More

    ಖಾಲಿ ಜಾಗಗಳೇ ಇವರ ಟಾರ್ಗೆಟ್​; 600 ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಸಿದ ಭೂಗಳ್ಳರ ಜಾಲ ಭೇದಿಸಿದ ಸಿಐಡಿ

    ಬೆಂಗಳೂರು: ರಾಜಧಾನಿ ಅಥವಾ ಸುತ್ತಮುತ್ತ ನಿಮ್ಮ ಖಾಲಿ ಜಾಗ ಇದ್ದು ದೀರ್ಘ ಸಮಯದಿಂದ ಆ ಕಡೆ ಹೋಗಿರದಿದ್ದರೆ ಒಮ್ಮೆ ನೋಡಿಕೊಂಡು ಬನ್ನಿ. ಏಕೆಂದರೆ ವಾರಸುದಾರರು ಸುಳಿಯದ ಖಾಲಿ ಜಾಗಗಳನ್ನು ಗುರುತಿಸಿ ಅವುಗಳನ್ನು ಕಬಳಿಸುವ ಭೂಗಳ್ಳರ ಜಾಲವೊಂದಿದೆ. ಹೀಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಿರುವ ಭೂಗಳ್ಳರ ಜಾಲವೊಂದನ್ನು ಸಿಐಡಿ ಪೊಲೀಸರು ಭೇದಿಸಿದ್ದಾರೆ.

    ಕಂಪನಿಯೊಂದರ ಜಾಗವನ್ನು ಕಬಳಿಸಲು ಯತ್ನಿಸಿದ್ದ ಪ್ರಕರಣವನ್ನು ಭೇದಿಸಿರುವ ಸಿಐಡಿ ಪೊಲೀಸರು, ಭೂಗಳ್ಳರ ಜತೆ ಕೈಜೋಡಿಸಿದ್ದ ನಾಲ್ವರು ವಕೀಲರನ್ನೂ ಬಂಧಿಸಿದ್ದಾರೆ. ಯಶವಂತಪುರ ಸಮೀಪದ ಷಾ ಹರೀಲಾಲ್ ಭೀಕಾಬಾಯಿ ಕಂಪನಿಯ ಆಸ್ತಿ ಕಬಳಿಕೆಗೆ ಭೂಗಳ್ಳರು ಯತ್ನಿಸಿದ್ದ ಹಿನ್ನೆಲೆಯಲ್ಲಿ ಧನಲಕ್ಷ್ಮೀ ಎಂಬವರು ಕಳೆದ ಡಿಸೆಂಬರ್​ನಲ್ಲಿ ಹಲಸೂರು ಗೇಟ್​ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ, ಭೂಗಳ್ಳರ ಜಾಲವನ್ನು ಭೇದಿಸಿದೆ.

    ಇದನ್ನೂ ಓದಿ: ಪೊಲೀಸರಿನ್ನು ಕ್ರಿಮಿನಲ್‌ಗಳ ಜತೆ ಪಾರ್ಟಿಗೆ ಹಾಜರಾಗುವಂತಿಲ್ಲ; ರೌಡಿ-ಗೂಂಡಾಗಳ ಸಮಾರಂಭಗಳಲ್ಲಿ ಭಾಗಿ ಆಗುವಂತಿಲ್ಲ

    ಕಬಳಿಕೆ ಹೇಗೆ?: ಆರೋಪಿಗಳು ಮೊದಲು ಬೆಂಗಳೂರಿನ ಸುತ್ತಮುತ್ತ ಖಾಲಿ ಇರುವ ನಿವೇಶನಗಳನ್ನು ಗುರುತ್ತಿಸುತ್ತಿದ್ದರು. ಅದನ್ನು ವಾರಸುದಾರರು ಬಳಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನೂ ತಿಳಿದುಕೊಳ್ಳುತ್ತಿದ್ದರು. ಅಂಥ ಜಾಗಗಳನ್ನು ಗುರುತಿಸಿಕೊಂಡಿರುತ್ತಿದ್ದ ಭೂಗಳ್ಳರು ಆ ಪಟ್ಟಿಯನ್ನು ಈ ವಕೀಲರಿಗೆ ಕೊಡುತ್ತಿದ್ದರು. ವಕೀಲರು ಆ ಆಸ್ತಿ ಮಾಲೀಕರ ಹೆಸರನ್ನು ಮುಚ್ಚಿಟ್ಟು ನಕಲಿ ಕಕ್ಷಿದಾರ ಹಾಗೂ ಪ್ರತಿವಾದಿಗಳನ್ನು ಸೃಷ್ಟಿಸುತ್ತಿದ್ದರು. ನಂತರ ನ್ಯಾಯಾಲಯದಲ್ಲಿ ದಾವೆ ಹೂಡುತ್ತಿದ್ದರು. ನ್ಯಾಯಾಲಯದಲ್ಲಿ ನಕಲಿ ದಾಖಲೆಗಳನ್ನೇ ಅಸಲಿ ಎಂದು ವಾದಿಸಿ, ಈ ಭೂಗಳ್ಳರು ರಾಜಿ ಡಿಕ್ರಿ ಪಡೆದು ಸಂಧಾನದ ಮೂಲಕ ಜಾಗ ಕಬಳಿಸಿದರೂ ಅಸಲಿ ಆಸ್ತಿದಾರರಿಗೆ ವಿಷಯವೇ ಗೊತ್ತಾಗುತ್ತಿರಲಿಲ್ಲ. ಬಳಿಕ ಕೋಟ್ಯಂತರ ರೂಪಾಯಿಗೆ ಬೇರೆಯವರಿಗೆ ಅದೇ ಆಸ್ತಿಯನ್ನ ಮಾರಾಟ ಮಾಡುತ್ತಿದ್ದರು ಎಂಬುದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.

    ಆರೋಪಿಗಳು ಈ ರೀತಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವರಿಗೆ ವಂಚನೆ ಮಾಡಿರುವ ಶಂಕೆ ಉಂಟಾಗಿದೆ. 116 ನಕಲಿ ರಾಜಿ ಡಿಕ್ರಿ ಸೃಷ್ಟಿಸಿ 600 ಕೋಟಿ ರೂ. ಆಸ್ತಿ ಕಬಳಿಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಬಂಧಿತ ಭೂಗಳ್ಳರ ಹೆಸರನ್ನು ಗೌಪ್ಯವಾಗಿಟ್ಟು ಸಿಐಡಿ ತನಿಖೆಯನ್ನು ಮುಂದುವರಿಸಿದೆ.

    ನನ್ನ ಪತಿ ಹಲವು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದಾರೆ; ಪ್ರಾಧ್ಯಾಪಕನ ಕಾಮಪುರಾಣವನ್ನು ಬಿಚ್ಚಿಟ್ಟ ಪತ್ನಿ

    ನಮಗದು ಚಿನ್ನಕ್ಕಿಂತಲೂ ಹೆಚ್ಚು; ಒಲಿಂಪಿಕ್ಸ್​ ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಯ ಗ್ರಾಮಸ್ಥರು ಹೀಗಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts