More

    ಆಗಾಗ್ಗೆ ಬಾಯಾಡಿಸುವ ಬಯಕೆಯೇ ? ಇಲ್ಲಿವೆ ನೋಡಿ, ಐದು ಆರೋಗ್ಯಕರ ಆಯ್ಕೆಗಳು

    ಬೆಂಗಳೂರು : ಕರೊನಾ ಹಿನ್ನೆಲೆಯಲ್ಲಿ ಮತ್ತೊಮ್ಮೆ ವರ್ಕ್​ ಫ್ರಂ ಹೋಂ ಮಾಡಲು ಅನೇಕ ಉದ್ಯೋಗಿಗಳು ತಯಾರಾಗುತ್ತಿದ್ದಾರೆ. ಮನೆಯಲ್ಲೇ ಇದ್ದು ಕೆಲಸ ಮಾಡುವುದಕ್ಕೆ ಎಷ್ಟೋ ಪ್ರಯೋಜನಗಳಿರಬಹುದು. ಆದರೆ, ಒಂದು ಸಮಸ್ಯೆ ಎಂದರೆ ಆಗಾಗ್ಗೆ ಅಡುಗೆಮನೆಗೆ ಹೋಗಿ ರೆಡಿ ಸ್ನ್ಯಾಕ್ಸ್​, ಕುರುಕಲುತಿಂಡಿ, ಚಾಕೊಲೇಟು ಇತ್ಯಾದಿಯನ್ನು ತೆಗೆದು ಬಾಯಾಡಿಸುವ ಅವಕಾಶ ಸಿಗುತ್ತದೆ. ಇದರಿಂದ ತೂಕ ಹೆಚ್ಚುವ ಆತಂಕದೊಂದಿಗೆ ಆರೋಗ್ಯ ಹಾಳಾಗುವ ಅಪಾಯ ಬೇರೆ.

    ಈ ದೃಷ್ಟಿಯಿಂದ ಬಾಯಾಡಿಸಲು ಸುಲಭವಾದ ಆರೋಗ್ಯದಾಯಕವಾದ ಕೆಲವು ಪದಾರ್ಥಗಳ ಪಟ್ಟಿ ಇಲ್ಲಿದೆ ನೋಡಿ –

    1. ಹುರಿಗಾಳು – ಆಲೂಗೆಡ್ಡೆ ಚಿಪ್ಸ್​​ನ ಪ್ಯಾಕೆಟ್ ಹಿಡಿಯುವ ಬದಲು ಹುರಿದ ಕಡಲೆಕಾಳುಗಳನ್ನು ತಂದಿಟ್ಟುಕೊಳ್ಳಿ. ಅಷ್ಟೇ ಅಲ್ಲ, ವಿವಿಧ ಕಾಳುಗಳ ಮಿಶ್ರಣ ಮತ್ತು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಲಭ್ಯವಿರುವ ಬ್ರಾಡ್​ಬೀನ್ಸ್, ಫ್ಲಾಕ್ಸ್​ ಸೀಡ್ಸ್, ಸೂರ್ಯಕಾಂತಿ ಬೀಜ ಮುಂತಾದವು ಆರೋಗ್ಯವರ್ಧಕ ಆಯ್ಕೆ. ಕಡಿಮೆ ಕ್ಯಾಲರಿ ನೀಡುವ ಇವುಗಳು ನಾರಿನಾಂಶ ಮತ್ತು ಪ್ರೋಟೀನ್​ ಅಂಶಗಳನ್ನು ಕೂಡ ಯಥೇಚ್ಛವಾಗಿ ಒದಗಿಸುತ್ತವೆ.

    ಇದನ್ನೂ ಓದಿ: ಜಿಮ್​ನಲ್ಲಿ ಗಂಟೆಗಟ್ಟಲೆ ಕಳೆದರೂ ಸಣ್ಣ ಆಗುತ್ತಿಲ್ಲವಾ.. ? ನೀವು ಮಾಡುತ್ತಿರೋ ತಪ್ಪೇನು ಗೊತ್ತಾ…

    2. ಡ್ರೈ ಫ್ರೂಟ್ಸ್ : ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ವಾಲ್​ನಟ್​, ಅಂಜೂರ, ಕರ್ಜೂರ ಮುಂತಾದವು ಆ ಪುಟ್ಟ ಹಸಿವನ್ನು ನೀಗಿಸುವಲ್ಲಿ ತುಂಬಾ ಉಪಯುಕ್ತವಾದವು. ಜೊತೆಗೆ, ಮೆಟಬಾಲಿಸಂಅನ್ನು ಉತ್ತಮಗೊಳಿಸಿ ನಮ್ಮ ದೇಹದ ಆರೋಗ್ಯವನ್ನೂ ಹೆಚ್ಚಿಸುತ್ತವೆ.

    3. ಪಾಪ್​​ಕಾರ್ನ್ : ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನುವುದಕ್ಕಿಂತ ಒಂದಿಷ್ಟು ಪಾಪ್​ಕಾರ್ನ್ ತಿನ್ನುವುದು ಆರೋಗ್ಯಕರ. ಇಡೀ ಧಾನ್ಯದಿಂದ ತಯಾರಾಗುವ ಒಂದು ಕಪ್​ ಪಾಪ್​​ಕಾರ್ನ್, ಡಯಟರಿ ಫೈಬರ್​ ಮತ್ತು ಪ್ರೋಟೀನ್ ಹೆಚ್ಚಿರುವ ತಿಂಡಿ. ಆದರೆ ಚೀಸ್ ಅಥವಾ ಬಟರ್ ಮಿಶ್ರಿತ ಪಾಪ್​ಕಾರ್ನ್​ಗಳಿಂದ ದೂರವಿರಿ.

    4. ತರಕಾರಿಗಳು : ಕ್ಯಾರೆಟ್, ಹುರಳಿಕಾಯಿ, ಸೌತೆಕಾಯಿ, ಮೂಲಂಗಿ ಮುಂತಾದ ತರಕಾರಿಗಳನ್ನು ಚೆನ್ನಾಗಿ ಸ್ವಚ್ಛ ಮಾಡಿ ಕತ್ತರಿಸಿಟ್ಟುಕೊಂಡರೆ, ಹಸಿಯಾಗಿಯೇ ಸೇವಿಸಬಹುದು. ಜೀರೋ ಕ್ಯಾಲರಿ ಆಹಾರವಾದ ಇವುಗಳನ್ನು ಬೇಕೆನಿಸುವಷ್ಟು ಪ್ರಮಾಣದಲ್ಲಿ ತಿನ್ನಬಹುದು !

    ಇದನ್ನೂ ಓದಿ: ಹೃದಯದ ಚಿಕಿತ್ಸೆಗೂ, ಕಿವುಡುತನಕ್ಕೂ ಸಂಬಂಧವಿದೆಯಾ? ಮಾನಸಿಕ ಹಿಂಸೆಯಾಗಿದೆ… ಪರಿಹಾರ ಹೇಳಿ…

    5. ಗ್ರಾನೊಲಾ ಬಾರ್ : ಚಾಕೊಲೇಟ್ ಮತ್ತು ಇತರ ಸಿಹಿತಿಂಡಿಗಳನ್ನು ತಿನ್ನುವ ಬದಲು ಗ್ರಾನೊಲಾ ಬಾರ್​ಗಳನ್ನು ಟ್ರೈ ಮಾಡಿ. ಓಟ್ಸ್ ಮತ್ತು ಡ್ರೈ ಫ್ರೂಟ್ಸ್​ನಿಂದ ಕಡಿಮೆ ಸಕ್ಕರೆಯೊಂದಿಗೆ ಮಾಡಿರುವ ಬಾರ್​ಗಳನ್ನು ಆಯ್ಕೆ ಮಾಡಿ ಖರೀದಿಸಿ ಅಥವಾ ಮನೆಯಲ್ಲೇ ತಯಾರಿಸಿಟ್ಟುಕೊಳ್ಳಿ.

    ಆರೋಗ್ಯಕರವಾದ ಈ ತಿನಿಸುಗಳನ್ನು ನೀವೂ ತಿನ್ನಿ. ಮನೆಯಲ್ಲೇ ಇದ್ದು ಸದಾ ಏನಾದರೂ ಕೊಡಮ್ಮ ಎಂದು ದುಂಬಾಲು ಬೀಳುವ ಪುಟಾಣಿಗಳಿಗೂ ಕೊಡಿ. (ಏಜೆನ್ಸೀಸ್)

    ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಆರೈಕೆಗಾಗಿ ಹೀಗೆ ಮಾಡಿ

    ‘ಮನೆಮನೆಯಲ್ಲಿ ರಾಮಾಯಣ’ ಯೋಜನೆ ! ನಿತ್ಯ ಪಾರಾಯಣ ಮಾಡಲು ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts