More

    ಅಕ್ರಮ ಸಾಗಾಟದ ವೇಳೆ ವಾಹನ ಪಲ್ಟಿಯಾಗಿ 50 ಕರುಗಳ ದುರ್ಮರಣ

    ಹಾಸನ: ಹಾಸನದಲ್ಲಿ ಕಳೆದ ತಿಂಗಳು ನಡೆದ 38 ಮಂಗಗಳ ಮಾರಣಹೋಮ‌ದ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅಕ್ರಮ ಸಾಗಾಟದ ವೇಳೆ ಅಪಘಾತವಾಗಿ, ಸುಮಾರು 50 ಕರುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

    ಬೇಲೂರು ತಾಲ್ಲೂಕಿನ ದ್ಯಾವಪ್ಪನಹಳ್ಳಿ ಗ್ರಾಮದ ಬಳಿ ಬುಧವಾರ ರಾತ್ರಿ ಪುಟ್ಟ ಗೂಡ್ಸ್ ವಾಹನದಲ್ಲಿ 100 ಕರುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಬಾಯಿ ಕಾಲಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಮೂಕ ಪ್ರಾಣಿಗಳನ್ನು ಸಾಗಿಸುತ್ತಿದ್ದರು. ಗೋಹತ್ಯೆ ನಿಷೇಧ ಇರುವುದರಿಂದ ದುಷ್ಕರ್ಮಿಗಳು ರಾತ್ರೋರಾತ್ರಿ ಸಾಗಿಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಯಿತು ಎನ್ನಲಾಗಿದೆ.

    ಇದನ್ನೂ ಓದಿ: ಬಂಗಾಳ ಹಿಂಸಾಚಾರ: ಸಿಬಿಐ ತನಿಖೆ ಆದೇಶಿಸಿದ ಹೈಕೋರ್ಟ್​

    ಗೂಡ್ಸ್ ಆಟೋದೊಳಗೆ ಉಸಿರುಗಟ್ಟಿ ಹಲವು ಕರುಗಳು ಸಾವಪ್ಪಿದ್ದರೆ, ಅಪಘಾತದ ಬಳಿಕ ಮತ್ತಷ್ಟು ಕರುಗಳು ಬಲಿಯಾಗಿವೆ. ಕನಿಷ್ಠ 50 ಮೂಕ‌ ಪ್ರಾಣಿಗಳು ಬಲಿಯಾಗಿದ್ದು, ಉಳಿದ 50 ಕರುಗಳನ್ನು ರಕ್ಷಿಸಲಾಗಿದೆ. ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಅವರು ಸ್ಥಳಕ್ಕೆ ಹೋಗಿ ಕರುಗಳ ಸ್ವತಃ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಜುಲೈ 28 ರಂದು 38 ಮಂಗಗಳ ಮಾರಣಹೋಮ ನಡೆದಿತ್ತು. ಘಟನೆ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿ ಹೈಕೋರ್ಟ್ ತನಿಖೆ ನಡೆಸುತ್ತಿದೆ. ಈ ಘಟನೆ ಮಾಸುವ ಮುನ್ನವೇ ಇನ್ನೂ 50 ಮೂಕಪ್ರಾಣಿಗಳ ಸಾವು ಸಂಭವಿಸಿದೆ. ಪೊಲೀಸರು ಹಾಗೂ ತಾಲ್ಲೂಕು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

    ದೂರು ಕೊಟ್ಟಳೆಂದು ಹೆಂಡತಿಯ ಮೇಲೆ ಗುಂಡು ಹಾರಿಸಿದ! ಆ ಸಮಯಕ್ಕೇ ಪೊಲೀಸರ ಎಂಟ್ರಿ!

    https://www.vijayavani.net/karnatakas-justice-b-v-nagarathna-may-become-first-woman-chief-justice-of-india/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts