More

    6 ಸಾವಿರ ಕ್ವಿಂಟಾಲ್ ಪಡಿತರ ಅಕ್ಕಿ ನಾಪತ್ತೆ!


    ಯಾದಗಿರಿ: ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಸರಕಾರಿ ಗೋದಾಮಿನಲ್ಲೇ ನಾಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವ್ಯವಸ್ಥೆಯ ಮೇಲೆ ಅನುಮಾನದಿಂದ ನೋಡುವಂತಾಗಿದೆ.


    ಶಹಾಪುರ ನಗರದ ತಾಲೂಕು ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿದ್ದ 6077 ಕ್ವಿಂಟಾಲ್ ಪಡಿತರ ಅಕ್ಕಿ ಪಡಿತರ ಅಕ್ಕಿ ಮೂಟೆಗಳು ನಾಪತ್ತೆಯಾಗಿವೆ. ದರ ಮೌಲ್ಯ 2.6 ಕೋಟಿ ಎಂದು ಅಂದಾಜಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ದಾರರಿಗೆ ವಿತರಣೆಯಾಗಬೇಕಿದ್ದ ಈ ಅಕ್ಕಿ ಸಧ್ಯ ಕಾಳಸಂತೆಯಲ್ಲಿ ಮಾರಾಟವಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ.


    ಕಳೆದ ಜೂನ್ ತಿಂಗಳಿಂದ ನವೆಂಬರ್ ಎರಡನೇ ವಾರದ ಮಧ್ಯದ ಅವಧಿಯಲ್ಲಿ ಪಡಿತರ ಗೋಲ್ಮಾಲ್ ಆಗಿರುವ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಗೋದಾಮಿನಲ್ಲಿರುವ ಕಂಪ್ಯೂಟರ್ ತಂತ್ರಾಂಶದಲ್ಲಿ ತೋರಿಸಿದ ದಾಸ್ತಾನಿಗೂ, ಭೌತಿಕ ದಾಸ್ತಾನಿಗೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ. ಇದರಿಂದ ಶಾಕ್ ಆದ ಅಧಿಕಾರಿಗಳು ಇಷ್ಟೊಂದು ಪ್ರಮಾಣದಲ್ಲಿ ಅಕ್ಕಿ ಮೂಟೆಗಳು ಹೋಗಿದ್ದಾದರೂ ಎಲ್ಲಿಗೆ ಎಂದಯ ತಲೆ ಜಜ್ಜಿಗೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಪಡಿತರ ಅಕ್ಕಿ ಕಣ್ಮರೆಯಾಗುತ್ತಿರುವುದು ಹೋಸದೇನಲ್ಲ.


    ಈ ಹಿಂದಿನ ಕಾಂಗ್ರೆಸ್ ಸರಕಾರದಲ್ಲೂ ಇದೇ ರೀತಿ ಅನ್ನಭಾಗ್ಯದ ಅಕ್ಕಿ ಮೂಟೆಗಳು ರಾತ್ರೋರಾತ್ರಿ ನಾಪತ್ತೆಯಾಗಿದ್ದವು. ಇದನ್ನು ಪತ್ತೆ ಹಚ್ಚಲು ಹೋಗಿದ್ದ ಅಂದಿನ ಆಹಾರ ಇಲಾಖೆ ಡಿಡಿ ಅರುಣ ಸಂಗಾವಿ ಮೇಲೆ ಸುರಪುರದಲ್ಲಿ ಮಾರಣಾಂತಿಕ ಹಲ್ಲೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅಕ್ಕಿ ಕಳ್ಳತನ ಆರೋಪದ ಮೇಲೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಯ ಶಿವಪ್ಪ, ಶಿವರಾಜ ಹಾಗೂ ನ್ನಿತರರ ವಿರುದ್ಧ ಆಹಾರ ಇಲಾಖೆ ನಿರ್ದೇಶಕ ಭೀಮರಾಯ ದೂರು ದಾಖಲಿಸಿದ್ದು ಅಕ್ಕಿ ಪತ್ತೆಗೆ ಖಾಕಿ ಪಡೆ ಶೋಧ ಮುಂದುವರೆಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts