ಬೆಂಗಳೂರು: ಲಾಕ್ಡೌನ್ ಸಡಿಲಗೊಂಡ ಬಳಿಕ ಬಿಡುಗಡೆ ಆಗಿದ್ದ ರಾಬರ್ಟ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 100 ಕೋಟಿಯ ಬಿಜಿನೆಸ್ ಮಾಡಿತ್ತು. ಎಲ್ಲೆಡೆಯಿಂದ ಮೆಚ್ಚುಗೆ ಪಡೆದುಕೊಂಡಿದ್ದ ಈ ಚಿತ್ರ ಹಾಡುಗಳ ವಿಚಾರದಲ್ಲಿಯೂ ಸದ್ದು ಮಾಡಿತ್ತು. ಅದರಂತೆ ಕಣ್ಣು ಹೊಡಿಯಾಕ ಹಾಡು ಇದೀಗ ಯೂಟ್ಯೂಬ್ನಲ್ಲಿ ಹವಾ ಸೃಷ್ಟಿಸಿದೆ. ಬರೋಬ್ಬರಿ 5 ಕೋಟಿ ಬಾರಿ ಈ ಹಾಡು ವೀಕ್ಷಣೆ ಕಂಡಿದೆ.
ಇದನ್ನೂ ಓದಿ: ಸೆಕ್ಸ್ ಸೀನ್ ಶೂಟಿಂಗೂ ಮುನ್ನ ರಾಧಿಕಾ ಆಪ್ಟೆ ಜತೆ ನಡೆದ ರಹಸ್ಯ ಮಾತುಕತೆ ಬಿಚ್ಚಿಟ್ಟ ನಟ!
ಎರಡು ತಿಂಗಳ ಹಿಂದಷ್ಟೇ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದ್ದ ಈ ಹಾಡು, ಆಗಿನಿಂದಲೂ ಹೆಚ್ಚು ಸದ್ದು ಮಾಡಿತ್ತು. ಯೋಗರಾಜ್ ಭಟ್ಟರ ಪಕ್ಕಾ ಜವಾರಿ ಸಾಹಿತ್ಯದ ಹಾಡು ಕೇಳುಗರ ಮೋಡಿ ಮಾಡಿತ್ತು. ಶ್ರೇಯಾ ಘೋಷಾಲ್ ಅವರ ಕಂಠಸಿರಿಗೂ ಫಿದಾ ಆಗಿದ್ದರು. ಅದೆಲ್ಲದರ ಪರಿಣಾಮವಾಗಿ ಇದೀಗ ಬರೋಬ್ಬರಿ 50 ಮಿಲಿಯನ್ ವೀಕ್ಷಣೆಯ ಗಡಿ ಮುಟ್ಟಿದೆ.
ಇದನ್ನೂ ಓದಿ: ಇನ್ನು ಮುಂದೆ ಶಾಲೆಗೆ ಹೋಗಲ್ಲ ಎಂದು ಸೋನಾಕ್ಷಿ ಹಠ ಹಿಡಿದಿದ್ದು ಯಾಕೆ?
ಅಂದಹಾಗೆ, ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜಗಪತಿ ಬಾಬು ಖಳನಾಯಕರಾದರೆ, ಭದ್ರಾವತಿ ಬೆಡಗಿ ಆಶಾ ಭಟ್ ನಾಯಕಿಯಾಗಿ ಈ ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದರು. ಉಮಾಪತಿ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.