More

    60 ವರ್ಷಗಳಿಂದ ಮಣ್ಣಿನ ಗಣೇಶ ಮೂರ್ತಿ ತಯಾರಿಕೆ

    ಅಳವಂಡಿ: ಇತ್ತೀಚಿನ ವರ್ಷಗಳಲ್ಲಿ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ಜೋರಿನಿಂದ ನಡೆದಿದೆ. ಇವುಗಳ ಪೈಪೋಟಿಯಲ್ಲಿ ಅಳವಿನಂಚಿನಲ್ಲಿರುವ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿ ಕಳೆದ 60 ವರ್ಷಗಳಿಂದ ಮಾರಾಟ ಮಾಡುತ್ತಿರುವ ಅಪರೂಪದ ಅವಿಭಕ್ತ ಕುಟುಂಬ ಅಳವಂಡಿಯಲ್ಲಿದೆ.

    ಇದನ್ನೂ ಓದಿ: ಮಣ್ಣಿನ, ಬೆಲ್ಲದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪ್ರೋತ್ಸಾಹ

    ಗ್ರಾಮದ ಶಿವನಗರದಲ್ಲಿ ವಾಸವಾಗಿರುವ 73 ವರ್ಷದ ಬಸವಣ್ಣೆಪ್ಪ ಲಿಂಗಪ್ಪ ಮೆಳ್ಳಿ ಎಂಬ ಕಲಾವಿದ ಮಣ್ಣನ ಗಣಪತಿ ತಯಾರಿಸುತ್ತಿದ್ದಾನೆ. ಕುಟುಂಬದ ಬೆಂಬಲ ಅಗಾಧವಾಗಿದೆ. ಪ್ರಾಥಮಿಕ ಶಿಕ್ಷಣ ಕಲಿಕೆಯಲ್ಲಿ ಮೂರ್ತಿ ತಯಾರಿಸುವುದೆ ಗುರಿಯಾಗಿಸಿಕೊಂಡು ದಣಿವರೆಯದೆ ಇಲ್ಲಿವರೆಗೂ ಮೂರ್ತಿ ತಯಾರಿಸುತ್ತಿದ್ದಾರೆ.

    ಗಣೇಶ ಮೂರ್ತಿ ತಯಾರಿಕೆಗೆ ಹುತ್ತದ ಮಣ್ಣು ಹಾಗೂ ತುಂಗಭದ್ರಾ ನದಿ ಪಾತ್ರದಲ್ಲಿ ದೊರೆಯುವ ಜೇಡಿ ಮಣ್ಣನ್ನು ಬಳಸುತ್ತರೆ. ಮಣ್ಣನ್ನು ಸುಮಾರು ನಾಲ್ಕೈದು ದಿನಗಳ ಕಾಲ ಹತ್ತಿಯನ್ನು ಬೆರೆಸಿ ನೆನೆ ಇಟ್ಟು ನಂತರ ಹದಗೊಳಿಸಿ ಮೂರ್ತಿ ತಯಾರಿಸುತ್ತಾರೆ. ಮೂರ್ತಿ ತಯಾರಿಕೆಗೆ ಪತ್ನಿ ಚನ್ನಮ್ಮ ಹಾಗೂ ಮಗಳು ಗಂಗಮ್ಮ ಸಾಥ ನೀಡುತ್ತಾರೆ.

    ವಿಭಿನ್ನ ರೂಪದ ಗಣಪತಿಯನ್ನು ಹಾಗೂ ಭಕ್ತರು ಬೇಡಿಕೆಯ ಗಣಪತಿಯನ್ನು ತಯಾರಿಸುವಲ್ಲಿ ನಿಪುಣರಾಗಿದ್ದಾರೆ. ಸಿಂಹಧಾರಿ ಗಣಪ, ರಾಮ ಲಕ್ಷ್ಮಣ ಅವತಾರ, ಕಮಲಧಾರಿ, ಪುನೀತ ಅವತಾರಿ, ಮೂಷಕ ಸವಾರಿ, ಶಿವ ಪಾರ್ವತಿ ರೂಪ, ಈಶ್ವರ ರೂಪ, ನಾಗಧಾರಿ, ಹನುಮ ಅವತಾರಿ, ರೈತನ ಅವತಾರಿ ಹಾಗೂ ಸಾರ್ವಜನಿಕರು ಬೇಡಿಕೆಗೆ ತಕ್ಕ ವಿವಿಧ ಅವತಾರಗಳಲ್ಲಿ ಗಣೇಶನ ಮೂರ್ತಿ ತಯಾರಿಸುತ್ತಾರೆ.

    ಪ್ರಾರಂಭದಲ್ಲಿ, ಗಣೇಶನ ಮೂರ್ತಿ ಒಂದು ರೂ. ಇಪ್ಪತೈದು ಪೈಸೆಯಿಂದ 5 ರೂ. ಗಳವರೆಗೂ ಮಾರಾಟವಾಗುತ್ತಿದ್ದವು. ಪ್ರಸ್ತುತ 250 ರಿಂದ 1,000 ರೂ. ಗಳವರೆಗೂ ಮಾರಾಟವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಪಿಓಪಿ ಗಣೇಶನ ಮೂರ್ತಿ ಭರಾಟಯ ಮಧ್ಯ ಮಣ್ಣಿನ ಗಣೇಶನ ಮೂರ್ತಿ ಮಾರಾಟ ಕಡಿಮೆಯಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ.

    ಇವರು ತಯಾರಿಸಿದ ಮೂರ್ತಿ ಖರಿದಿಗೆ ಅಳವಂಡಿ, ಕವಲೂರು, ನಿಲೋಗಿಪುರ, ಭೈರಾಪುರ, ಹಲವಾಗಲಿ, ಕಂಪ್ಲಿ, ರಘೂನಾಥನಹಳ್ಳಿ, ಹಟ್ಟಿ ಮುಂತಾದ ಗ್ರಾಮಗಳಿಂದ ಆಗಮಿಸುತ್ತಾರೆ. ಮೂರ್ತಿ ಮಾರಾಟದಿಂದ ಬರುವ ಲಾಭಾಂಶವನ್ನು ಗಣೇಶನ ವಿಸರ್ಜನೆ ದಿವಸ ಅನ್ನ ಸಂತರ್ಪಣೆಗೆ ಬಳಸುತ್ತಿದ್ದಾರೆ.

    ಇತ್ತೀಚಿನ ವರ್ಷಗಳಲ್ಲಿ ಪಿಓಪಿ ಗಣೇಶನ ಮೂರ್ತಿಗಳ ಬರಾಟೆ ಮಧ್ಯ, ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿ ತಯಾರಿಸುತ್ತಿರುವ ಬಸವಣ್ಣೆಪ್ಪನವರ ಕುಟುಂಬ ಲಾಭದ ವಿಚಾರ ಮಾಡದೇ ಕಲೆಯನ್ನು ಅನಾವರಣ ಮಾಡುತ್ತಿದ್ದಾರೆ. ಇಂತಹ ಎಲೆ ಮರೆಯಂತೆ ಕೆಲಸ ಮಾಡುವ ಕಲಾವಿದರನ್ನು ಸರಕಾರ ಹಾಗೂ ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹ ನೀಡಬೇಕು.
    ಪಕ್ರುದ್ದೀನ ಬುಕಿಟಗಾರ, ಗ್ರಾಮಸ್ಥ ಅಳವಂಡಿ,


    ವಿದ್ಯಾರ್ಥಿ ದೆಸೆಯಲ್ಲಿ ಪ್ರಾರಂಭವಾದ ಮೂರ್ತಿ ತಯಾರಿಕೆ ಇಲ್ಲಿಯವರೆಗೆ ಮುಂದುವರೆಸಿಕೊಂಡು ಬಂದಿದ್ದೇನೆ. ಆದರೆ ಇತ್ತೀಚಿಗೆ ಜನ ಚಾಲ್ತಿಯನ್ನು ನೋಡುತ್ತಿದ್ದಾರೆ. ಆದರೂ ಸಹ ನಾವು ಮಣ್ಣಿನ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಇದಕ್ಕೆ ಕುಟುಂಬದವರ ಸಹಕಾರ ಕೂಡ ಇದೆ. ಹೊಳೆಯ ಮಣ್ಣು ಹಾಗೂ ಹತ್ತಿಯಿಂದ ಜನರಿಗೆ ಬೇಕಾದ ಆಕಾರದಲ್ಲಿ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ.
    ಬಸವಣ್ಣೆಪ್ಪ ಮೆಳ್ಳಿ, ಗಣೇಶ ಮೂರ್ತಿ ತಯಾರಕ ಅಳವಂಡಿ.


    ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ಗಣೇಶನನ್ನು ಪ್ರತಿಷ್ಟಾಪಿಸಿ ಪೂಜಿಸಬೇಕು. ಪಿಓಪಿಯಂದ ತಯಾರಿಸಿದ ಗಣೇಶ ಪರಿಸರಕ್ಕೆ ಮಾರಕವಾಗಿದ್ದು ಎಲ್ಲರೂ ಮಣ್ಣಿನ ಗಣೇಶನನ್ನು ಪೂಜಿಸಬೇಕು ಹಾಗೂ ಗಣೇಶನನ್ನು ಪ್ರತಿಷ್ಟಾಪಿಸುವವರು ಪರವಾನಿಗೆ ಪಡೆದುಕೊಳ್ಳಬೇಕು.
    ಬಸವರಾಜ ಕೀರ್ದಿ ಪಿಡಿಓ ಗ್ರಾಪಂ ಅಳವಂಡಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts