿಸಲು ಹಾಗೂ ರಸ್ತೆ ಬದಿಯ ಚರಂಡಿ ನಿರ್ವಹಣೆಗೆ 46 ಲಕ್ಷ ರೂ.. ಬೀದಿ ದೀಪ ನಿರ್ವಹಣೆಗೆ 26 ಲಕ್ಷ ರೂ., ಸದಸ್ಯರ ಅಧ್ಯಯನ ಪ್ರವಾಸಕ್ಕೆ 5 ಲಕ್ಷ ರೂ., ವಾಹನಗಳ ಇಂಧನ ಹಾಗೂ ದುರಸ್ತಿ ಮತ್ತು ನಿರ್ವಹಣೆಗೆ 12.20 ಲಕ್ಷ ರೂ., ಹೊರಗುತ್ತಿಗೆ ನೌಕರರು ಹಾಗೂ ನೇರ ಪಾವತಿ ನೌಕರರ ವೇತನ 65 ಲಕ್ಷ ರೂ., ಪೌರಕಾರ್ಮಿಕರ ಬೆಳಗ್ಗಿನ ಉಪಾಹಾರಕ್ಕೆ 7 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿಸಿದರು.

    ನೀರು ಸರಬರಾಜು ವಿಭಾಗದ ದುರಸ್ತಿ ಮತ್ತು ನಿರ್ವಹಣೆಗೆ 30 ಲಕ್ಷ ರೂ., ಬ್ಲೀಚಿಂಗ್ ಪೌಡರ್ ಸರಬರಾಜಿಗೆ 1.5 ಲಕ್ಷ ರೂ., ಹೊರಗುತ್ತಿಗೆ ನೌಕರರ ವೇತನ ಪಾವತಿಗೆ 30 ಲಕ್ಷ ರೂ., ಕಚೇರಿ ಯಂತ್ರೋಪಕರಣ ಹಾಗೂ ಕಂಪ್ಯೂಟರ್ ನಿರ್ವಹಣೆಗೆ 5 ಲಕ್ಷ ರೂ., ರಸ್ತೆ ನಿರ್ಮಾಣಕ್ಕೆ 1.50 ಕೋಟಿ ರೂ., ಚರಂಡಿ ನಿರ್ಮಾಣಕ್ಕೆ ಒಂದು ಕೋಟಿ ರೂ., ಚರಂಡಿ ನಿರ್ಮಾಣಕ್ಕೆ 10 ಲಕ್ಷ ರೂ., ನಗರದ ಇತರ ಅಭಿವೃದ್ಧಿಗೆ 15 ಲಕ್ಷ ರೂ., ಘನತ್ಯಾಜ್ಯ ಘಟಕದ ಅಭಿವೃದ್ಧಿಗೆ 95 ಲಕ್ಷ ರೂ., ನೀರು ಸರಬರಾಜು ವಿಭಾಗಕ್ಕೆ 50 ಲಕ್ಷ ರೂ., ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರೂ. ವ್ಯಯವಾಗಲಿದೆ ಎಂದು ತಿಳಿಸಿದರು.

    ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಆಸಿಫ್ ಇಕ್ಬಾಲ್, ರಾಜು, ಐಡಿಯಾ ವೆಂಕಟೇಶ್, ಪುಟ್ಟಬಸವ, ಪ್ರೇಮ್ ಸಾಗರ್, ನಂಜಪ್ಪ, ಲೋಕೇಶ್, ಶಿವಮ್ಮ, ದರ್ಶಿನಿ, ನಂದಿನಿ, ಕವಿತಾ, ಸರೋಜಮ್ಮ, ಸುಹಾಸಿನಿ, ಅನಿತಾ, ಶಾಂತಮ್ಮ, ನಾಗಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts