More

    ಮೋಟೆಬೆನ್ನೂರಿಗೆ 50 ಹಾಸಿಗೆ ಆಸ್ಪತ್ರೆ ಮಂಜೂರು

    ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರು ಗ್ರಾಮಕ್ಕೆ 50 ಹಾಸಿಗೆಯ ಸಮುದಾಯ ಆಸ್ಪತ್ರೆ ಮಂಜೂರಾಗಿದ್ದು, ಆಸ್ಪತ್ರೆ ನಿರ್ವಣಕ್ಕೆ ನನ್ನ ಹೆಸರಿನಲ್ಲಿರುವ 3 ಎಕರೆ ಭೂಮಿ ದಾನವಾಗಿ ನೀಡುತ್ತೇನೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

    ತಾಲೂಕಿನ ಮೋಟೆಬೆನ್ನೂರ ಗ್ರಾಮದ ಪಂಚಾಯಿತಿ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೋಮವಾರ ಆಯೋಜಿಸಿದ್ದ ಪೋಷಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಎರಡು ದಶಕಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿಗೆ ಗ್ರಾಮಸ್ಥರ ಬೇಡಿಕೆಯಿತ್ತು. ಆದರೆ, ಆರೋಗ್ಯ ಇಲಾಖೆ ಹಾಗೂ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿ ಮೋಟೆಬೆನ್ನೂರ ಹಾಗೂ ಚಿಕ್ಕಬಾಸೂರು ಸಮುದಾಯ ಆಸ್ಪತ್ರೆಗೆ ತಲಾ 10 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಕದರಮಂಡಲಗಿ, ಸುಣಕಲ್ ಬಿದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರಿಗಾಗಿ ಪೋಷಣ ಅಭಿಯಾನ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶೈಲಾ ಕುರಹಟ್ಟಿ, ಗ್ರಾಪಂ ಅಧ್ಯಕ್ಷ ಶಿವಪ್ಪ ಕುಳೆನೂರ, ವಿಜಯ ಬಳ್ಳಾರಿ, ಶಿವಬಸಪ್ಪ ಕುಳೆನೂರ, ನಾಗರಾಜ ಹಾವನೂರು, ಜಿತೇಂದ್ರ ಸುಣಗಾರ, ಬಸವರಾಜ ಹಲಗೇರಿ, ರಮೇಶ ಬಟ್ಲಕಟ್ಟಿ, ಈರಣ್ಣ ಬಳ್ಳಾರಿ, ಉಮಾ ಕಾರಜೋಳ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ ಮೂಡೇರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts