More

    48 ಗಂಟೆ ಚುನಾವಣಾ ಪ್ರಚಾರ ನಿಷೇಧ : ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ನಾಯಕ

    ಗೌಹಾಟಿ : ಅಸ್ಸಾಂ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕರಾದ ಹಿಮಂತ್ ಬಿಸ್ವ ಸರ್ಮ ಅವರು ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಿರುವ ಚುನಾವಣಾ ಆಯೋಗದ ಆದೇಶದ ವಿರುದ್ಧ ಸರ್ಮ ಇಂದು ಗೌಹಾಟಿ ಹೈಕೋರ್ಟ್​ನಲ್ಲಿ ಅಪೀಲು ಸಲ್ಲಿಸಿದ್ದಾರೆ.

    ಕಾಂಗ್ರೆಸ್​ ಪಕ್ಷದ ದೂರಿನ ಮೇರೆಗೆ ನಿನ್ನೆ ರಾತ್ರಿ ಆಯೋಗವು ಸರ್ಮ ಅವರು 48 ಗಂಟೆಗಳ ಕಾಲ ಕ್ಯಾಂಪೇನ್​ ಮಾಡದಂತೆ ನಿಷೇಧಾಜ್ನೆ ಹೊರಡಿಸಿತ್ತು. ಸರ್ಮ ಅವರು, ಬೋಡೋಲ್ಯಾಂಡ್​ ಪೀಪಲ್ಸ್​ ಫ್ರಂಟ್​ನ ಹಗ್ರಾಮಾ ಮೊಹಿಲರಿ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ದುರ್ಬಳಕೆ ಮಾಡಿ ಜೈಲಿಗೆ ಕಳುಹಿಸುವುದಾಗಿ ಬಹಿರಂಗವಾಗಿ ಧಮಕಿ ಹಾಕಿದ್ದರು ಎಂದು ಆರೋಪಿಸಲಾಗಿತ್ತು.

    ಇದನ್ನೂ ಓದಿ: ಮಸ್ಕಿ ಉಪಚುನಾವಣೆಯ ಪ್ರಚಾರಕ್ಕೆ ಆಗಮಿಸಿದ ಬಿಜೆಪಿ ನಾಯಕರಿಗೆ ಗ್ರಾಮಸ್ಥರ ತರಾಟೆ!

    ಆಯೋಗದ ನಿಷೇಧಾಜ್ನೆಯಿಂದಾಗಿ ರಾಜ್ಯದಲ್ಲಿ ಬಿಜೆಪಿಯ ಸ್ಟಾರ್ ಕಾಂಪೇನರ್​ಗಳಲ್ಲಿ ಒಬ್ಬರಾದ ಸರ್ಮ, ಪಕ್ಷದ ಚುನಾವಣಾ ಕಾರ್ಯನಿರ್ವಾಹಕರಾಗಿದ್ದಾರೆ ಕೂಡ. ಅವರು ಪ್ರಚಾರದಲ್ಲಿ ಭಾಗವಹಿಸದಿದ್ದರೆ ರಾಜ್ಯದಲ್ಲಿ ಬಿಜೆಪಿಗೆ ಭಾರೀ ಹೊಡೆತ ಬಿದ್ದಂತೆ ಎನ್ನಲಾಗಿದೆ. (ಏಜೆನ್ಸೀಸ್)

    ಅಭ್ಯರ್ಥಿ ಕಾರಿನಲ್ಲಿ ಇವಿಎಂ ಸಾಗಣೆ : ಮರುಮತದಾನ ಆದೇಶಿಸಿದ ಚುನಾವಣಾ ಆಯೋಗ

    VIDEO | ವೈರಲ್ ಆಗ್ತಿದೆ, ಶನಾಯಾ ಕಪೂರ್​ರ ಆಕರ್ಷಕ ಬೆಲ್ಲಿ ಡ್ಯಾನ್ಸ್

    “ಡೊನಾಲ್ಡ್ ಟ್ರಂಪ್ ರೀತಿಯಲ್ಲಿ ವರ್ತಿಸುತ್ತಿರುವ ಮಮತಾ”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts