More

    ಜ್ಞಾನಿಗಳ ಅನುಭವದ ಮಾತು ಹೆಚ್ಚು ಮೌಲ್ಯಯುತ

    ಕಮಲನಗರ: ಭಾವನಾತ್ಮಕ ಮತ್ತು ಆಧ್ಯಾತ್ಮಿಕವಾಗಿ ಬೆಳೆಯುವುದೇ ನಿಜವಾದ ಬದುಕು. ಲೌಕಿಕ ಸಂಪತ್ತಿಗಿಂತ ಜ್ಞಾನಿಗಳ ಅನುಭವದ ಮಾತು ಹೆಚ್ಚು ಮೌಲ್ಯಯುತವಾದುದು. ಅಧ್ಯಾತ್ಮದ ಸಿರಿಯೇ ಶಾಶ್ವತವಾಗಿದ್ದು, ಶಾಶ್ವತ ಸುಖದ ದಾರಿ ತೋರಿ ಮುನ್ನಡೆಸಿದ ಕೀರ್ತಿ ಗುರುವಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನುರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ನುಡಿದರು.

    ರಂಡ್ಯಾಳ ಗ್ರಾಮದಲ್ಲಿ ಗುರು ಚನ್ನಮಲ್ಲೇಶ್ವರರ ೪೨ನೇ ಜಾತ್ರೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ದಿವ್ಯಸಾನಿಧ್ಯ ವಹಿಸಿದ ಶ್ರೀಗಳು, ವೈಚಾರಿಕತೆಯ ಬಿರುಗಾಳಿಯಲ್ಲಿ ಸಂಸ್ಕೃತಿ ನಾಶಗೊಳ್ಳಬಾರದು, ಸುಖ ಸಂತೃಪ್ತಿಯ ಮೂಲ ಧರ್ಮ ಪರಿಪಾಲನೆಯಲ್ಲಿದ್ದು, ಭೌತಿಕ ಬದುಕಿನಲ್ಲಿ ಬಳಲಿ ಬಂದವರಿಗೆ ಅಧ್ಯಾತ್ಮ ಜ್ಞಾನ ಅರುಹಿ ಪರಿಪೂರ್ಣತೆಯೆಡೆಗೆ ಕರೆದೊಯ್ಯುವುದೇ ಗುರುವಿನ ಪರಮ ಧರ್ಮವಾಗಿದೆ ಎಂದರು.

    ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯರು, ಹೆಡಗಾಪೂರದ ಶ್ರೀ ಶಿವಲಿಂಗ ಸ್ವಾಮೀಜಿ, ಹಿರೇಣಾಗಾಂವದ ಶ್ರೀ ಜಯಶಾಂತಲಿಂಗ ಸ್ವಾಮೀಜಿ, ಮೇಹಕರ-ತಡೋಳಾದ ಶ್ರೀ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ ರಾಜೇಶ್ವರದ ಶ್ರೀ ಘನಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ ಕಿಟ್ಟಾದ ಶ್ರೀ ನಿಜಲಿಂಗ ಶಿವಾಚಾರ್ಯ, ಹಳ್ಳಿಖೇಡದ ಶ್ರೀ ಪತಿಪಂಡಿತಾರಾಧ್ಯ ಶಿವಾಚಾರ್ಯ, ಹುಡುಗಿಯ ಶ್ರೀ ಚನ್ನಮಲ್ಲ ಸ್ವಾಮೀಜಿ, ಅಕ್ಕಲಕೋಟದ ಶ್ರೀ ಬಸವಲಿಂಗ ಸ್ವಾಮೀಜಿ, ಸಾಯೆಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಶಿವಣಿ-ಹಲಬರ್ಗಾದ ಶ್ರೀ ಹಾವಗಿಲಿಂಗ ಶಿವಾಚಾರ್ಯರು, ಹಣೇಗಾಂವ ಶ್ರೀ ಶಂಕರಲಿಂಗ ಶಿವಾಚಾರ್ಯರು, ಕೌಳಾಸದ ಶ್ರೀ ಬಸವಲಿಂಗ ಶಿವಾಚಾರ್ಯರು, ದೇವಣಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಬಂಗರಗಾಳಿಯ ಶ್ರೀ ಗುರುಲಿಂಗ ಶಿವಾಚಾರ್ಯರು, ಉಮಾಕಾಂತ ದೇಶಿ ಕೇಂದ್ರ ಡೋಣಗಾಂವನ ಸ್ವಾಮೀಜಿ ಮತ್ತು ಗ್ರಾಮದ ಸುತ್ತಮುತ್ತಲಿನ ಭಕ್ತಾಧಿಗಳು, ಮಹಿಳೆಯರು ಹಾಗೂ ಮಕ್ಕಳು ಇದ್ದರು.

    ಅಗ್ನಿ ಪೂಜೆ : ಶನಿವಾರ ಬೆಳಗ್ಗೆ ೫.೩೦ ಕ್ಕೆ ಅಗ್ನಿ ಕುಂಡಕ್ಕೆ ಡೋಣಗಾಂವ-ರAಡ್ಯಾಳ-ಉದಗೀರನ ಹಾವಗಿಸ್ವಾಮಿ ಮಠದ ಪೀಠಾಧಿಪತಿ ಡಾ.ಶಂಭುಲಿಂಗ ಶಿವಾಚಾರ್ಯರು ಚಾಲನೆ ನೀಡಿದರು.

    ಮೆರವಣಿಗೆ : ಬೆಳಗ್ಗೆ ೧೦.೩೦ಕ್ಕೆ ಬಾಳೆಹೊನ್ನುರು ಶ್ರೀ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಜಗದ್ಗುರುಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ನಂತರ ೧೧.೩೦ ಕ್ಕೆ ಕಳಸಾರೋಹಣ ಕಾರ್ಯಕ್ರಮ ಜರುಗಿತು.

    ದೇವರು, ಧರ್ಮ ಮತ್ತು ಗುರುವಿನಲ್ಲಿ ನಂಬಿಕೆ ಇಟ್ಟು ನಡೆದಾಗ ಬದುಕಿನಲ್ಲಿ ಶಾಂತಿ-ಸಮೃದ್ಧಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ. ಧರ್ಮ ಹಲವು, ಆಚರಣೆಗಳೂ ಹಲವು ಆದರೆ ಆ ಎಲ್ಲ ಧರ್ಮಗಳ ಗುರಿ ಒಂದೇಯಾಗಿದೆ. ದೇವನೊಬ್ಬ ನಾಮ ಹಲವು ಎಂಬ ಪರಮ ಸತ್ಯ ಅರಿತಾಗ ಎಲ್ಲೆಡೆ ಸಾಮರಸ್ಯ-ಸೌಹಾರ್ಧತೆ ಬೆಳೆದು ಬರಲು ಸಾಧ್ಯವಾಗುತ್ತದೆ.
    | ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts