More

    ಉತ್ತರಾಖಂಡದಲ್ಲಿ 6 ತಿಂಗಳ ಮಗುವಿನ ವಿರುದ್ಧ ದಾಖಲಾಯಿತು ಪ್ರಕರಣ, ಆ ಮಗು ಮಾಡಿದ ತಪ್ಪು ಘನಘೋರ!

    ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ 6 ತಿಂಗಳ ಮಗು ಹಾಗೂ 3 ವರ್ಷದ ಮಗುವಿನ ವಿರುದ್ಧ ಪ್ರಕರಣ ದಾಖಲಾಗಿದೆ. ಕರೊನಾ ಸೋಂಕಿನಿಂದ ಬಳಲುತ್ತಿದ್ದು, ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಿದ್ದರೂ, ಅದನ್ನು ಉಲ್ಲಂಘಿಸಿ ಇತರರ ಜೀವಕ್ಕೆ ಅಪಾಯ ತಂದ ಆರೋಪವನ್ನು ಈ ಮಕ್ಕಳ ಮೇಲೆ ಹೊರಿಸಲಾಗಿದೆ.

    ಈ ವಿಷಯ ತಿಳಿಯುತ್ತಲೇ ಮಕ್ಕಳ ಪಾಲಕರು ಭಾರಿ ಆಕ್ರೋಶ ಹಾಗೂ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಆಶಿಶ್​ ಚೌಹಾಣ್​, ಮಕ್ಕಳ ಮೇಲೆ ಪ್ರಕರಣ ದಾಖಲಿಸಿದ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಲ್ಲದೆ, ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

    ಕೃಷಿ ಇಲಾಖೆಯ ಅಸಿಸ್ಟೆಂಟ್​ ಇಂಜಿನಿಯರ್​ ಗಿರೀಶ್​ ಸಿಂಗ್​ ರಾಣಾ ಅಮಾನತುಗೊಂಡ ಅಧಿಕಾರಿ. ಉತ್ತರಕಾಶಿ ಜಿಲ್ಲೆಯ ಚಿನ್ಯಾಲಿಸೂರ್​ ಎಂಬಲ್ಲಿ ಗಿರೀಶ್​ ಸಿಂಗ್​ ರಾಣಾ ಕೋವಿಡ್​ 19 ಮ್ಯಾಜಿಸ್ಟ್ರೇಟ್​ ಆಗಿ ನೇಮಕಗೊಂಡಿದ್ದರು. ಹೋಂ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಿದ್ದರೂ ಜಿಲ್ಲೆಗೆ ಮರಳುವವರ ಮೇಲೆ ನಿಗಾವಹಿಸುವುದು ಇವರ ಕರ್ತವ್ಯವಾಗಿತ್ತು.

    ಹರಿಯಾಣದಲ್ಲಿ ಕೆಲಸ ಹುಡುಕಿಕೊಂಡು ಹೋಗಿದ್ದ ಚಿನ್ಯಾಲಿಸೂರ್​ನ ಕುಟುಂಬವೊಂದರ ಇಬ್ಬರು ಮಕ್ಕಳು ಮತ್ತಿತರರು ಸೇರಿ ಒಟ್ಟು 47 ಮಂದಿ ಜಿಲ್ಲೆಗೆ ಮರಳಿದ್ದರು. ಇದನ್ನು ಗಮನಿಸಿದ್ದ ಗಿರೀಶ್​ ಸಿಂಗ್​ ರಾಣಾ, ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರಂಟೈನ್​ನಲ್ಲಿರುವಂತೆ ಈ ಕುಟುಂಬ ಸೇರಿ ಎಲ್ಲರಿಗೂ ಸೂಚಿಸಿದ್ದರು. ಆದರೆ ಇವರು ಯಾರೂ ಹೋಂ ಕ್ವಾರಂಟೈನ್​ ಸೂಚನೆಯನ್ನು ಪಾಲಿಸಿರಲಿಲ್ಲ. ಈ ವಿಷಯ ತಿಳಿದ ಅವರು, ತಪ್ಪಿತಸ್ಥರೆಲ್ಲರ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದ್ದರು.

    ಅದರಂತೆ ಗಿರೀಶ್​ ಸಿಂಗ್​ ರಾಣಾ ಅವರ ಜತೆಗಿದ್ದ ಅಧಿಕಾರಿಗಳು ಮಕ್ಕಳ ವಯಸ್ಸು ಕೇಳದೆ, ಆ ಮಕ್ಕಳನ್ನೂ ಸೇರಿಸಿಕೊಂಡು ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದು ಆಕ್ರೋಶಕ್ಕೆ ಕಾರಣವಾಗಿತ್ತು.

    ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದ್ದ ಪಾಕ್​ಗೆ ಬುದ್ಧಿ ಕಲಿಸಿದ ಟ್ವಿಟರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts