More

    ನಿಮಗೆಲ್ಲ ಗೊತ್ತಾ ವಿಶ್ವದಲ್ಲೇ ಬಹುದೊಡ್ಡ ಕ್ರೀಡಾಂಗಣವನ್ನು ಮೋದಿ ನಿರ್ಮಾಣ ಮಾಡುತ್ತಿದ್ದಾರೆ: ಭಾರತ ಪ್ರವಾಸ ಕುರಿತು ಟ್ರಂಪ್​ ಮಾತು

    ವಾಷಿಂಗ್ಟನ್​: ಮೊದಲ ಭಾರತ ಪ್ರವಾಸಕ್ಕಾಗಿ ಎದುರು ನೋಡುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರು ತಿಳಿಸಿದ್ದು, ಉಭಯ ರಾಷ್ಟ್ರಗಳು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲಿವೆ ಎಂಬ ಸೂಚನೆಯನ್ನು ನೀಡಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಟ್ರಂಪ್​ ಫೆ. 24 ಮತ್ತು 25 ಭಾರತ ಪ್ರವಾಸ ಮಾಡಲಿದ್ದಾರೆ. ಎರಡು ದಿನಗಳ ಭೇಟಿಯಲ್ಲಿ ದೆಹಲಿ ಮಾತ್ರವಲ್ಲದೆ, ಪ್ರಧಾನಿ ಮೋದಿ ತವರು ಗುಜರಾತಿನ ಅಹಮದಾಬಾದ್​ನಲ್ಲಿ ಜಂಟಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಮೋದಿ ಓರ್ವ ಶ್ರೇಷ್ಠ ಜಂಟಲ್​ಮನ್​ ಮತ್ತು ನಾನು ಭಾರತ ಪ್ರವಾಸಕ್ಕೆ ಎದುರು ನೋಡುತ್ತಿದ್ದೇನೆ. ಈ ತಿಂಗಳ ಅಂತ್ಯದಲ್ಲಿ ನಾನು ಭಾರತಕ್ಕೆ ತೆರಳಿಲಿದ್ದೇನೆ ಎಂದು ಓವಲ್​ನಲ್ಲಿರು ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತ ಪ್ರವಾಸದ​ ದಿನಾಂಕವನ್ನು ವೈಟ್​ಹೌಸ್​ ಪ್ರಕಟಿಸಿದ ದಿನದ ಬೆನ್ನಲ್ಲೇ ಟ್ರಂಪ್​ ಪ್ರತಿಕ್ರಿಯೆ ನೀಡಿದ್ದಾರೆ.

    ಸರಿ ಎನಿಸುವ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವುದಾಗಿ ಇದೇ ವೇಳೆ ಟ್ರಂಪ್​ ತಿಳಿಸಿದರು. ಈ ಕುರಿತು ನೂತನ ಅಮೆರಿಕ ಭಾರತೀಯ ರಾಯಭಾರಿ ತರಂಜಿತ್​ ಸಿಂಗ್​ ಮಾತನಾಡಿ, ಮುಂಬರುವ ಟ್ರಂಪ್​ ಭಾರತ ಪ್ರವಾಸ ಮೋದಿ ಮತ್ತು ಟ್ರಂಪ್​ ನಡುವಿನ ವೈಯಕ್ತಿಕ ಶಕ್ತಿಯುತ ಸಂಬಂಧದ ಪ್ರತಿಬಿಂಬವಾಗಿರಲಿದೆ ಎಂದು ಹೇಳಿದರು.

    ಕಳೆದ ಮೂರು ವರ್ಷಗಳಿಂದ ಪ್ರಧಾನಿ ಮೋದಿ ಮತ್ತು ಟ್ರಂಪ್​ ನಡುವೆ ಉತ್ತಮ ಸ್ನೇಹ ಬೆಳೆದಿದೆ. ನಾಲ್ಕು ಬಾರಿ ಅಮೆರಿಕ ಪ್ರವಾಸ ಸೇರಿದಂತೆ 2019ರಲ್ಲಿ ಅಮೆರಿಕದ ಹ್ಯೂಸ್ಟನ್​ನಲ್ಲಿ ನಡೆದ ಹೌಡಿ ಮೋದಿ ಹೆಸರಿನ ಬೃಹತ್​ ಕಾರ್ಯಕ್ರಮದಲ್ಲಿ ಮೋದಿ-ಟ್ರಂಪ್​ ಭಾಗವಹಿಸಿ 50 ಸಾವಿರ ಮಂದಿಯನ್ನು ಇಂಡಿಯನ್-ಅಮೆರಿಕರನ್ನು ಉದ್ದೇಶಿಸಿ ಮಾತನಾಡಿದ್ದರು.

    ಭಾರತ ಪ್ರವಾಸಕ್ಕೆ ತುಂಬಾ ಉತ್ಸುಕನಾಗಿದ್ದೇನೆಂದು ತಿಳಿಸಿದ ಟ್ರಂಪ್​, ಪ್ರಧಾನಿ ಮೋದಿಯೊಂದಿಗಿನ ಫೋನ್​ ಸಂಭಾಷಣೆ ಬಗ್ಗೆ ಮಾತನಾಡಿ ಹಾಸ್ಯ ಚಟಾಕಿಯನ್ನು ಹಾರಿಸಿದರು.

    ಕಳೆದ ಬಾರಿಯ ಹೌಡಿ ಮೋದಿ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರ ಸಂಖ್ಯೆ ಮೋದಿ ಅವರಿಗೆ ತೃಪ್ತಿ ತಂದಿಲ್ಲ. ಸಾಮಾನ್ಯವಾಗಿ 40 ರಿಂದ 50 ಸಾವಿರ ಮಂದಿ ಮಾತ್ರ ಇದ್ದರು. ನಾವು ಮಿಲಿಯನ್ಸ್​ ಮಂದಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು. ಸುಮಾರು 5ರಿಂದ 7 ಮಿಲಿಯನ್ಸ್​ ಮಂದಿ ವಿಮಾನ ನಿಲ್ದಾಣದಿಂದ ಅಹಮದಾಬಾದ್​ನ ಸ್ಟೇಡಿಯಂವರೆಗೆ ಇರಲಿದ್ದಾರೆ ಎಂದು ಮೋದಿ ಹೇಳಿದ್ದಾಗಿ ತಿಳಿಸಿದರು.

    ನಿಮಗೆಲ್ಲ ಗೊತ್ತಾ ವಿಶ್ವದಲ್ಲೇ ಅದೊಂದು ಬಹುದೊಡ್ಡ ಸ್ಟೇಡಿಯಂ. ಮೋದಿ ಅದನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದು ಬಹತೇಕ ಪೂರ್ಣಗೊಂಡಿದೆ ಎಂದು ಇದೇ ವೇಳೆ ಹೇಳಿದರು. ಟ್ರಂಪ್​ ಮಾತಿನ ಅರ್ಥ ಇಬ್ಬರು ನಾಯಕರು ಅಹಮದಾಬಾದ್​ನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಮೊಟೇರಾ ಸ್ಟೇಡಿಯಂನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಅಂದಹಾಗೆ ಹೊಸದಾಗಿ ನಿರ್ಮಾಣ ಮಾಡಲಾಗಿರುವ ಮೊಟೇರಾ ಸ್ಟೇಡಿಯಂ 100,000 ಆಸನ ಸಾಮರ್ಥ್ಯವನ್ನು ಹೊಂದಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್​ ಸ್ಟೇಡಿಯಂಗಿಂತಲೂ ಇದು ಬಹುದೊಡ್ಡ ಕ್ರಿಕೆಟ್​ ಸ್ಟೇಡಿಯಂ ಆಗಿರಲಿದೆ. ಸುಮಾರು 100 ಮಿಲಿಯನ್​ ಡಾಲರ್​ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts