More

    6 ಕ್ಷೇತ್ರ ಅಭ್ಯರ್ಥಿ ಘೋಷಣೆ ಶೀಘ್ರ

    ಬೀದರ್: ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧತೆ ಈಗಿನಿಂದಲೇ ಆರಂಭಿಸಿದ್ದು, ಜಿಲ್ಲೆಯ 6 ಕ್ಷೇತ್ರಗಳ ಪಕ್ಷದ ಅಭ್ಯಥರ್ಿಗಳನ್ನು ಶೀಘ್ರದಲ್ಲಿ ಘೋಷಿಸುವುದಾಗಿ ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

    ಗಡಿ ಜಿಲ್ಲೆ ಬೀದರ್ನಲ್ಲಿ ಪಕ್ಷದ ಸಂಘಟನೆ ಉತ್ತಮವಾಗಿದೆ. ಆರು ಕ್ಷೇತ್ರಗಳ ಆಕಾಂಕ್ಷಿಗಳನ್ನು ಗಣನೀಯವಾಗಿ ತೆಗೆದುಕೊಂಡು ಉತ್ತಮ ಮತ್ತು ಗೆಲ್ಲುವ ಸಾಮಥ್ರ್ಯದ ಅಭ್ಯಥರ್ಿಗಳನ್ನು ಆಯ್ಕೆ ಮಾಡಿ 10-12 ದಿನದಲ್ಲಿ ಘೋಷಿಸುವಂತೆ ಶಾಸಕ ಬಂಡೆಪ್ಪ ಖಾಶೆಂಪುರ ಅವರಿಗೆ ನಿದರ್ೇಶನ ನೀಡಿರುವೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಕಲ್ಯಾಣ ಕನರ್ಾಟಕದ ಏಳು ಜಿಲ್ಲೆಗಳಲ್ಲಿ ಪಕ್ಷವನ್ನು ಸಂಘಟಿಸಿ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ನಗರದಲ್ಲಿ ಒಂದು ದಿನ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಚುನಾವಣೆಯ ಸಂಭವನೀಯ ಅಭ್ಯಥರ್ಿಗಳು ಸೇರಿ ಪ್ರಮುಖರ ಸಭೆ ನಡೆಸಿ ಚಚರ್ಿಸಲಾಗಿದೆ. ಕೊಪ್ಪಳ, ಬಳ್ಳಾರಿ ಹೊರತುಪಡಿಸಿ ಇತರ ಐದು ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಉತ್ತಮವಾಗಿದೆ. ಬೀದರ್ ಜತೆಗೆ ಕಲಬುರಗಿ 6, ರಾಯಚೂರು ಜಿಲ್ಲೆಯ 6 ಕ್ಷೇತ್ರಗಳ ಅಭ್ಯಥರ್ಿಗಳನ್ನು ಶೀಘ್ರ ಘೋಷಣೆ ಮಾಡಲಾಗುವುದು ಎಂದರು.

    ಈಗಿನ ರಾಜಕೀಯ ಬೆಳವಣಿಗೆ ನೋಡಿದರೆ ಡಿಸೆಂಬರ್ನಲ್ಲಿ ವಿಧಾನಸಭೆ ಚುನಾವಣೆ ಬರುವ ಸಾಧ್ಯತೆ ಇದೆ. ಹೀಗಾಗಿ ಪಂಚರತ್ನ ಯಾತ್ರೆಗೆ ಆಗಸ್ಟ್ನಲ್ಲಿ ಚಾಲನೆ ನೀಡಲಾಗುವುದು. ಶಿಕ್ಷಣ, ಆರೋಗ್ಯ, ರೈತರಿಗೆ ಆಥರ್ಿಕ ಭದ್ರತೆ, ಉದ್ಯೋಗ ಹಾಗೂ ವಸತಿ ಕ್ಷೇತ್ರಗಳ ವಿಷಯಗಳನ್ನು ಇಟ್ಟುಕೊಂಡು ಯಾತ್ರೆ ಮಾಡಲಾಗುತ್ತಿದೆ. ದಿನಕ್ಕೊಂದು ವಿಧಾನಸಭೆ ಕ್ಷೇತ್ರದಲ್ಲಿ ಸುಮಾರು 16 ಸಭೆ ಆಯೋಜಿಸಿ ಗ್ರಾಮ ವಾಸ್ತವ್ಯ ಮಾಡಲಾಗುತ್ತದೆ. ಮೊದಲ ಹಂತವಾಗಿ ಎ ಕೆಟಗೇರಿಯ 104 ಕ್ಷೇತ್ರಗಳಲ್ಲಿ ಯಾತ್ರೆ ಸಂಚರಿಸಲಿದೆ ಎಂದು ವಿವರಿಸಿದರು.

    ಬಿಜೆಪಿ, ಕಾಂಗ್ರೆಸ್ನಿಂದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ಅಧಿಕಾರ ನಡೆಸಿರುವುದನ್ನು ನೋಡಿದ್ದೇವೆ. ಸಮ್ಮಿಶ್ರ ಸಕರ್ಾರದ ವೇಳೆ ನೀರಾವರಿ ಯೋಜನೆಗೆ ಅವಕಾಶ ನೀಡಲಿಲ್ಲ. ಹೀಗಾಗಿ ನಮಗೆ ಸ್ವಂತ ಬಲದ ಮೇಲೆ ಅಧಿಕಾರ ಮಾಡಲು ಜನತೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

    ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ವಗರ್ಾಯಿಸಿದ ರಾಜ್ಯದ ಎಷ್ಟೋ ಕೇಸ್ಗಳು ನಾಲ್ಕೈದು ವರ್ಷವಾದರೂ ತನಿಖೆ ಯಾವ ಹಂತದಲ್ಲಿದೆ ಎಂಬ ಮಾಹಿತಿ ಸಿಗುತ್ತಿಲ್ಲ. ಇದೀಗ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್ಐಎಗೆ ನೀಡಲಾಗಿದೆ. ಸಕರ್ಾರದ ಭ್ರಷ್ಟ ವ್ಯವಸ್ಥೆ ನಡುವೆಯೂ ನ್ಯಾಯಯುತವಾಗಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳಿದ್ದಾರೆ. ಸಕರ್ಾರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಕರಣದ ತನಿಖೆ ಮಾಡಬೇಕಾಗಿತ್ತು ಎಂದರು.

    ಶಾಸಕ ಬಂಡೆಪ್ಪ ಖಾಶೆಂಪುರ, ಮಾಜಿ ಸಚಿವ ಎನ್.ಬಿ. ನಬಿ, ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ, ಸಿದ್ದು ಬಂಡಿ, ಅಶೋಕಕುಮಾರ ಕರಂಜೆ, ಬಸವರಾಜ ಪಾಟೀಲ್ ಹಾರೂರಗೇರಿ, ಅಶೋಕ ಕೋಡಗೆ ಇದ್ದರು.

    ನಿಖಿಲ್ಗೆ ಪ್ರಚಾರ ಹೊಣೆ: ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರನ್ನು ಬರುವ ವಿಧಾನಸಭೆ ಚುನಾವಣೆಯಲ್ಲಿ ನಿಲ್ಲಿಸಬೇಕು ಎಂಬ ಉದ್ದೇಶ ನಮಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಚುನಾವಣೆಗೆ ನಿಲ್ಲುವುದು, ಬಿಡುವುದು ಅವರಿಗೆ ಬಿಟ್ಟದ್ದು. ನಿಖಿಲ್ ಅವರನ್ನು ಚುನಾವಣೆಗೆ ನಿಲ್ಲಿಸುವುದು ದೊಡ್ಡ ವಿಷಯವಲ್ಲ. ಅವರನ್ನು ಸ್ವಾಗತಿಸಿ ಗೆಲ್ಲಿಸಲು ಅನೇಕ ಕ್ಷೇತ್ರಗಳಲ್ಲಿ ಜನ ಸಿದ್ಧರಿದ್ದಾರೆ. ಆದರೆ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ 40-50 ಕ್ಷೇತ್ರಗಳಲ್ಲಿ ಅಭ್ಯಥರ್ಿಗಳ ಪರ ಪ್ರಚಾರ ಮಾಡಲು ಅವರಿಗೆ ಜವಾಬ್ದಾರಿ ನೀಡುತ್ತಿದ್ದೇನೆ ಎಂದರು.

    ಸಾಲ ಮನ್ನಾ ತಾತ್ಕಾಲಿಕ ಪರಿಹಾರ: ಸಾಲ ಮನ್ನಾ ಎನ್ನುವುದು ರೈತರಿಗೆ ತಾತ್ಕಾಲಿಕ ಪರಿಹಾರ. ಕೃಷಿಕರಿಗೆ ಸಾಲ ಮಾಡುವ ಪರಿಸ್ಥಿತಿ ಬರಬಾರದು ಎಂಬ ಕಾರಣಕ್ಕೆ ಕೆಲ ಮಹತ್ವದ ಯೋಜನೆಗಳನ್ನು ಪಕ್ಷ ರೂಪಿಸಿದೆ ಎಂದು ಎಚ್ಡಿಕೆ ಹೇಳಿದರು. ನನ್ನ ಆಡಳಿತಾವಧಿಯಲ್ಲಿ ಎರಡು ಬಾರಿ ಸಾಲಮನ್ನಾ ಮಾಡಿರುವೆ. ರೈತರಿಗೆ ಶಾಶ್ವತವಾದ ಪರಿಹಾರ ಬೇಕಿದೆ. ಕೃಷಿ ಚಟುವಟಿಕೆಗೆ ಆಥರ್ಿಕ ನೆರವು ನೀಡುವ ಮೂಲಕ ರೈತ ಸಾಲಗಾರನಾಗದಂತೆ ಮಾಡುವ ಯೋಜನೆ ನಮ್ಮಲ್ಲಿ ಸಿದ್ಧವಿದೆ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಇದನ್ನು ಜಾರಿ ಮಾಡಲು ಸಾಧ್ಯ ಎಂದರು.

    ಕರಾವಳಿಯಲ್ಲಿನ ಹತ್ಯೆ ಸಂಬಂಧ ವಿವಿಧ ಸಂಘಟನೆಗಳನ್ನು ನಿಷೇಧ ಮಾಡಿ ಎಂದು ನಾನು ಹೇಳುವುದಿಲ್ಲ. ಜನಸಾಮಾನ್ಯರ ಜೀವನದ ಜತೆಗೆ ಬಿಜೆಪಿ, ಕಾಂಗ್ರೆಸ್ ಚೆಲ್ಲಾಟವಾಡಬೇಡಿ. ಶೀಘ್ರದಲ್ಲಿ ಮಂಗಳೂರಿಗೆ ತೆರಳಿ ಹತ್ಯೆಯಾದ ಪ್ರವೀಣ್ ಸೇರಿ ಮೂವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳುವೆ.
    | ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts