More

    ಕೋಲಾರ ಜಿಲ್ಲೆಯಲ್ಲಿ ಕರೊನಾಕ್ಕೆ ಎರಡು ಬಲಿ ; 63 ಮಂದಿಗೆ ಸೋಂಕು ದೃಢ

    ಕೋಲಾರ:ಜಿಲ್ಲೆಯಲ್ಲಿ ಭಾನುವಾರ ಕರೊನಾಗೆ ಇಬ್ಬರು ಬಲಿಯಾದರೆ 63 ಮಂದಿಗೆ ಸೋಂಕು ದೃಢಪಟ್ಟಿದೆ. 106 ಮಂದಿ ಸೋಂಕುಮುಕ್ತರಾಗಿದ್ದಾರೆ.

    ಕೆಜಿಎಫ್ ಹಾಗೂ ಶ್ರೀನಿವಾಸಪುರದಲ್ಲಿ ತಲಾ ಒಬ್ಬರು ಕರೊನಾಗೆ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಒಟ್ಟು ಸಂಖ್ಯೆ 135ಕ್ಕೆ ಏರಿಕೆಯಾಗಿದೆ. ಕೋಲಾರದಲ್ಲಿ 14, ಮಾಲೂರು 23, ಬಂಗಾರಪೇಟೆ 3, ಕೆಜಿಎಫ್ 12, ಮುಳಬಾಗಿಲು 6, ಶ್ರೀನಿವಾಸಪುರ 5 ಸೇರಿ ಒಟ್ಟು 63 ಮಂದಿಗೆ ಕರೊನಾ ದೃಢಪಟ್ಟಿದೆ.

    ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 378 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 189 ಮಂದಿ ಮೇಲೆ ನಿಗಾ ಇಡಲಾಗಿದೆ. ವಿಷಮ ಶೀತಜ್ವರದಿಂದ ಬಳಲುತ್ತಿದ್ದ 51 ಮಂದಿಗೆ ಸೋಂಕು ದೃಢಪಟ್ಟಿದೆ. 10 ಮಂದಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ವ್ಯಾಪಿಸಿದೆ. ಇಬ್ಬರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. 26 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದರೆ, ಉಳಿದವರು ನಿಗದಿತ ಆಸ್ಪತ್ರೆ, ಖಾಸಗಿ ಹಾಗೂ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿದ್ದಾರೆ. ಭಾನುವಾರ 982 ಮಾದರಿ ಪರೀಕ್ಷೆಗೆ ಪಡೆಯಲಾಗಿದೆ. 1741 ಮಾದರಿ ಫಲಿತಾಂಶ ನಿರೀಕ್ಷೆಯಲ್ಲಿದೆ.

    106 ಮಂದಿ ಗುಣ: ಕೋಲಾರದಲ್ಲಿ 36, ಮಾಲೂರಿನಲ್ಲಿ 23, ಬಂಗಾರಪೇಟೆ 3, ಕೆಜಿಎಫ್ 8, ಮುಳಬಾಗಿಲು 31, ಶ್ರೀನಿವಾಸಪುರದಲ್ಲಿ 5 ಸೇರಿ ಒಟ್ಟು 106 ಮಂದಿ ಗುಣಮುಖರಾಗಿದ್ದಾರೆ.

    ಸಕ್ರಿಯ ಪ್ರಕರಣ: ಕಳೆದ ಆರು ತಿಂಗಳಿಂದ ಸೋಂಕಿತರರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಜಿಲ್ಲಾ ಕೇಂದ್ರ ಕೋಲಾರದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖವಾಗಿದೆ. 2956 ಸೋಂಕಿತರ ಪೈಕಿ 2643 ಮಂದಿ ಗುಣಮುಖರಾಗಿದ್ದು, 39 ಮಂದಿ ಮೃತಪಟ್ಟಿದ್ದಾರೆ. 274 ಸಕ್ರಿಯ ಪ್ರಕರಣಗಳಿವೆ.
    ಸೋಂಕಿತರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ಮಾಲೂರು ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೇರಿದೆ. 1467 ಸೋಂಕಿತರಲ್ಲಿ 1149 ಮಂದಿ ಗುಣಹೊಂದಿದರೆ 13 ಮಂದಿ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 305 ಇದೆ.

    ಕೆಜಿಎಫ್‌ನಲ್ಲಿ 1083ರಲ್ಲಿ 880 ಮಂದಿ ಗುಣಹೊಂದಿದರೆ, 25 ಮಂದಿ ಮೃತಪಟ್ಟಿದ್ದಾರೆ. 178 ಸಕ್ರಿಯ ಪ್ರಕರಣಗಳಿವೆ. ಬಂಗಾರಪೇಟೆಯಲ್ಲಿ 731 ಸೋಂಕಿತರಲ್ಲಿ 527 ಮಂದಿ ಹುಷಾರಾದರೆ, 20 ಮಂದಿ ಮೃತಪಟ್ಟಿದ್ದಾರೆ. 184 ಸಕ್ರಿಯ ಪ್ರಕರಣಗಳಿವೆ. ಮುಳಬಾಗಲಿನಲ್ಲಿ 952 ಸೋಂಕಿತರಲ್ಲಿ 670 ಮಂದಿ ಗುಣಮುಖರಾದರೆ 254 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 28 ಮಂದಿ ಬಲಿಯಾಗಿದ್ದಾರೆ. ಶ್ರೀನಿವಾಸಪುರದಲ್ಲಿ 684 ಸೋಂಕಿತರಲ್ಲಿ 563 ಮಂದಿ ಗುಣಹೊಂದಿದ್ದಾರೆ. 111 ಸಕ್ರಿಯ ಪ್ರಕರಣಗಳಿವೆ. 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7873ಕ್ಕೆ ಏರಿಕೆಯಾಗಿದ್ದು, 6432 ಮಂದಿ ಗುಣಹೊಂದಿದ್ದಾರೆ. 1306 ಸಕ್ರಿಯ ಪ್ರಕರಣಗಳಿವೆ. 37 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts