More

    ರೈತರ ಖಾತೆಗೆ 65.40 ಕೋಟಿ ರೂ. ಜಮೆ

    ಹಾನಗಲ್ಲ: ಕಿಸಾನ್ ಸಮ್ಮಾನ ಯೋಜನೆಯಡಿ ಹಾವೇರಿ ಜಿಲ್ಲೆಯ 1.97 ಲಕ್ಷ ಹಾಗೂ ಗದಗ ಜಿಲ್ಲೆಯ 1.30 ಲಕ್ಷ ರೈತರು ಸೇರಿದಂತೆ ಒಟ್ಟು 3.27 ಲಕ್ಷ ರೈತರಿಗೆ 65.40 ಕೋಟಿ ರೂ. ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಹಾನಗಲ್ಲ ತಾಲೂಕಿನ 34580 ರೈತರು 6.91 ಕೋಟಿ ರೂ ಗಳನ್ನು ಈ ಯೋಜನೆಯಲ್ಲಿ ಪಡೆದಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ಶುಕ್ರವಾರ ಪಟ್ಟಣದ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ಅಟಲ್​ಜೀ ಸ್ಮರಣೆ ಹಾಗೂ ಕಿಸಾನ್ ಸಮ್ಮಾನ್ ದಿನಾಚರಣೆ ಕಾರ್ಯಕ್ರಮದಲ್ಲಿ ಅಟಲ್​ಜೀ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

    ಕೇಂದ್ರ ಸರ್ಕಾರ ರೈತರ ಪರವಾಗಿ ಮೂರು ವಿಧೇಯಕಗಳನ್ನು ತಂದಿದ್ದು, ಈಗಲೂ ಕೂಡ ರೈತರಲ್ಲಿ ಶಂಕೆ ಇದ್ದರೆ ಕೂಲಂಕಶವಾಗಿ ಸಕಾರಾತ್ಮಕ ಚರ್ಚೆಗೆ ಬಿಜೆಪಿ ಸಿದ್ಧವಿದೆ. ಕೇಂದ್ರ ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

    ವಿರೋಧ ಪಕ್ಷದವರು ಮಸೂದೆಯ ಕುರಿತು ಶಂಕೆ ಇದ್ದರೆ ಅಪಪ್ರಚಾರ ಮಾಡುವುದನ್ನು ಬಿಟ್ಟು ತರ್ಕಬದ್ಧವಾಗಿ ಸಮಸ್ಯೆಗಳ ಕುರಿತು ರ್ಚಚಿಸಬಹುದು. ರೈತರ ವಿಷಯದಲ್ಲಿ ವಿರೋಧ ಪಕ್ಷಗಳು ರಾಜಕಾರಣ ಮಾಡಬಾರದು. ರೈತರ ಹಿತಾಸಕ್ತಿ ಕಾಪಾಡುವ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ರೈತ ಉಳಿದರೆ ದೇಶ ಉಳಿಯುತ್ತದೆ. ರೈತರು ಮಸೂದೆಗಳನ್ನು ಕೂಲಂಕಶವಾಗಿ ತಿಳಿದುಕೊಳ್ಳಬೇಕು. ತಪ್ಪುಗಳಿದ್ದರೆ ಸರಿಪಡಿಸಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಮನವಿ ಮಾಡಿದರು.

    ಪ್ರಗತಿಪರ ರೈತರಾದ ಶಿವಾಜಪ್ಪ ಏಸಕ್ಕನವರ, ಯಲ್ಲಪ್ಪ ಬಂಕಾಪೂರ, ಚನ್ನಬಸಪ್ಪ ಅಕ್ಕಿವಳ್ಳಿ, ಈಶ್ವರ ನಿಂಗೋಜಿ ಹಾಗೂ ಬಸವಣ್ಣೆಪ್ಪ ಬೆಂಚಳ್ಳಿ ಅವರನ್ನು ಸನ್ಮಾನಿಸಲಾಯಿತು.

    ಬಿಜೆಪಿ ಮಂಡಳ ಅಧ್ಯಕ್ಷ ರಾಜು ಗೌಳಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಮುಖಂಡರಾದ ಕೃಷ್ಣ ಈಳಿಗೇರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಭೋಜರಾಜ ಕರೂದಿ, ರಾಜಣ್ಣ ಅಂಕಸಖಾನಿ, ಉದಯ ವಿರುಪಣ್ಣನವರ, ನಿಂಗಪ್ಪ ಗೊಬ್ಬೇರ, ಚಂದ್ರಪ್ಪ ಜಾಲಗಾರ, ಚಂದ್ರು ಉಗ್ರಣ್ಣನವರ, ಶಿವಲಿಂಗಪ್ಪ ತಲ್ಲೂರ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts