More

    6 ತಂಡಗಳ ಮಹಿಳಾ ಐಪಿಎಲ್ ಆಯೋಜಿಸಲಿ ಎಂದ ಸ್ಟಾರ್ ಆಟಗಾರ್ತಿ

    ನವದೆಹಲಿ: ರಾಷ್ಟ್ರೀಯ ಮಹಿಳಾ ತಂಡದ ಬೆಂಚ್ ಸ್ಟ್ರೆಂತ್ ಸುಧಾರಿಸುವ ದೃಷ್ಟಿಯಿಂದ 6 ತಂಡಗಳ ಮಹಿಳಾ ಐಪಿಎಲ್ ಆಯೋಜಿಸಬೇಕು ಎಂದು ಸ್ಟಾರ್ ಆಟಗಾರ್ತಿ ಸ್ಮತಿ ಮಂದನಾ ಅಭಿಪ್ರಾಯ ಪಟ್ಟಿದ್ದಾರೆ. 25 ವರ್ಷದ ಸ್ಮತಿ ಮಂದನಾ, ಐಪಿಎಲ್ ಆರಂಭಗೊಂಡ ಬಳಿಕ ದೇಶೀಯ ಕ್ರಿಕೆಟ್‌ನಲ್ಲಿ ಪುರುಷರ ಕ್ರಿಕೆಟ್ ಸಾಕಷ್ಟು ಅಭಿವೃದ್ಧಿ ಹೊಂದಿತು. ಅದೇ ಮಾದರಿಯಲ್ಲಿ ಮಹಿಳಾ ಕ್ರಿಕೆಟ್ ಕೂಡ ಬೆಳೆಯಬೇಕಿದೆ ಎಂದರು. ಒಂದೇ ರಾಜ್ಯದಲ್ಲಿ ಪುರುಷರ ಹಾಗೂ ಮಹಿಳಾ ಎರಡೂ ತಂಡಗಳಿವೆ. ಪುರುಷರ ಐಪಿಎಲ್ ಆರಂಭಗೊಂಡಾಗಲೂ ಅದೇ ಸಂಖ್ಯೆಯಲ್ಲಿ ಈ ಎರಡು ತಂಡಗಳಿದ್ದವು. ಆದರೆ, ವರ್ಷ ಕಳೆದಂತೆ ಐಪಿಎಲ್‌ನಿಂದ ಉತ್ತೇಜನಗೊಂಡು ಪುರುಷರ ಕ್ರಿಕೆಟ್ ಉತ್ತಮ ಗುಣಮಟ್ಟದತ್ತ ಸಾಗುತ್ತಿದೆ ಎಂದು ಆರ್.ಅಶ್ವಿನ್ ಜತೆಗಿನ ಯೂಟೂಬ್ ಚಾನೆಲ್ ಸಂದರ್ಶನದಲ್ಲಿ ಮಂದನಾ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

    ಐಪಿಎಲ್ ಆರಂಭಗೊಂಡಾಗಲೇ ಮಹಿಳಾ ಲೀಗ್ ಆಯೋಜಿಸಿದ್ದರೆ, ಇಷ್ಟೊತ್ತಿಗೆ ಮತ್ತಷ್ಟು ಗುಣಮಟ್ಟದ ಆಟಗಾರ್ತಿಯರು ಬರುತ್ತಿದ್ದರು. 5 ರಿಂದ 6 ತಂಡ ರಚಿಸುವಷ್ಟು ಆಟಗಾರ್ತಿಯರು ಇದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ 8 ತಂಡಗಳನ್ನು ರಚಿಸಬಹುದು ಎಂದು ಸ್ಮತಿ ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 13 ವರ್ಷ ಪೂರೈಸಿದ ವಿರಾಟ್ ಕೊಹ್ಲಿ

    ಸದ್ಯ ಬಿಸಿಸಿಐ ಟ್ರೈಲ್‌ಬ್ಲೇಜರ್ಸ್‌, ಸೂಪರ್‌ನೊವಾಸ್ ಹಾಗೂ ವೆಲಾಸಿಟಿ ಹೆಸರಿನಲ್ಲಿ ಮೂರು ತಂಡಗಳೊಂದಿಗೆ ಮಹಿಳಾ ಟಿ20 ಚಾಲೆಂಜ್ ಆಯೋಜಿಸುತ್ತಾ ಬಂದಿದೆ.

    ಕಿರಿಯರ ವಿಶ್ವ ಅಥ್ಲೆಟಿಕ್ಸ್; ಭಾರತ ಮಿಶ್ರ ರಿಲೇ ತಂಡಕ್ಕೆ ಐತಿಹಾಸಿಕ ಕಂಚು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts