More

    ಮಹಿಳೆಯ ಕಣ್ಣಿನಲ್ಲಿ 60 ಜೀವಂತ ಕೀಟ; ಸಾಕುಪ್ರಾಣಿಗಳೊಂದಿಗೆ ಆಟವಾಡುವಾಗ ಎಚ್ಚರ ಅಗತ್ಯ…

    ಚೀನಾ: ಕಣ್ಣುಗಳು ದೇಹದ ಅತ್ಯಂತ ಸೂಕ್ಷ್ಮವಾದ ಇಂದ್ರಿಯ. ಸಣ್ಣದೊಂದು ಸಮಸ್ಯೆ ಆದರು ತಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬಳು ಮಹಿಳೆ ಕಣ್ಣುಗಳಿಂದ ಜೀವಂತ ಕ್ರಿಮಿಗಳನ್ನು ವೈದ್ಯರು ಹೊರಗೆ ತೆಗೆದಿದ್ದಾರೆ. ಕೇಳಲು ವಿಚಿತ್ರ ಎನಿಸಬಹುದು. ನಿಜ.. ಈ ಘಟನೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸುವ ಘಟನೆ ಚೀನಾದ ಕುನ್‌ಮಿಂಗ್‌ನಲ್ಲಿ ನಡೆದಿದೆ.

    ಒಂದು ದಿನ ಮಹಿಳೆಗೆ ಕಣ್ಣಿನ ತುರಿಕೆ ಉಂಟಾಗಿದೆ. ತುರಿಕೆ ಸಮಯದಲ್ಲಿ ಕಣ್ಣಿನಿಂದ ಕೀಟ ಬಿದ್ದಿದೆ. ಬಳಿಕ ಆಕೆ ಗಾಬರಿಗೊಂಡು ಆಸ್ಪತ್ರೆಗೆ ಬಂದಿದ್ದಾಳೆ. ಮಹಿಳೆಯೊಬ್ಬರು ಕಣ್ಣುಗಳಲ್ಲಿ ತುರಿಕೆ ಎಂದು ವೈದ್ಯರ ಬಳಿ ಬಂದಿದ್ದಾಳೆ. ಪರೀಕ್ಷೆ ಮಾಡಿದ ವೈದ್ಯರಿಗೆ ಶಾಕ್​ ಆಗಿದೆ.

    ಅವಳ ಕಣ್ಣುರೆಪ್ಪೆಗಳು ಮತ್ತು ಅವಳ ಕಣ್ಣುಗಳ ನಡುವೆ ಕೀಟಗಳು ತೆವಳುತ್ತಿರುವುದು ಕಂಡುಬಂದಿದೆ. ಪರಿಸ್ಥಿತಿಯ ತುರ್ತು ಅರ್ಥಮಾಡಿಕೊಂಡ ವೈದ್ಯರು ತಕ್ಷಣವೇ ಆಪರೇಷನ್ ಮಾಡಿದರು. 60 ಕ್ಕೂ ಹೆಚ್ಚು  ಜೀವಂತ ಕೀಟಗಳನ್ನು ವೈದ್ಯರು ಮಹಿಳೆಯ ಕಣ್ಣಿನಿಂದ ತೆಗೆದು ಹಾಕಿದ್ದಾರೆ.

    ಇಂತಹ ವಿಚಿತ್ರ ಘಟನೆ ನಡೆದಿರುವುದು ಇದೇ ಮೊದಲಲ್ಲ. 2020 ರಲ್ಲಿ ಇದೇ ರೀತಿಯ ಘಟನೆ ಬೆಳಕಿಗೆ ಬಂದಿತ್ತು. 60 ವರ್ಷದ ಚೀನೀ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು ಮತ್ತು ಆಕೆಯ ಕಣ್ಣಿನಿಂದ 20 ಕ್ಕೂ ಹೆಚ್ಚು ಹುಳುಗಳನ್ನು ತೆಗೆಯಲಾಗಿತ್ತು.

    ವರದಿಯ ಪ್ರಕಾರ, ಆ ಕೀಟಗಳು ಸಾಮಾನ್ಯವಾಗಿ ನೊಣ ಕಡಿತದ ಮೂಲಕ ಹರಡುತ್ತವೆ. ಆದಾಗ್ಯೂ, ಮಹಿಳೆ ತನ್ನ ಸಾಕುಪ್ರಾಣಿಗಳೊಂದಿಗೆ ಆಟವಾಡಲು ಬಳಸುವಾಗ ಸೋಂಕಿತ ಬೆಕ್ಕುಗಳು ಅಥವಾ ನಾಯಿಳಿಂದ ಈ ಹುಳುಗಳು ಮಹಿಳೆಗೆ ಬಂದಿರಬಹುದು. ಪ್ರಾಣಿಗಳೊಂದಿಗೆ ಆಟವಾಡಿದ ನಂತರ ಕಣ್ಣು ಉಜ್ಜಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಮಹಿಳೆ ವೈದ್ಯರ ಬಳಿ ಹೇಳಿದ್ದಾಳೆ. ಆ ಸಮಯದಲ್ಲಿ ಈ ಸೋಂಕು ದೇಹದಲ್ಲಿ ಹರಡಿರಬೇಕು ಎನ್ನಲಾಗಿದೆ.

    ಅಪ್ಪ ಯಾರೆಂಬ ಪ್ರಶ್ನೆಗೆ ಖಡಕ್​ ಉತ್ತರ ಕೊಟ್ಟ ವಿನೋದ್​ ರಾಜ್​; ಲೀಲಾವತಿ ಕುರಿತು ಸಮಾಧಿಯಾಗಿದ್ದ ಸತ್ಯ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts