More

    52 ಸಾವಿರಕ್ಕೂ ಅಧಿಕ ಅನಧಿಕೃತ ನೀರುಸಂಪರ್ಕ: ಅಧಿಕೃತ ಮಾಡಿಕೊಳ್ಳಲು ಡಿ.31ರವರೆಗೆ ಅವಕಾಶ

    ಬೆಂಗಳೂರು: ನಗರದಲ್ಲಿ ಸುಮಾರು 52 ಸಾವಿರಕ್ಕೂ ಅಧಿಕ ಮನೆಗಳು ಅನಧಿಕೃತವಾಗಿ ನೀರಿನ ಸಂಪರ್ಕ ಹೊಂದಿವೆ ಎಂದು ಜಲಮಂಡಳಿ ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಅನಧಿಕೃತ ನೀರು ಬಳಕೆದಾರರಿಗೆ ಅಧಿಕೃತ ಸಂಪರ್ಕ ಮಾಡಿಕೊಳ್ಳುವಂತೆ ಅವಕಾಶ ನೀಡಿದ್ದು, ಅದನ್ನು ಪಾಲಿಸದಿದ್ದಲ್ಲಿ ದುಬಾರಿ ದಂಡ ಅಥವಾ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಸಿಲಿಕಾನ್ ಸಿಟಿಯಲ್ಲಿ ವಸತಿ, ಉದ್ಯಮ, ಕೈಗಾರಿಕೆ ಸೇರಿ 52,300ಕ್ಕೂ ಅಧಿಕ ಕಟ್ಟಡಗಳಿಗೆ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆಯಲಾಗಿದೆ. ಇಂತಹ ಪ್ರಕರಣಗಳು ನಗರದ ಹೊರವಲಯದಲ್ಲಿಯೇ ಹೆಚ್ಚಾಗಿವೆ ಎಂದು ಜಲಮಂಡಳಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಅನಧಿಕೃತ ಸಂಪರ್ಕದಿಂದ ನೀರು ಮತ್ತು ಚರಂಡಿ ಬಳಕೆ ಮಾಡುತ್ತಿರುವ ಸಾರ್ವಜನಿಕರಿಗೆ ದಂಡ ಶುಲ್ಕವಿಲ್ಲದೆ ಅಧಿಕೃತ ಸಂಪರ್ಕ ಪಡೆಯಲು ಡಿ.31ರವರೆಗೆ ಅವಕಾಶ ನೀಡಲಾಗಿದೆ. ನಿಯಮ ಪಾಲಿಸದಿದ್ದಲ್ಲಿ ಅಂತಹ ಕಟ್ಟಡಗಳಿಗೆ ಜಲಮಂಡಳಿ ಶಾಶ್ವತವಾಗಿ ನೀರಿನ ಸಂಪರ್ಕ ಕಡಿತ ಮಾಡಲಿದೆ. ಹಲವು ತಿಂಗಳಿಂದ ನೀರು ಬಿಲ್ ಬಾಕಿ ಉಳಿಸಿಕೊಂಡಲ್ಲಿ ಅವರ ವಿರುದ್ಧ ಬಿಎಂಟಿಎ್ ಪೊಲೀಸರಿಗೆ ದೂರು ನೀಡಲಾಗುತ್ತದೆ.

    ಎರಡು ಬಾರಿ ನೋಟಿಸ್: ಜಲಮಂಡಳಿ ವತಿಯಿಂದ 15ಕ್ಕೂ ಹೆಚ್ಚು ತಂಡಗಳನ್ನು ಸಿದ್ಧಪಡಿಸಿಕೊಂಡು ಬಾಕಿ ಪಾವತಿ ಮತ್ತು ಅಧಿಕೃತ ಸಂಪರ್ಕ ಪಡೆಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಅವಧಿ ಮೀರಿ ಅನಧಿಕೃತ ನೀರು ಬಳಕೆ ಮಾಡುವವರಿಗೆ ಎರಡು ಬಾರಿ ನೋಟಿಸ್ ನೀಡಿ ನಂತರ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಜಲಮಂಡಳಿಯ ಮುಖ್ಯ ಇಂಜಿನಿಯರ್ ಸೋಮಶೇಖರ್ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.

    ಚೀಟಿ ನೆಪದಲ್ಲಿ ಚೀಟಿಂಗ್​: ಹಣ ಕಟ್ಟಿಸಿಕೊಂಡವರು ಮನೆಗೆ ಬೀಗ ಹಾಕಿಟ್ಟು ಪರಾರಿ

    ಅಪ್ಪ ಮಟನ್​ ಕರಿಯಲ್ಲಿ ಪೀಸ್​ ಇಲ್ಲ ಎಂದ; ಮಕ್ಕಳು ಚಚ್ಚಿ ಕೊಚ್ಚಿ ಸಾಯಿಸಿದ್ರು…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts