More

    ಜಿಲ್ಲೆಯಲ್ಲಿ 43 ಕರೊನಾ ಪ್ರಕರಣ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ಜಿಲ್ಲೆಯಲ್ಲಿ ಮಂಗಳವಾರ 43 ಜನರಿಗೆ ಕರೊನಾ ದೃಢಪಟ್ಟಿದ್ದು, 182 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ ಎಂದು ಡಿಸಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಈವರೆಗೆ 9,820 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 8,943 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 180 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 697 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 528 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 169 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ತಾಲೂಕುವಾರು ವಿವರ: ಬ್ಯಾಡಗಿ-1, ಹಾನಗಲ್ಲ-5, ಹಾವೇರಿ-5, ಹಿರೇಕೆರೂರು-5, ರಾಣೆಬೆನ್ನೂರು-12, ಸವಣೂರು-10, ಶಿಗ್ಗಾಂವಿ-1 ಹಾಗೂ ಇತರೆ 4 ಜನರಿಗೆ ಸೇರಿ ಒಟ್ಟು 43 ಜನರಿಗೆ ಮಂಗಳವಾರ ಕರೊನಾ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣವಾಗಿ ಬ್ಯಾಡಗಿ-4, ಹಾನಗಲ್ಲ-39, ಹಾವೇರಿ-36, ಹಿರೇಕೆರೂರು-13, ರಾಣೆಬೆನ್ನೂರು-87, ಸವಣೂರ-3 ಸೇರಿ 182 ಜನರು ಮಂಗಳವಾರ ಬಿಡುಗಡೆ ಹೊಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts