More

    ರಾಜ್ಯ ಬಜೆಟ್​ 2020: ಆರ್ಥಿಕ ಅಭಿವೃದ್ಧಿ ಪ್ರಚೋದನಾ ವಲಯಕ್ಕೆ 55,732 ಕೋಟಿ ರೂ.ಅನುದಾನ…ಸಮಗ್ರ ಮಾಹಿತಿಗೆ ಮಾ.6ರ ವಿಜಯವಾಣಿ ಓದಿ..

    2020-21ನೇ ಸಾಲಿನ ರಾಜ್ಯ ಬಜೆಟ್​ನ್ನು ಒಟ್ಟು ಆರು ವಲಯಗಳನ್ನಾಗಿ ವಿಂಗಡಿಸಲಾಗಿತ್ತು. ಅದರಲ್ಲಿ ಮೂರನೇ ವಲಯದಲ್ಲಿ ಆರ್ಥಿಕ ಅಭಿವೃದ್ಧಿಗೆ ಒತ್ತುಕೊಡಲಾಗಿದೆ. ಆರ್ಥಿಕ ಬೆಳವಣಿಗೆಗೆ ಪ್ರಚೋದನೆ ನೀಡುವ ಸಲುವಾಗಿ ಬಜೆಟ್​ನಲ್ಲಿ ಕೆಲವು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಆರ್ಥಿಕ ಅಭಿವೃದ್ಧಿ ಪ್ರಚೋದನಾ ವಲಯಕ್ಕೆ ಒದಗಿಸಲಾದ ಅನುದಾನ- 55,732 ಕೋಟಿ ರೂಪಾಯಿ ಆಗಿದ್ದು, ಮೂರನೇ ವಲಯದ ಪ್ರಮುಖ ಅಂಶಗಳು ಹೀಗಿವೆ…

    1. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಾಗಿ 3060 ಕೋಟಿ ರೂ.
    2. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1500 ಕೋಟಿ ರೂ.
    3. ಹೊಸದಾಗಿ ರಚನೆಯಾಗಿರುವ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ, ಸಾಂಸ್ಕೃತಿಕ ಸಂಘದ ಚಟುವಟಿಕೆಗಳಿಗಾಗಿ ಬರುವ ವರ್ಷಗಳಲ್ಲಿ 500 ಕೋಟಿ ರೂ.ಅನುದಾನ.
    4. ಪಂಚಾಯತ್ ಸಂಸ್ಥೆಗಳ ವಿಕೇಂದ್ರೀಕರಣ ಮತ್ತು ಬಲವರ್ಧನೆಗೆ ಪಂಚಾಯತ್‍ರಾಜ್ ಆಯುಕ್ತಾಲಯ ಪ್ರಾರಂಭ
    5. “ಗ್ರಾಮೀಣ ಸುಮಾರ್ಗ ಯೋಜನೆ” ಯಡಿ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ 780 ಕೋಟಿ ರೂ. ಅನುದಾನ.
    6. “ಜಲಧಾರೆ” ಯೋಜನೆಯಡಿಯಲ್ಲಿ Asian Infrastructure Investment Bank (AIIB) ನೆರವಿನೊಂದಿಗೆ 700 ಕೋಟಿ ರೂ. ವೆಚ್ಚದಲ್ಲಿ ವಿಜಯಪುರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬೃಹತ್ ಕುಡಿಯುವ ನೀರಿನ ಯೋಜನೆ ಜಾರಿ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು “ಮನೆ ಮನೆಗೆ ಗಂಗೆ” ನೂತನ ಯೋಜನೆ ಜಾರಿ.
    7. ರಾಜ್ಯದ 17 ನದಿ ಪಾತ್ರದ ಮಲಿನತೆಯನ್ನು ತಡೆಗಟ್ಟಲು 1690 ಕೋಟಿ ರೂ. ಮೊತ್ತದಲ್ಲಿ 20 ನಗರ ಪ್ರದೇಶಗಳ ಒಳಚರಂಡಿ ವ್ಯವಸ್ಥೆ, ಒಂದು ಪಟ್ಟಣಕ್ಕೆ ಮಲತ್ಯಾಜ್ಯ ಸಂಸ್ಕರಣಾ ಘಟಕ(Faecal Sludge and Septage Management) ಅಳವಡಿಕೆಗೆ 100 ಕೋಟಿ ರೂ. ಅನುದಾನ.
    8. ಬಳ್ಳಾರಿ, ಚಿತ್ರದುರ್ಗ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಶುದ್ಧೀಕರಿಸಿದ ನೀರನ್ನು ಗೃಹೇತರ ಉದ್ದೇಶದ ಮರುಬಳಕೆಗೆ 20 ಕೋಟಿ ರೂ. ವೆಚ್ಚದ ಯೋಜನೆ.
    9. ರಾಜ್ಯದಲ್ಲಿ ಹೂಡಿಕೆದಾರರಿಗೆ ಉತ್ತೇಜನ ನೀಡಲು, ಕೈಗಾರಿಕೆ ಸ್ಥಾಪನೆಗೆ ಗುರುತಿಸುವ ಜಾಗದಲ್ಲಿ ನೇರವಾಗಿ ಭೂಮಾಲೀಕರಿಂದ ಭೂಮಿ ಖರೀದಿಸಲು ಅನುಕೂಲವಾಗುವಂತೆ ಇರುವ ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಚಿಂತನೆ.
    10. 2020ರ ನವೆಂಬರ್​ನಲ್ಲಿ ಇನ್​​ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ ಯೋಜನೆ.
      ಶಿವಮೊಗ್ಗದಲ್ಲಿ ಹೆಲ್ತ್​ ಆ್ಯಂಡ್​ ವೆಲ್​ನೆಸ್​ ಕ್ಲಸ್ಟರ್​ ಮತ್ತು ಧಾರವಾಡದಲ್ಲಿ ಹೋಮ್​ ಆ್ಯಂಡ್ ಪರ್ಸನಲ್​ ಕೇರ್​ ಕನ್ಸ್ಯೂಮರ್ ಗೂಡ್ಸ್​ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಸ್ಥಾಪನೆ.
    11. ರಾಮನಗರ ತಾಲೂಕಿನ ಹಾರೋಹಳ್ಳಿ 5ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಸ್ಟಿಕ್​ ವೆಹಿಕಲ್ಸ್ ಮತ್ತು ಎನರ್ಜಿ ಸ್ಟೋರೇಜ್​ ಮ್ಯಾನುಫ್ಯಾಕ್ಚರಿಂಗ್​ ಕ್ಲಸ್ಟರ್ (ವಿದ್ಯುಚ್ಚಾಲಿತ ವಾಹನಗಳು ಮತ್ತು ಇಂಧನ ಸಂಗ್ರಹಣಾ ಘಟಕ)ಸ್ಥಾಪನೆಗೆ 10 ಕೋಟಿ ರೂ.ಅನುದಾನ.
    12. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹರಳೂರು ಮುದ್ದೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ರಕ್ಷಣೆ ಮತ್ತು ವಿಮಾನಯಾನ ಉಪಕರಣಗಳ ತಯಾರಿಕಾ ಘಟಕ ಸ್ಥಾಪನೆ.
    13. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ. ತಿಪಟೂರಿನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್​ ಅಭಿವೃದ್ಧಿ, ನಾರು ಆಧಾರಿತ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಲು ಮತ್ತು ವ್ಯಾಪಕ ಮಾರುಕಟ್ಟೆ ಒದಗಿಸಲು ಐದು ಕೋಟಿ ರೂ.ವೆಚ್ಚದಲ್ಲಿ ತೆಂಗಿನ ನಾರು ಎಕ್ಸಪೀರಿಯನ್ಸ್​ ಕೇಂದ್ರ ಸ್ಥಾಪನೆ.
    14. ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್​ ಆರಂಭ, 3000 ಉದ್ಯೋಗ ಸೃಷ್ಟಿ.
    15. ರಾಜ್ಯದ ಜಿ.ಐ. ಟ್ಯಾಗ್ ಹೊಂದಿರುವ ಕೈಮಗ್ಗ ಬಟ್ಟೆ ಉತ್ಪನ್ನಗಳಿಗೆ ರಾಜ್ಯದ ಪ್ರತಿಷ್ಠಿತ “ಪ್ರಿಯದರ್ಶಿನಿ” ಬ್ರಾಂಡ್ ಮೂಲಕ ಮಾರುಕಟ್ಟೆ ಸೌಲಭ್ಯ.
    16. ನೇಕಾರರ ಸಾಲಮನ್ನಾ ಯೋಜನೆ ಪೂರ್ಣಕ್ಕೆ 79.57 ಕೋಟಿ ರೂ. ಅನುದಾನ.
    17. ಹಿಂದುಳಿದ ಪ್ರದೇಶಗಳು ಮತ್ತು ಟಯರ್-2 ಹಾಗೂ ಟಯರ್-3ರ ನಗರಗಳಿಗೆ ಬಂಡವಾಳ ಆಕರ್ಷಿಸುವ ನೂತನ ಕೈಗಾರಿಕಾ ನೀತಿ ಜಾರಿ. ಉದ್ಯೋಗ ಸೃಷ್ಟಿಗೆ ಆದ್ಯತೆ.
    18. .ರಾಜ್ಯದ ವ್ಯಾಪ್ತಿಯಲ್ಲಿ ಅಮೂಲ್ಯ ಖನಿಜಗಳ ನಿಕ್ಷೇಪಗಳನ್ನು ಗುರುತಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಖನಿಜಾನ್ವೇಷಣೆ ವಿಭಾಗ ಸ್ಥಾಪನೆ.
    19.  ಕಿತ್ತೂರು ಮೂಲಕ ಧಾರವಾಡ-ಬೆಳಗಾವಿ ರೈಲು ಮಾರ್ಗ ಯೋಜನೆಗೆ ಉಚಿತ ಭೂಮಿ ನೀಡಲು ಹಾಗೂ ಶೇ. 50 ರಷ್ಟು ಕಾಮಗಾರಿ ವೆಚ್ಚ ಭರಿಸಲು ರಾಜ್ಯ ಸರ್ಕಾರದ ಒಪ್ಪಿಗೆ.
    20.  ಬೆಂಗಳೂರಿನ ಆನಂದರಾವ್ ವೃತ್ತದಲ್ಲಿ ಸರ್ಕಾರಿ ಕಚೇರಿಗಳಿಗಾಗಿ 400 ಕೋಟಿ ರೂ. ವೆಚ್ಚದಲ್ಲಿ 25 ಅಂತಸ್ತುಗಳ ಬಹುಮಹಡಿಯ “ಅವಳಿ ಗೋಪುರ” ನಿರ್ಮಾಣ-ಯೋಜನಾ ವರದಿ ತಯಾರಿಕೆಗೆ ಕ್ರಮ.
    21. ಖಾಸಗಿ ಸಹಭಾಗಿತ್ವದಲ್ಲಿ 2500 ಕೋಟಿ ರೂ.ಗಳ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆ ಪಾವಿನಕುರ್ವೆ/ ಬೇಲೆಕೇರಿ ಬಂದರು ಅಭಿವೃದ್ಧಿಗೆ ಬಿಡ್ ಆಹ್ವಾನ.
    22. ರಾಜ್ಯದ ಎಲ್ಲಾ ನಾವೀನ್ಯತಾ ಚಟುವಟಿಕೆಗಳನ್ನು ಕ್ರೋಢೀಕರಿಸಿ ಸಂಯೋಜಿಸಲು 4 ಕೋಟಿ ರೂ. ವೆಚ್ಚದಲ್ಲಿ “ಇನ್ನೋವೇಷನ್ ಹಬ್”(Innovation Hub) ಸ್ಥಾಪನೆ.
    23.  ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ ಸಂಶೋಧನಾ ಟ್ರಾನ್ಸ್​ಲೇಶನ್​ ಪಾರ್ಕ್​( “Artificial Intelligence Research Translation Park) ಸ್ಥಾಪನೆಗೆ ಮುಂದಿನ ಮೂರು ವರ್ಷಗಳಲ್ಲಿ 60 ಕೋಟಿ ರೂ.ಇಡಿಗಂಟು ಅನುದಾನ
    24. ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದ ಆಶ್ರಯದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ “ಕೃಷಿ ನಾವೀನ್ಯತಾ ಕೇಂದ್ರ” ಸ್ಥಾಪನೆ, ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಏಳು ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ತಂತ್ರಜ್ಞಾನ ಮಿಷನ್ ಸ್ಥಾಪನೆ.
    25.  ದಾವೋಸ್‍ನ ವಿಶ್ವ ಆರ್ಥಿಕ ವೇದಿಕೆಯ ಸಹಭಾಗಿತ್ವದೊಂದಿಗೆ ‘ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ (Internet of Ethical Things)ವಿಷಯದಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ 2020-21ರಲ್ಲಿ 7.5 ಕೋಟಿ ರೂ. ಅನುದಾನ.

    ರಾಜ್ಯ ಬಜೆಟ್​ನ ಸಂಪೂರ್ಣ ಚಿತ್ರಣಕ್ಕಾಗಿ ನಾಳಿನ ವಿಜಯವಾಣಿ (ಮಾ.6) ಪತ್ರಿಕೆಯನ್ನು ಓದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts