More

    ಮೈಸೂರಿನಲ್ಲಿ ಬಂಧಿತನಾದ ಅತ್ಯಾಚಾರ ಆರೋಪಿಗೆ ಕರೊನಾ; ಛತ್ತೀಸ್​ಗಢದ 60 ಪೊಲೀಸರಿಗೆ ಕ್ವಾರಂಟೈನ್​

    ಛತ್ತೀಸ್​ಗಡ​: ಇಲ್ಲಿನ ಬಿಲಾಸ್​ಪುರದಲ್ಲಿ ಅತ್ಯಾಚಾರ ಆರೋಪಿಗೆ ಕೊವಿಡ್​-19 ಸೋಂಕು ತಗುಲಿದ್ದು, ಇದರಿಂದಾಗಿ 60 ಪೊಲೀಸರಿಗೂ ಕರೊನಾ ಭೀತಿ ಆವರಿಸಿದೆ.

    ಈ ಆರೋಪಿಯನ್ನು ಕರ್ನಾಟಕದಿಂದ ಕರೆದುಕೊಂಡು ಹೋಗಲಾಗಿತ್ತು. ಸೋಮವಾರ ಇವನಲ್ಲಿ ಕರೊನಾ ದೃಢಪಟ್ಟಿದೆ. ಅವನನ್ನು ಬಂಧಿಸಿ ಕರೆದುಕೊಂಡು ಹೋದ ಪೊಲೀಸರೆಲ್ಲರೂ ಸದ್ಯ ಕ್ವಾರಂಟೈನ್​ ಆಗಿದ್ದಾರೆ. ಸಿವಿಲ್​ ಲೈನ್ಸ್​ ಪೊಲೀಸ್​ ಠಾಣೆ ಸೀಲ್​ಡೌನ್​ ಆಗಿದ್ದು, ಕಂಟೇನ್​ಮೆಂಟ್​ ಝೋನ್​ ಎಂದು ಘೋಷಿಸಲಾಗಿದೆ.

    ಯುವತಿಯೋರ್ವಳು ಈ 28 ವರ್ಷದ ಯುವಕನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿ, ಸಿವಿಲ್​ ಲೈನ್ಸ್​ ಠಾಣೆಗೆ ದೂರು ನೀಡಿದ್ದಳು. ಈ ವ್ಯಕ್ತಿ ಮೈಸೂರಿನವನು ಎಂದು ಗೊತ್ತಾಗಿ, ಅಲ್ಲಿಗೆ ಹೋಗಿ ಅವನನ್ನು ಬಂಧಿಸಿ ಜುಲೈ 4ರಂದು ಕರೆತಂದಿದ್ದರು. ಆರೋಪಿಯನ್ನು ಜೈಲಿಗೂ ಹಾಕಲಾಗಿತ್ತು.

    ಇಂದು ವರದಿ ಬಂದ ತಕ್ಷಣ ಆತನ ಪ್ರಾಥಮಿಕ ಸಂಪರ್ಕಕ್ಕೆ ಹೋದ ಎಲ್ಲ ಪೊಲೀಸ್​ ಸಿಬ್ಬಂದಿಗೂ ಕರೊನಾ ಆತಂಕ ಶುರುವಾಗಿದೆ. (ಏಜೆನ್ಸೀಸ್​)

    ಕರೊನಾ ಕೊನೆಯಾಗೋದು ಹೇಗೆ? ಲಸಿಕೆ ಸಿಗದಿದ್ದರೆ ಬೇರೆ ದಾರಿ ಏನಿದೆ? ಇಲ್ಲಿದೆ ಕುತೂಹಲಕಾರಿ ವಿಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts