More

    ಕರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾದ ವಿದ್ಯಾರ್ಥಿಗಳ ಪಡೆ: 5 ಸಾವಿರ ಜನರಿಂದ ಸ್ವಯಂ ನೋಂದಣಿ

    ಬೆಂಗಳೂರು: ಕರೊನಾ ವಿರುದ್ಧ ಹೋರಾಟಕ್ಕೆ ಎಲ್ಲರ ಸಹಕಾರವೂ ಅಗತ್ಯ. ಈ ಯುದ್ಧವನ್ನು ಮನೆಯಲ್ಲಿ ಕುಳಿತೇ ಮಾಡಬೇಕಿದೆ. ಎಲ್ಲರೂ ಮನೆಯಲ್ಲಿಯೇ ಇರಿ ಎಂದು ಸರ್ಕಾರ ಮನವಿ ಮಾಡುತ್ತಲೇ ಇದೆ.

    ಆದರೆ, ಈ ಹೋರಾಟದ ಮುಂಚೂಣಿಯಲ್ಲಿರುವವರು ವೈದ್ಯರು, ದಾದಿಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ. ಎಲ್ಲರೂ ಮನೆಯಲ್ಲಿರುವಂತೆ ಇವರು ಇರಲಾಗುವುದಿಲ್ಲ. ಕರೊನಾ ವಿರುದ್ಧ ಮುಖಾಮುಖಿ ಯದ್ಧ ಇವರದ್ದು. ರೋಗಿಗಳ ಆರೈಕೆ, ಸೋಂಕು ವ್ಯಾಪಿಸದಂತೆ ತಡೆಗಟ್ಟುವುದು, ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಸೌಕರ್ಯಗಳನ್ನು ಒದಗಿಸುವಲ್ಲಿ ಅರೆ ವೈದ್ಯಕೀಯ ಪಡೆಯ ಪಾತ್ರ ಹಿರಿದಾಗಿದೆ.

    ಅರೆ ವೈದ್ಯಕೀಯ ಕೋರ್ಸ್​ ಪೂರೈಸಿದವರು ಮಾತ್ರವಲ್ಲದೆ, ವಿದ್ಯಾರ್ಥಿಗಳ ಸಹಾಯವನ್ನು ಪಡೆಯುವ ನಿಟ್ಟಿನಲ್ಲಿ ಕರ್ನಾಟಕ ನರ್ಸಿಂಗ್​ ಹಾಗೂ ಅರೆ ವೈದ್ಯಕೀಯ ವಿ ಜ್ಞಾನಗಳ ನಿಯಂತ್ರಣ ಮಂಡಳಿ, ಅರೆವೈದ್ಯಕೀಯ ಮಂಡಳಿ ವತಿಯಿಂದ ಕೋವಿಡ್​-19 ವಾರಿಯರ್ಸ್​ ಆಗಿ ನೋಂದಾಯಿಸಿಕೊಳ್ಳಲು ಕರೆ ಮನವಿ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಸ್ವಯಂಪ್ರೇರಣೆಯಿಂದ ಸ್ಪಂದಿಸಿದ ಕರ್ನಾಟಕದ ವಿವಿಧ ಕಾಳೇಜುಗಳ ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

    ನೋಂದಣಿ ವೇಳೆ ಅವರ ವಿಳಾಸ, ಸಂಪರ್ಕ ಸಂಖ್ಯೆ, ಯಾವ ಜಿಲ್ಲೆ ಹಾಗೂ ತಾಲೂಕಿನಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುತ್ತೀರಿ ಎಂಬ ವಿವರಗಳನ್ನು ಪಡೆಯಲಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳುವ ಚಿಂತನೆ ನಡೆಸಲಾಗಿದೆ.

    ಈ ಕಾರ್ಯದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು pmb.campusuite.in/covid19/enroll.aspx ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಮಂಡಳಿಯ ವಿಶೇಷಾಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಇನ್ನೂ ನಿಂತಿಲ್ಲ ತಬ್ಬಿಘಿಗಳ ಹುಚ್ಚಾಟ?: ಬಾಟಲ್​ನಲ್ಲಿ ಮೂತ್ರ ತುಂಬಿಸಿ ಎಸೆದವರ ವಿರುದ್ಧ ಕೇಸ್​ ದಾಖಲು

    ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮೇ 15ರವರೆಗೆ ಮುಚ್ಚಿ: ಸಚಿವರ ಗುಂಪಿನಿಂದ ಕೇಂದ್ರ ಸರ್ಕಾರಕ್ಕೆ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts