More

    58 ವಯಸ್ಸಾದ್ರೂ ಖ್ಯಾತ ಹಾಸ್ಯ ನಟಿ ಸರಳಾ ಮದುವೆ ಆಗಿಲ್ಲ ಏಕೆ? ಕಾರಣ ತಿಳಿದ್ರೆ ಮೆಚ್ಚಿಕೊಳ್ತೀರಾ

    ಚೆನ್ನೈ: ಖ್ಯಾತ ಹಾಸ್ಯ ಕಲಾವಿದೆ ಕೋವೈ ಸರಳಾ ಕನ್ನಡಿಗರಿಗೂ ಚಿರಪರಿಚಿತೆ. ಅರ್ಜುನ್​ ಸರ್ಜಾ ನಟನೆಯ ಆ ಕಾಲದ ಸೂಪರ್​ ಹಿಟ್​ ಸಿನಿಮಾ ಅಳಿಮಯ್ಯ, ದರ್ಶನ್​ ಅಭಿನಯದ ಅರ್ಜುನ್​, ಉಪೇಂದ್ರ ಅಭಿನಯದ ನಾನು ನಾನೇ ಹಾಗೂ ಆಫ್ರಿಕಾದಲ್ಲಿ ಶೀಲಾದಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಹಾಸ್ಯದಿಂದಲೇ ಸರಳಾ ಹೆಸರುವಾಸಿಯಾಗಿದ್ದಾರೆ.

    ಕೋವೈ ಸರಳಾ ಅವರು ಕನ್ನಡಕ್ಕಿಂತ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೇ ನಟಿಸಿದ್ದು ಹೆಚ್ಚು. ಈಗಲೂ ಕೆಲ ಸಿನಿಮಾಗಳಲ್ಲಿ ಸರಳಾ ಬಿಜಿಯಾಗಿದ್ದಾರೆ. ವಯಸ್ಸು 58 ಆಗಿದ್ದರೂ ಸರಳಾ ಮಾತ್ರ ಇನ್ನೂ ಮದುವೆ ಆಗದೇ ಉಳಿದಿದ್ದಾರೆ. ಅಷ್ಟಕ್ಕೂ ಸರಳಾ ಯಾಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಹಾಗೇ ಉಳಿದಿದೆ.

    ಅಂದಹಾಗೆ ಸರಳಾ ತಮ್ಮ ಕುಟುಂಬದಲ್ಲಿ ಹಿರಿಯ ಮಗಳು. ಇವರಿಗೆ ನಾಲ್ವರು ಸಹೋದರಿಯರಿದ್ದಾರೆ. ಸರಳಾ ಅವರು ತಮ್ಮ ಜೀವನವನ್ನು ತ್ಯಾಗ ಮಾಡಿ ಸಹೋದರಿಯರ ಮದುವೆಗೆ ಸಹಾಯ ಮಾಡಿದರು ಮತ್ತು ಅವರ ಮಕ್ಕಳ ಶಿಕ್ಷಣ ಸೇರಿದಂತೆ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ. ಉಳಿದ ಜೀವನವನ್ನು ಇತರರಿಗೆ ಸಹಾಯ ಮಾಡಿ ಕಳೆಯುವುದಾಗಿ ಸರಳಾ ಹೇಳಿಕೊಂಡಿದ್ದಾರೆ.

    ಇನ್ನು ಕೋವೈ ಸರಳಾ ಅವರ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ. ಅದೇನೆಂದರೆ, ಸರಳಾ ಅವರು ಮದುವೆಯಾಗದೇ ಇರುವುದಕ್ಕೆ ವಡಿವೇಲು ಅವರೇ ಕಾರಣ ಎಂದು ತಮಿಳುನಾಡಿನ ಖ್ಯಾತ ಪತ್ರಕರ್ತ ಹಾಗೂ ನಟ ಬೈಲ್ವಾನ್​ ರಂಗನಾಥನ್​ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ನೀಡಿದ್ದ ಹೇಳಿಕೆ ಭಾರಿ ಸಂಚಲನ ಮೂಡಿಸಿತ್ತು. ವಡಿವೇಲು ಅವರು ತಮಗೆ ಬೇಕಾದ ಸಹ ನಟಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರಂತೆ. ಯಾವಾಗ ವಡಿವೇಲು ಅವರಿಗೆ ಸ್ಟಾರ್​ ಪಟ್ಟ ಸಿಕ್ಕಿತೋ ಆಗ ತಮಗೆ ಬೇಕಾದ ನಟಿಯರಿಗೆ ಅವಕಾಶ ನೀಡುತ್ತಿದ್ದರು. ಕೋವೈ ಸರಳಾಗೂ ವಡಿವೇಲು ಅವರೇ ಅವಕಾಶ ನೀಡಿದ್ದು. ಅಲ್ಲದೆ, ಚೆನ್ನೈನ ಇಸಿಆರ್​ನಲ್ಲಿರುವ ತಮ್ಮ ಫಾರ್ಮ್​ ಹೌಸ್​ಗೆ ನಟಿಯರನ್ನು ವಡಿವೇಲು ಆಹ್ವಾನಿಸಿದ್ದರು ಎಂದೂ ಸಹ ರಂಗನಾಥನ್​ ಹೇಳಿದ್ದಾರೆ. (ಏಜೆನ್ಸೀಸ್​)

    ಅಂಬಿಕಾ ಟು ಪ್ರಿಯಾ ಭವಾನಿ ಶಂಕರ್​… ಏನಿದು ಫಾರ್ಮ್​ಹೌಸ್​ ರಹಸ್ಯ? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

    ಸಿನಿಮಾ ಅವಕಾಶಕ್ಕಾಗಿ ನಿರ್ಮಾಪಕರಿಗೆ ಆಫರ್ ಕೊಟ್ಟ ಕೃತಿ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts