More

    10 ಸಾವಿರ ರೂ. ಲಂಚಕ್ಕೆ ಕೈಯೊಡ್ಡಿ 5 ವರ್ಷ ಜೈಲುಶಿಕ್ಷೆಗೊಳಗಾದ!; ಕುಡಿಯುವ ನೀರಿಗೂ ಲಂಚ!

    ಬೆಂಗಳೂರು: ವಾಣಿಜ್ಯ ಕಟ್ಟಡಕ್ಕೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು 10 ಸಾವಿರ ರೂ. ಲಂಚ ಪಡೆದ ಜಲಮಂಡಳಿ ಕಿರಿಯ ಇಂಜಿನಿಯರ್‌ಗೆ 5 ವರ್ಷ ಜೈಲು, 50 ಸಾವಿರ ರೂ. ದಂಡ ವಿಧಿಸಿ 23ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ನಾಗರಬಾವಿ 2ನೇ ಉಪ ವಿಭಾಗದ ಕಿರಿಯ ಇಂಜಿನಿಯರ್ ಎಚ್. ಬಿ. ಚನ್ನೇಶಪ್ಪ ಶಿಕ್ಷೆಗೆ ಗುರಿಯಾದ ಅಪರಾಧಿ.

    ಟಿ.ದಾಸರಹಳ್ಳಿಯ ನಿವಾಸಿಯೊಬ್ಬರು ವಾಣಿಜ್ಯ ಕಟ್ಟಡಕ್ಕೆ ಕಾವೇರಿ ನೀರಿನ ಸಂಪರ್ಕ ನೀಡುವಂತೆ ನಾಗರಬಾವಿ ಉಪ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಸಂಪರ್ಕ ಕಲ್ಪಿಸಲು 30 ಸಾವಿರ ರೂ. ಲಂಚ ಕೊಡುವಂತೆ ಚನ್ನೇಶಪ್ಪ, ಬೇಡಿಕೆ ಇಟ್ಟಿದ್ದರು.

    ನೊಂದ ಅರ್ಜಿದಾರ ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು, ಅರ್ಜಿದಾರನಿಂದ ಲಂಚ ಪಡೆಯುವಾಗ ಟ್ರ್ಯಾಪ್ ಮಾಡಿದ್ದರು. ಪ್ರಕರಣದ ತನಿಖೆ ಪೂರ್ಣಗೊಳಿಸಿ ಇಂಜಿನಿಯರ್ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಕೆ. ಲಕ್ಷ್ಮೀನಾರಾಯಣ ಭಟ್ ಅವರು, ಆರೋಪಿತ ಚನ್ನೇಶಪ್ಪ ಅಪರಾಧಿ ಎಂದು ಘೋಷಣೆ ಮಾಡಿ 5 ವರ್ಷ ಜೈಲು ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಕೆ. ಸರೋಜಾ ವಾದ ಮಂಡಿಸಿದ್ದರು.

    ಪಕ್ಕದ್ಮನೆ ಮಗುವನ್ನು ಕೊಲೆ ಮಾಡಿದ್ದವ ತನ್ನ ತಾನೇ ಕೊಂದುಕೊಂಡ; ಜೈಲಲ್ಲೇ ಆತ್ಮಹತ್ಯೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts