More

    ಕಾಸರಗೋಡು ಪ್ರಕರಣ 44ಕ್ಕೇರಿಕೆ

    ಕಾಸರಗೋಡು: ಕೇರಳದಲ್ಲಿ ಮಂಗಳವಾರ ಕರೊನಾ ವೈರಸ್‌ನ 14 ಹೊಸ ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು ಸಂತ್ರಸ್ತರ ಸಂಖ್ಯೆ 105ಕ್ಕೇರಿದೆ. ಕಾಸರಗೋಡಿನಲ್ಲಿ ಸೋಮವಾರದವರೆಗೆ 38 ಖಚಿತ ಪ್ರಕರಣಗಳಿದ್ದವು, ಮಂಗಳವಾರ ಹೊಸದಾಗಿ 6 ಪ್ರಕರಣ ಸೇರ್ಪಡೆಯಾಗಿದ್ದು, ಒಟ್ಟು ಕರೊನಾ ಪೀಡಿತರ ಸಂಖ್ಯೆ 44ಕ್ಕೆ ತಲುಪಿದೆ.

    ಸೋಂಕು ಬಾಧಿತರಲ್ಲಿ ಎಂಟು ಮಂದಿ ದುಬೈಯಿಂದ ಆಗಮಿಸಿದವರಾಗಿದ್ದು, ಇನ್ನು ಮೂವರಿಗೆ, ಇವರ ಸಂಪರ್ಕದಿಂದ ಸೋಂಕು ತಗುಲಿದೆ. ಒಬ್ಬ ಆರೋಗ್ಯ ಕಾರ್ಯಕರ್ತನೂ ಸೋಂಕು ಬಾಧಿತರ ಪಟ್ಟಿಯಲ್ಲಿದ್ದಾರೆ. ಇಬ್ಬರು ಕೋಯಿಕ್ಕೋಡ್ ನಿವಾಸಿಗಳಾಗಿದ್ದಾರೆ.

    ಕೇರಳದಲ್ಲಿ ಒಟ್ಟು 72460 ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಇವರಲ್ಲಿ 71994 ಮಂದಿ ಅವರ ಮನೆಗಳಲ್ಲಿ ಹಾಗೂ 467 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಮಂಗಳವಾರ ಒಂದೇ ದಿನ 164 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ 4516 ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದ್ದು, 3331 ಮಾದರಿ ನೆಗೆಟಿವ್ ಆಗಿದೆ. ಬಾಕಿ ಮಾದರಿ ತಪಾಸಣೆ ವರದಿ ಲಭಿಸಬೇಕಾಗಿದೆ.

    ಕೇರಳದಲ್ಲಿ ಮತ್ತಷ್ಟು ನಿಯಂತ್ರಣಕ್ರಮ ಕೈಗೊಳ್ಳಲಾಗಿದೆ. ಮಾರ್ಚ್ 25ರಿಂದ ತುರ್ತು ವೈದ್ಯಕೀಯ, ಔಷಧ ಸಾಗಾಟ, ನಿತ್ಯೋಪಯೋಗಿ ಸಾಗಾಟದ ವಾಹನ ಹೊರತುಪಡಿಸಿ, ಎಲ್ಲ ವಾಹನ ಸಂಚಾರ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts