More

    ನೀತಿ ಸಂಹಿತೆ ಉಲ್ಲಂಘನೆಯ 47 ಪ್ರಕರಣ ದಾಖಲು

    ಧಾರವಾಡ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ವೇಳೆ ಮಾ. ೧೬ರಿಂದ ಈವರೆಗೆ ನಗದು, ವಿವಿಧ ವಸ್ತು ಸೇರಿ ೯೦,೪೯,೫೭೪ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ೪೭ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಽಕಾರಿ, ಜಿಲ್ಲಾಽಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
    ಪ್ರಕಟಣೆ ನೀಡಿರುವ ಅವರು, ಸರಿಯಾದ ದಾಖಲೆಗಳಿಲ್ಲದ ಮತ್ತು ಚುನಾವಣಾ ಅಕ್ರಮಗಳಿಗೆ ಬಳಸಬಹುದಾದ ಸಂಶಯದ ಆಧಾರದಲ್ಲಿ ೧೧,೦೨,೪೭೦ ರೂ. ನಗದು, ೩,೩೧,೦೮೪ ರೂ. ಮೊತ್ತದ ೭೮೮.೧೯೦ ಲೀ. ಮದ್ಯ, ೩೮,೫೦,೦೦೦ ಮೌಲ್ಯದ ಬಂಗಾರದ ಆಭರಣ ಮತ್ತು ೨೯,೫೬,೭೯೦ ಮೌಲ್ಯದ ಮಿಕ್ಸರ್, ಸೀರೆ, ಪ್ಯಾಂಟ್ ಪೀಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಪ್ರತಿ ಚೆಕ್ ಪೋಸ್ಟ್ಗಳಲ್ಲಿ ಪೊಲೀಸ್, ವಾಣಿಜ್ಯ, ಅಬಕಾರಿ ಇಲಾಖೆಗಳ ಸಿಬ್ಬಂದಿ ಮತ್ತು ವಿಡಿಯೋಗ್ರಾಫರ್ ಇರುವ ತಂಡ ದಿನದ ೨೪ ಗಂಟೆ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ ಅಂದಾಜು ೮೭,೦೪೫ ವಾಹನಗಳನ್ನು ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾಽಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts