More

    ರಸ್ತೆ ತೆರಿಗೆಯಲ್ಲಿ ಶೇ. 50 ಮನ್ನಾ; ವಾಣಿಜ್ಯ ವಾಹನ ಮಾಲೀಕರಿಗೆ ಸಂತೋಷದ ಸುದ್ದಿ

    ಪಣಜಿ: ಲಾಕ್​ಡೌನ್​ ಬಳಿಕದ ಸಮಸ್ಯೆಗಳ ಹಿನ್ನೆಲೆಯಲ್ಲಿ ವಾಣಿಜ್ಯ ವಾಹನಗಳ ಮಾಲೀಕರು ಸಾಕಷ್ಟು ಬೇಡಿಕೆಗಳನ್ನು ಮುಂದಿರಿಸಿಕೊಂಡು ಜನಪ್ರತಿನಿಧಿಗಳು-ಅಧಿಕಾರಿಗಳನ್ನು ಎಡತಾಕುತ್ತಲೇ ಇದ್ದಾರೆ. ಆದಾಗ್ಯೂ ಆಗಿರುವ ಪ್ರಯೋಜನ ಶೂನ್ಯ ಎಂಬುದು ಬಹಳಷ್ಟು ವಾಹನ ಮಾಲೀಕರ ಆರೋಪ.

    ಇದೀಗ ವಾಣಿಜ್ಯ ವಾಹನಗಳ ಮಾಲೀಕರು ಖುಷಿ ಪಡುವಂಥ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ವಾಣಿಜ್ಯ ವಾಹನಗಳ ಮಾಲೀಕರಿಗೆ ಶೇ. 50 ರಸ್ತೆ ತೆರಿಗೆ ಮನ್ನಾ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಈಗ ಇಂಥದ್ದೊಂದು ಘೋಷಣೆಯನ್ನು ಮಾಡಿರುವುದು ಗೋವಾ ಸರ್ಕಾರ.

    ವಾಣಿಜ್ಯ ವಾಹನಗಳಿಗೆ ವಿಧಿಸಲಾಗುವ 2020-21ನೇ ಸಾಲಿನ ರಸ್ತೆ ತೆರಿಗೆಯಲ್ಲಿ ಶೇ. 50 ಭಾಗವನ್ನು ಮನ್ನಾ ಮಾಡಲು ಗೋವಾ ಸಚಿವ ಸಂಪುಟದಲ್ಲಿ ಇಂದು ನಿರ್ಧರಿಸಲಾಗಿದೆ. ಕೋವಿಡ್​-19 ಲಾಕ್​ಡೌನ್​ ಅವಧಿಯಲ್ಲಿ ಈ ವಾಹನಗಳು ಚಲಾವಣೆಯಲ್ಲಿ ಇರದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ವಾಣಿಜ್ಯ ವಾಹನಗಳ 2021ರ ಮಾರ್ಚ್​ 31ರ ವರೆಗಿನ ರಸ್ತೆ ತೆರಿಗೆಯಲ್ಲಿ ಅರ್ಧದಷ್ಟನ್ನು ಮನ್ನಾ ಮಾಡಲು ನಿರ್ಧರಿಸಲಾಗಿದೆ. ಏಕೆಂದರೆ ಹಚ್ಚೂಕಡಿಮೆ ಆರು ತಿಂಗಳು ಈ ವಾಹನಗಳು ಓಡಾಟ ನಡೆಸಿಲ್ಲ ಎಂಬುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್ ತಿಳಿಸಿದ್ದಾರೆ. ಈ ಬಗ್ಗೆ ವಿವಿಧ ವಾಹನ ಸಂಘಟನೆಗಳವರು ಬೇಡಿಕೆ ಸಲ್ಲಿಸಿದ್ದರು ಎಂದೂ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts