More

    ನಿಜಾಮುದ್ದೀನ್ ನಂಟು ಹೊಂದಿದ್ದವರೂ ಸೇರಿ 63 ಜನ ಕ್ವಾರಂಟೈನ್‌ನಿಂದ ಮುಕ್ತ; ಫುಡ್‌ಕಿಟ್ ಗಿಫ್ಟ್ ಕೊಟ್ಟು ಬೀಳ್ಕೊಡುಗೆ

    ಹುಬ್ಬಳ್ಳಿ: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಹೋಟೆಲ್ ಹಾಗೂ ವಸತಿಗೃಹಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಿದ್ದ 63 ಜನರನ್ನು ಇಂದು ಸರ್ಕಾರಿ ಕ್ವಾರಂಟೈನ್‌ನಿಂದ ಮುಕ್ತಗೊಳಿಸಿ ಬೀಳ್ಕೊಡಲಾಯಿತು.
    ಇವರನ್ನು 14 ದಿನಗಳ ಕಾಲ ನಿಗಾದಲ್ಲಿ ಇರಿಸಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ನೆಗೆಟಿವ್ ಬಂದವರನ್ನು ಬಿಡುಗಡೆ ಮಾಡಲಾಗಿದೆ. ಕೆಲವರು ಸ್ವಇಚ್ಛೆಯಿಂದ ಕ್ವಾರಂಟೈನ್‌ಗೆ ಒಳಗಾಗಿದ್ದರು.

    ಬಿಡುಗಡೆ ಸಂದರ್ಭದಲ್ಲಿ ಇವರೆಲ್ಲರಿಗೆ ಕಾಶಿನಾಥ ಚಾಟ್ನಾ ಅವರು ನೀಡಿರುವ ಸಪ್ನಾ ಬುಕ್ ಹೌಸ್‌ನ ಗಿಫ್ಟ್ೃ ವೋಚರ್, ಸಂಜಯ್ ಗೋಡಾವತ್‌ನ ಸ್ಟಾರ್ ಏರ್‌ಲೈನ್ ವತಿಯಿಂದ ಫುಡ್ ಕಿಟ್ ನೀಡಲಾಯಿತು ಎಂದು ಹುಬ್ಬಳ್ಳಿ ತಹಶೀಲದಾರ ಶಶಿಧರ ಮಾಡ್ಯಾಳ ತಿಳಿಸಿದರು.

    ಕ್ವಾರಂಟೈನ್‌ನಿಂದ ಬಿಡುಗಡೆಗೊಂಡ ನಯೀಮುದ್ದೀನ್ ಶೇಖ್ ಮಾತನಾಡಿ, ‘‘ಮಾ. 14ರಂದು ನಿಜಾಮುದ್ದಿನ್‌ಗೆ ಹಾಗೂ ಅಜ್ಮೇರ್‌ಗೆ ಭೇಟಿ ನೀಡಿ ಬಂದ ಹಿನ್ನಲೆಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಸರ್ಕಾರ ನಮ್ಮ ಆರೋಗ್ಯ ಹಾಗೂ ಕುಟುಂಬದವರ ರಕ್ಷಣೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ನಮ್ಮ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದರಿಂದ ಬಿಡುಗಡೆ ಮಾಡಲಾಗಿದೆ. ಕ್ವಾರಂಟೈನ್‌ನಲ್ಲಿ ಇದ್ದ ನಮಗೆ ಮನೆಗಿಂತ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗಿದೆ. ಪ್ರತಿದಿನ ಉತ್ತಮ ಸಸ್ಯಾಹಾರದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ವೈದ್ಯರು ಪ್ರತಿದಿನ ನಮ್ಮ ಥರ್ಮಲ್ ಸ್ಕ್ರೀನಿಂಗ್ ನಡೆಸಿ ತಪಾಸಣೆ ನಡೆಸುತ್ತಿದ್ದರು’’ ಎಂದು ಹೇಳಿದರು.

    ಕ್ವಾರಂಟೈನ್‌ನಿಂದ ಬಿಡುಗಡೆಗೊಂಡ ಸೈಯದ್ ಅಸ್ಲಂ ಬಾಂದರ್ ಮಾತನಾಡಿ, ‘‘ದೆಹಲಿ ಪ್ರಯಾಣ ಹಿನ್ನೆಲೆಯಲ್ಲಿ ನಮ್ಮನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಹೋಟೆಲ್ನಲ್ಲಿ ಉತ್ತಮ ರೀತಿ ವ್ಯವಸ್ಥೆ ಕಲ್ಪಿಸಲಾಗಿದ್ದು ವೈದ್ಯಕೀಯ ತಂಡದವರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ’’ ಎಂದು ಹೇಳಿದರು.

     ಕ್ವಾರಂಟೈನ್‌ಮುಕ್ತ ಇನ್ನೊಬ್ಬ ವ್ಯಕ್ತಿ, ಮದ್ರಾಸ್ ರೆಜಿಮೆಂಟ್ ಸೈನಿಕ ರಫೀಕ್ ಸಾಬ್ ಮಾತನಾಡಿ, ‘‘ನಾನೂ ದೆಹಲಿಯಿಂದ ಬಂದಿದ್ದೆ. ಈಗ ಕರೊನಾ ನೆಗೆಟಿವ್ ಬಂದಿರುವುದು ಖುಷಿ ತಂದಿದೆ’’ ಎಂದು ಹೇಳಿದರು.

    ಕರೊನಾ ವೈರಸ್​ ಸಂಕಷ್ಟ; ಕೋಡಿಮಠದ ಶ್ರೀಗಳು ಹೇಳಿದ್ದಾರೆ ಭವಿಷ್ಯ…ಕರ್ನಾಟಕದ ಕೆಲ ಸಚಿವರಿಗೆ ಕಾದಿದ್ಯಂತೆ ಕಂಟಕ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts