More

    ಏಷ್ಯಾಡ್​ನಲ್ಲಿ 3ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದರೂ ಬೆಳ್ಳಿ ಗೆದ್ದ ಭಾರತದ ರಿಲೇ ತಂಡ!

    ಹಾಂಗ್​ಝೌ: ಮುಹಮದ್​ ಅಜ್ಮಲ್​, ರಮೇಶ್​ ರಾಜೇಶ್​, ವಿದ್ಯಾ ರಾಮರಾಜ್​, ಶುಭಾ ವೆಂಕಟೇಶನ್​ ಒಳಗೊಂಡ ಭಾರತ ತಂಡ ಏಷ್ಯನ್​ ಗೇಮ್ಸ್​​ನ 4/400 ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ ಬಹರೇನ್​, ಶ್ರೀಲಂಕಾದ ಹಿಂದೆ 3ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿತು. ಆದರೆ ಶ್ರೀಲಂಕಾ ತಂಡ ಲೇನ್​ ನಿಯಮ ಉಲ್ಲಂಘನೆ ಮಾಡಿದ್ದರಿಂದ ಸ್ಪರ್ಧೆಯಿಂದ ಅನರ್ಹಗೊಂಡಿತು. ಇದರಿಂದಾಗಿ ಭಾರತಕ್ಕೆ ಕಂಚಿನಿಂದ ರಜತ ಪದಕಕ್ಕೆ ಬಡ್ತಿ ಲಭಿಸಿತು. ಭಾರತ 3 ನಿಮಿಷ, 14.34 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿತು. ಶ್ರೀಲಂಕಾ 3 ನಿಮಿಷ, 14.25 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿದ್ದರೂ ಅನರ್ಹಗೊಂಡ ಕಾರಣ, ಕಜಾಕ್​ಸ್ತಾನಕ್ಕೆ ಕಂಚು ಲಭಿಸಿತು.

    ಆನ್ಸಿ ರಜತ ನೆಗೆತ, ಶೈಲಿಗೆ ನಿರಾಸೆ
    ಮಹಿಳೆಯರ ಲಾಂಗ್​ ಜಂಪ್​ನಲ್ಲಿ 6.63 ಮೀ. ನೆಗೆತದ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರಿದ ಆನ್ಸಿ ಸೋಜನ್​ ರಜತ ಪದಕಕ್ಕೆ ಕೊರಳೊಡ್ಡಿದರು. ಚೀನಾದ ಶಿಖಿ ಕ್ಸಿಯೋಂಗ್​ (6.73 ಮೀ) ಚಿನ್ನ ಗೆದ್ದರು. ಪದಕ ಗೆಲ್ಲುವ ಫೇವರಿಟ್​ ಆಗಿದ್ದ ಭಾರತದ ಮತ್ತೋರ್ವ ಸ್ಪರ್ಧಿ ಹಾಗೂ ಮಾಜಿ ಲಾಂಗ್​ಜಂಪ್​ ತಾರೆ ಅಂಜು ಬಾಬಿ ಜಾರ್ಜ್​ ಶಿಷ್ಯೆ ಶೈಲಿ ಸಿಂಗ್​ 6.48 ಮೀ. ನೆಗೆಯಲಷ್ಟೇ ಶಕ್ತರಾಗಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು.

    ಪಾರುಲ್​ಗೆ ಬೆಳ್ಳಿ, ಪ್ರೀತಿಗೆ ಕಂಚು
    ಅಥ್ಲೆಟಿಕ್ಸ್​ ಸ್ಪರ್ಧೆಯಲ್ಲಿ ಸೋಮವಾರ ನಡೆದ ಮಹಿಳೆಯರ 3 ಸಾವಿರ ಮೀ. ಸ್ಟೀಪಲ್​ಚೇಸ್​ನಲ್ಲಿ ಪಾರುಲ್​ ಚೌಧರಿ 9 ನಿಮಿಷ, 27.63 ಸೆಕೆಂಡ್​ಗಳಲ್ಲಿ ಓಟ ಮುಗಿಸಿ ಬೆಳ್ಳಿ ಪದಕ ಗೆದ್ದುಕೊಂಡರೆ, ಭಾರತದ ಇನ್ನೋರ್ವ ಓಟಗಾರ್ತಿ ಪ್ರೀತಿ 9 ನಿಮಿಷ, 43.32 ಸೆಕೆಂಡ್​ಗಳಲ್ಲಿ ಓಡಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಬಹರೇನ್​ನ ಯವಿ ವಿನ್​ಫ್ರೆಡ್​ ಮುಟಿಲ್​ (9ನಿ, 18.28ಸೆ) ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು.

    VIDEO: ಇಶ್​ ಸೋಧಿ ರನೌಟ್​ ಮಾಡಿ ವಾಪಸ್​ ಕರೆದ ಬಾಂಗ್ಲಾ; ಹೃದಯ ಗೆದ್ದ ಕ್ರೀಡಾಸ್ಫೂರ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts