More

    409 ಜನರಿಗೆ ಪಾಸಿಟಿವ್, ಆರು ಜನ ಸಾವು

    ಹಾವೇರಿ: ಜಿಲ್ಲೆಯಲ್ಲಿ ಕರೊನಾ 2ನೇ ಅಲೆಯ ರುದ್ರನರ್ತನ ಆರಂಭಗೊಂಡಿದ್ದು, ಸತತವಾಗಿ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಂಗಳವಾರ 409 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಆರು ಜನ ಮೃತಪಟ್ಟಿದ್ದಾರೆ.86 ಜನ ಗುಣವಾಗಿ ಬಿಡುಗಡೆಗೊಂಡಿದ್ದಾರೆ.

    ಕರೊನಾ 2ನೇ ಅಲೆ ಆರಂಭಗೊಂಡ ನಂತರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಸೋಮವಾರ 330 ಪ್ರಕರಣಗಳು ಪತ್ತೆಯಾಗಿದ್ದವು. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

    ರಾಣೆಬೆನ್ನೂರ ತಾಲೂಕಿನಲ್ಲಿ ಅತಿಹೆಚ್ಚು 164, ಶಿಗ್ಗಾಂವಿ ತಾಲೂಕಿನಲ್ಲಿ 88, ಹಾವೇರಿ ತಾಲೂಕಿನಲ್ಲಿ 68, ಹಾನಗಲ್ಲ ತಾಲೂಕಿನಲ್ಲಿ 35, ಬ್ಯಾಡಗಿ ತಾಲೂಕಿನಲ್ಲಿ 23, ಹಿರೇಕೆರೂರ ತಾಲೂಕಿನಲ್ಲಿ 18, ಸವಣೂರ ತಾಲೂಕಿನಲ್ಲಿ 12 ಹಾಗೂ ಇತರ ಒಬ್ಬರಿಗೆ ಮಂಗಳವಾರ ಪಾಸಿಟಿವ್ ವರದಿಯಾಗಿದೆ.

    ರಾಣೆಬೆನ್ನೂರ ತಾಲೂಕಿನಲ್ಲಿ 24, ಶಿಗ್ಗಾಂವಿ ತಾಲೂಕಿನಲ್ಲಿ 15, ಬ್ಯಾಡಗಿ ತಾಲೂಕಿನಲ್ಲಿ 13, ಹಾನಗಲ್ಲ ತಾಲೂಕಿನಲ್ಲಿ 10, ಹಾವೇರಿ ಹಾಗೂ ಹಿರೇಕೆರೂರ ತಾಲೂಕಿನಲ್ಲಿ ತಲಾ 9, ಸವಣೂರ ತಾಲೂಕಿನಲ್ಲಿ 5 ಹಾಗೂ ಇತರ ಒಬ್ಬರು ಸೇರಿ 86 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ.

    ಜಿಲ್ಲೆಯಲ್ಲಿ ಇದುವರೆಗೆ 13,560 ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 12,072 ಜನ ಗುಣವಾಗಿದ್ದಾರೆ. ಇದುವರೆಗೆ 239 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. ಸದ್ಯ 1,249 ಸಕ್ರಿಯ ಪ್ರಕರಣಗಳಿದ್ದು, 803 ಜನರು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 446 ಜನರು ಹೋಂ ಐಸೋಲೇಷನ್​ನಲ್ಲಿದ್ದಾರೆ ಎಂದು ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.

    ಆರು ಜನರ ಸಾವು: ಹಾವೇರಿ ತಾಲೂಕಿನ 61 ವರ್ಷದ ವೃದ್ಧ, 59 ವರ್ಷದ ಪುರುಷ, ಶಿಗ್ಗಾಂವಿ ತಾಲೂಕಿನ 72 ಹಾಗೂ 84 ವರ್ಷದ ವೃದ್ಧರು, ಹಾನಗಲ್ಲ ತಾಲೂಕಿನ 45 ವರ್ಷದ ಪುರುಷ, ಹಿರೇಕೆರೂರ ತಾಲೂಕಿನ 53 ವರ್ಷದ ಪುರುಷ ಸೇರಿ ಒಟ್ಟು ಆರು ಜನರು ಮೇ 5ರಂದು ಮೃತಪಟ್ಟಿದ್ದಾರೆ.

    ರಸ್ತೆಯಲ್ಲೇ ಕೆಟ್ಟು ನಿಂತ ಆಂಬುಲೆನ್ಸ್

    ಕರೊನಾ ಸೋಂಕಿನಿಂದ ಮೃತಪಟ್ಟವರ ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ರಸ್ತೆಯಲ್ಲೇ ಕೆಟ್ಟು ನಿಂತ ಘಟನೆ ಮಂಗಳವಾರ ನಡೆದಿದೆ. ಹಿರೇಕೆರೂರು ತಾಲೂಕಿನ ಹಂಸಬಾವಿ ಮತ್ತು ಅರಳಿಕಟ್ಟಿ ಗ್ರಾಮದ ತಲಾ ಒಬ್ಬರು ಮೃತಪಟ್ಟಿದ್ದರು. ಮೃತದೇಹಗಳನ್ನು ಜಿಲ್ಲಾಸ್ಪತ್ರೆಯಿಂದ ಗ್ರಾಮಕ್ಕೆ ಸಾಗಿಸುತ್ತಿದ್ದಾಗ ತಾಲೂಕಿನ ಕನಕಾಪುರ ಗ್ರಾಮದ ಬಳಿ ಆಂಬುಲೆನ್ಸ್ ಕೆಟ್ಟು ನಿಂತಿತ್ತು. ವಾಹನವು ಅಂದಾಜು ಎರಡು ತಾಸು ನಿಂತಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿತ್ತು. ಬೇರೆ ಆಂಬುಲೆನ್ಸ್ ಆಗಮಿಸಿದ ನಂತರ ಪಿಪಿಇ ಕಿಟ್ ಧರಿಸಿದ್ದ ಸಿಬ್ಬಂದಿ ಶವಗಳನ್ನು ಮತ್ತೊಂದು ವಾಹನಕ್ಕೆ ಹಾಕಿ ಹಿರೇಕೆರೂರ ಕಡೆಗೆ ಒಯ್ದರು.

    ಆಂಬುಲೆನ್ಸ್​ಗಳನ್ನು ಇಂತಹ ಸ್ಥಿತಿಯಲ್ಲಿಟ್ಟರೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆ ಗಮನಹರಿಸಬೇಕು ಎಂದು ಕನಕಾಪುರ ಗ್ರಾಮಸ್ಥರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts