More

    ಅಗ್ರಸೇನ ಸೊಸೈಟಿಗೆ 45.33 ಲಕ್ಷ ರೂ. ಲಾಭ

    ಹುಬ್ಬಳ್ಳಿ: ನಗರದ ಮಹಾರಾಜ ಅಗ್ರಸೇನ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ 2019-20ನೇ ಸಾಲಿನಲ್ಲಿ 45.33 ಲಕ್ಷ ರೂ. ಲಾಭಗಳಿಸಿದೆ. ಸದಸ್ಯರಿಗೆ ಶೇ. 11ರಷ್ಟು ಲಾಭಾಂಶ ನೀಡಲು ನಿರ್ಧರಿಸಿದೆ.

    ಇತ್ತೀಚೆಗೆ ನಡೆದ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಈ ವಿಷಯ ಘೊಷಿಸಲಾಯಿತು. 2019-20ರಲ್ಲಿ ದುಡಿಯುವ ಬಂಡವಾಳ ಶೇ. 30ರಷ್ಟು ಹೆಚ್ಚಳವಾಗಿ 39.20 ಕೋ. ರೂ. ಆಗಿರುತ್ತದೆ. ಷೇರು ಬಂಡವಾಳ 1.29 ಕೋ., ನಿಧಿ 2.78 ಕೋ., ಠೇವಣಿ 32.95 ಕೋ. ಹಾಗೂ ಸಾಲ ಮತ್ತು ಮುಂಗಡಗಳು 11.38 ಕೋ. ಇರುತ್ತದೆ ಎಂದು ಸೊಸೈಟಿಯ ನಿರ್ದೇಶಕ ಅಮಿತ ಮಹಾಜನ ಸಭೆಗೆ ತಿಳಿಸಿದರು.

    ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ವೈ. ಕುಮಾರ ಮಾತನಾಡಿ, ಮಹಾರಾಜ ಅಗ್ರಸೇನ ಸೊಸೈಟಿಯು ಕೇವಲ 10 ವರ್ಷಗಳಲ್ಲಿ 39.20 ಕೋ. ದುಡಿಯುವ ಬಂಡವಾಳ ಹೊಂದಿ ರಾಜ್ಯದಲ್ಲಿ ಮಾದರಿ ಸಹಕಾರಿ ಸಂಘವಾಗಿದೆ ಎಂದು ಪ್ರಶಂಸಿಸಿದರು.

    ಸಂಸ್ಥಾಪಕ ಅಧ್ಯಕ್ಷ ಸುಭಾಷ ಮಹಾಜನ ಮಾತನಾಡಿ, ಇತ್ತೀಚೆಗೆ ಸಹಕಾರ ಕಾಯ್ದೆಗಳಲ್ಲಿ ಅನೇಕ ಬದಲಾವಣೆಯಾಗಿದ್ದು, ವಾರ್ಷಿಕ ಸಭೆಗೆ ಹಾಜರಾಗುವುದು ಮುಖ್ಯವಾಗಿರುತ್ತದೆ. ತಪ್ಪಿದಲ್ಲಿ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದರು.

    ಸೊಸೈಟಿಯ ಅಧ್ಯಕ್ಷ ಮುಕೇಶ ಅಗರ್ವಾಲ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಭರತ ಭೂಷಣ, ಭಾರತಿ ಮಹಾಜನ, ಅನಿತಾ ಮಹಾಜನ, ಸುಜೀತ ಯಾದುಕಾ, ಕೇದಾರ ಅಗರ್ವಾಲ, ಅಶೋಕಕುಮಾರ ಮಹಾಜನ, ಇತರರು ಇದ್ದರು. ಸುರೇಶ ಅಗರ್ವಾಲ ವಂದಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts