More

    ಕರಾವಳಿಯಲ್ಲಿ 568 ಕರೊನಾ ಪಾಸಿಟಿವ್

    ಮಂಗಳೂರು/ಉಡುಪಿ: ದ.ಕ ಜಿಲ್ಲೆಯಲ್ಲಿ ಬುಧವಾರ 6 ಸಾವು ಸೇರಿದಂತೆ 310 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ.

    ಒಂದೇ ದಿನ 256 ಮಂದಿ ಕರೊನಾ ಸೋಂಕಿನಿಂದ ಮುಕ್ತರಾಗಿದ್ದಾರೆ. ಪಾಸಿಟಿವ್ ಆದವರಲ್ಲಿ 201 ಲಕ್ಷಣ ಹೊಂದಿದ್ದರೆ 109 ಮಂದಿಗೆ ಲಕ್ಷಣವಿಲ್ಲ. 188 ಮಂದಿ ಮಂಗಳೂರಿನವರು, 27 ಮಂದಿ ಬಂಟ್ವಾಳ, 25 ಪುತ್ತೂರು, 25 ಸುಳ್ಯ, 26 ಬೆಳ್ತಂಗಡಿ ಹಾಗೂ 19 ಇತರ ಜಿಲ್ಲೆಯವರಿಗೆ ಕರೊನಾ ಸೋಂಕು ದೃಢಪಟ್ಟಿದೆ.
    ಜಿಲ್ಲೆಯಲ್ಲಿ ಒಟ್ಟು ಕರೊನಾ ಸಂಖ್ಯೆ 15,762ಕ್ಕೆ ಏರಿದ್ದರೆ ಸಕ್ರಿಯ ಪ್ರಕರಣಗಳು 3102 ಆಗಿವೆ. ಡಿಸ್‌ಚಾರ್ಜ್ ಆದವರ ಸಂಖ್ಯೆ 12242 ಹಾಗೂ ಒಟ್ಟು ಮೃತರ ಸಂಖ್ಯೆ 418 ಆಗಿದೆ.

    ಉಡುಪಿ ಜಿಲ್ಲೆಯಲ್ಲಿ ಬುಧವಾರ 258 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಕಾರ್ಕಳ ತಾಲೂಕಿನ 64 ವರ್ಷದ ಪುರುಷರೊಬ್ಬರು ಮೃತಪಟ್ಟಿದ್ದಾರೆ. 1000 ಮಂದಿಯ ವರದಿ ನೆಗೆಟಿವ್ ಬಂದಿದೆ. 368 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ.

    ಉಡುಪಿಯಲ್ಲಿ 162 ಮಂದಿ, ಕುಂದಾಪುರದಲ್ಲಿ 39 ಮಂದಿ, ಕಾರ್ಕಳದಲ್ಲಿ 41 ಮಂದಿ, ಹೊರ ಜಿಲ್ಲೆಯ 16 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ 144 ಮಂದಿ ರೋಗ ಲಕ್ಷಣ ಹೊಂದಿದ್ದು, 114 ಮಂದಿಯಲ್ಲಿ ಲಕ್ಷಣಗಳಿಲ್ಲ. ಕೋವಿಡ್ ಕೇರ್ ಸೆಂಟರ್‌ನಲ್ಲಿ 68 ಮಂದಿಗೆ, ಹೋಂ ಐಸೋಲೇಶನ್‌ನಲ್ಲಿ 190 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
    1315 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 75 ಮಂದಿ ಆಸ್ಪತ್ರೆಗಳಿಂದ, 143 ಮಂದಿ ಹೋಂ ಐಸೋಲೇಶನ್‌ನಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1884 ಸಕ್ರಿಯ ಪ್ರಕರಣಗಳಿದ್ದು, 869 ಆಸ್ಪತ್ರೆಯಲ್ಲಿ, 1051 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    270 ಮಂದಿಗೆ ದೃಢ
    ಕಾಸರಗೋಡು: ಜಿಲ್ಲೆಯ 270 ಮಂದಿಯಲ್ಲಿ ಬುಧವಾರ ಕೋವಿಡ್ ರೋಗಬಾಧೆ ಕಾಣಿಸಿಕೊಂಡಿದ್ದು, ಕೇರಳ ರಾಜ್ಯದಲ್ಲಿ ಒಂದೇ ದಿನ ಕೋವಿಡ್ ಬಾಧಿತರ ಸಂಖ್ಯೆ 3,402ಕ್ಕೇರಿದೆ. ಆರಿಕ್ಕಾಡಿ ನಿವಾಸಿ ಸಹಿತ ಕೋವಿಡ್‌ನಿಂದ 12 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ 144 ಮಂದಿ ಸೇರಿ, ಕೇರಳದಲ್ಲಿ ಚಿಕಿತ್ಸೆಯಲ್ಲಿದ್ದ 2058 ಮಂದಿ ಗುಣವಾಗಿದ್ದಾರೆ.

    ಸೋಂಕಿತ ಆತ್ಮಹತ್ಯೆ
    ಮೂಡುಬಿದಿರೆ: ಪುರಸಭೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಕರೊನಾ ಪಾಸಿಟಿವ್ ಸೋಂಕಿಗೆ ತುತ್ತಾಗಿ ಮನನೊಂದು ಮಂಗಳವಾರ ಸಾಯಂಕಾಲ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾರಸುದಾರರು ಬಾರದಿದ್ದಾಗ, ಎಸ್‌ಕೆಎಸ್‌ಎಸ್‌ಎಫ್ ಮೂಡುಬಿದಿರೆ ವಲಯದ ಕಾರ್ಯಕರ್ತರು ಹಿಂದು ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

    ಎಸ್‌ಕೆಎಸ್‌ಎಸ್‌ಎಫ್ ಕಾರ್ಯಕರ್ತರು ಆಸ್ಪತ್ರೆ ನಿಯಮಗಳಿಗೆ ಬದ್ಧರಾಗಿ ಹಿಂದು ವಿಧಿವಿಧಾನದ ಪ್ರಕಾರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಸಂಘಟನೆ ಮೂಡುಬಿದಿರೆ ವಲಯದ ಅಧ್ಯಕ್ಷ ಅಶ್ರಫ್ ಮರೋಡಿ, ವಲಯ ಪ್ರಧಾನ ಕಾರ್ಯದರ್ಶಿ ಫಾರೂಕ್ ವಿಶಾಲ್ ನಗರ, ವಲಯ ವಿಖಾಯ ಅಧ್ಯಕ್ಷ ಹೈದರ್ ಕೋಟೆಬಾಗಿಲು, ಪ್ರಮುಖರಾದ ಕರೀಮ್ ವಿಶಾಲ್‌ನಗರ, ಅಕ್ಬರ್ ತೋಡಾರ್, ರಾಜಿಕ್ ಮಾರ್ಪಾಡಿ, ಕಲಂದರ್ ಈದ್ಗಾ ಹಾಗೂ ಇಬ್ರಾಹಿಂ ಅಂಗರಕರಿಯ ಉಪಸ್ಥಿತರಿದ್ದರು.
    ಪುರಸಭೆ ಸದಸ್ಯ ಸುರೇಶ್ ಪ್ರಭು ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts