More

    5 ಲಕ್ಷ ಕೋಟಿ ರೂ. ತಲುಪಿದ ಸಿಂಡಿಕೇಟ್ ಬ್ಯಾಂಕ್ ವಹಿವಾಟು

    ಬೆಂಗಳೂರು: ಸಾರ್ವಜನಿಕ ಬ್ಯಾಂಕಿಂಕ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಿಂಡಿಕೇಟ್ ಬ್ಯಾಂಕ್, ಪ್ರಸಕ್ತ ಆರ್ಥಿಕ ವರ್ಷದ 3ನೇ ತ್ರೖೆಮಾಸಿಕದ ಅಂತ್ಯಕ್ಕೆ 5 ಲಕ್ಷ ಕೋಟಿ ರೂ. ವಹಿವಾಟು ನಡೆಸಿದ್ದು, 435 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.

    ಕಳೆದ ಸಾಲಿನ ಇದೇ ತ್ರೖೆಮಾಸಿಕ ಅವಧಿಯ ಹೋಲಿಕೆಯಲ್ಲಿ 108 ಕೋಟಿ ರೂ. ಇದ್ದ ನಿವ್ವಳ ಆದಾಯ ಈ ವರ್ಷ 435 ಕೋಟಿ ರೂ.ಗೆ ಹೆಚ್ಚಳವಾಗಿದೆ.

    2018ರ ಡಿಸೆಂಬರ್​ಗೆ ಕೊನೆಗೊಂಡ ತ್ರೖೆಮಾಸಿಕದಲ್ಲಿ 1,619 ಕೋಟಿ ರೂ. ಇದ್ದ ನಿವ್ವಳ ಬಡ್ಡಿ ಆದಾಯ (ಎನ್​ಐಐ) ಶೇ.16 ಏರಿಕೆಯಾಗಿದ್ದು, 2019ರ ಮೂರನೇ ತ್ರೖೆಮಾಸಿಕದಲ್ಲಿ ರೂ. 1,871 ಕೋಟಿ ರೂ.ಗೆ ಹೆಚ್ಚಳವಾಗಿದೆ. ನಿರ್ವಹಣಾ ವೆಚ್ಚಗಳು 2018 ಡಿಸೆಂಬರ್​ನಲ್ಲಿ 1,604 ಕೋಟಿಯಿಂದ ಶೇ.10 ಇಳಿಕೆಯಾಗಿದ್ದು, 2019ರಲ್ಲಿ 1,450 ಕೋಟಿ ರೂ. ಇಳಿಕೆ ಕಂಡುಬಂದಿದೆ. ಹಿಂದಿನ ವರ್ಷದ 3ನೇ ತ್ರೖೆಮಾಸಿಕದಲ್ಲಿ 634 ಕೋಟಿ ರೂ. ಇದ್ದ ಕಾರ್ಯಾಚರಣೆ ಲಾಭವು ಶೇ.111ರಷ್ಟು ಹೆಚ್ಚಳವಾಗಿದ್ದು, ಈ ವರ್ಷದ 3ನೇ ತ್ರೖೆಮಾಸಿಕದಲ್ಲಿ 1,336 ಕೋಟಿ ರೂ.ಗೆ ಸುಧಾರಿಸಿದೆ ಎಂದು ಸಿಂಡಿಕೇಟ್ ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮೃತ್ಯುಂಜಯ ಮಹಾಪಾತ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಬ್ಯಾಂಕ್​ನ ಅನುತ್ಪಾದಕ ಆಸ್ತಿಯು 2018 ಡಿಸೆಂಬರ್​ನಲ್ಲಿ ಶೇಕಡ 12.54 ಇದ್ದದ್ದು, 2019 ಡಿಸೆಂಬರ್​ಗೆ ಇದರ ಪ್ರಮಾಣ ಶೇಕಡ 11.33ಕ್ಕೆ ಇಳಿಕೆಯಾಗಿದೆ. ಕಳೆದ ಡಿಸೆಂಬರ್​ನಲ್ಲಿದ್ದ ಶೇಕಡ 64.81 ನಿಬಂಧನೆ ವ್ಯಾಪ್ತಿ ಅನುಪಾತ 2019 ಡಿಸೆಂಬರ್​ನಲ್ಲಿ ಶೇ.69.28 ಸುಧಾರಿಸಿದೆ ಎಂದರು.

    ಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ಕೃಷ್ಣನ್, ಅಜಯ್ ಕೆ. ಖುರಾನಾ, ಸಿಎಫ್​ಒ ಯು.ಎಸ್. ಮಜುಂದಾರ್ ಮತ್ತಿತರರಿದ್ದರು.

    ಒಟ್ಟು ವ್ಯವಹಾರ ಶೇ.7 ಹೆಚ್ಚಳ

    ಬ್ಯಾಂಕಿನ ಒಟ್ಟು ವ್ಯವಹಾರವು 2019 ರ ಡಿಸೆಂಬರ್​ಗೆ 5,00,971 ಕೋಟಿ ರೂ.ಗೆ ಏರಿಕೆಯಾಗಿದ್ದು, 2018ರ ಡಿಸೆಂಬರ್​ನಲ್ಲಿ ದಾಖಲಾದ 4,67,911 ಕೋಟಿ ರೂ.ಗೆ ಹೋಲಿಸಿದರೆ ಶೇ.7 ಹೆಚ್ಚಳವಾಗಿದೆ. ಬ್ಯಾಂಕಿನ ಒಟ್ಟು ಠೇವಣಿ 2018ರಲ್ಲಿ 2,59,064 ಕೋಟಿ ರೂ. ಇದ್ದು, 2019 ರ ಡಿಸೆಂಬರ್​ಗೆ 2,77,368 ಕೋಟಿ ರೂ.ಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts