More

    40 ಸಿಬ್ಬಂದಿಗೆ ವಾಕರಸಾಸಂ ಶಾಕ್

    ಕಾರವಾರ: ಸರ್ಕಾರದ ಮನವಿಗೂ ಸ್ಪಂದಿಸದೇ ಪ್ರತಿಭಟನೆ ಮುಂದುವರಿಸಿರುವ ಎನ್​ಡಬ್ಲು್ಯಕೆಆರ್​ಟಿಸಿ 40 ನೌಕರರಿಗೆ ಸಂಸ್ಥೆಯು ಶಾಕ್ ನೀಡಿದೆ.

    30 ಕಂಡಕ್ಟರ್ ಹಾಗೂ ಡ್ರೖೆವರ್​ಗಳು, 10 ತಾಂತ್ರಿಕ ನೌಕರರನ್ನು ಬೇರೆ ಘಟಕಗಳಿಗೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ.

    ಕಳೆದ ನಾಲ್ಕು ದಿನದಿಂದ ಸಾರಿಗೆ ಮುಷ್ಕರ ನಡೆದಿದೆ. ಜಿಲ್ಲೆಯಲ್ಲಿ ತರಬೇತಿ ಅವಧಿಯಲ್ಲಿರುವ ಸಾಕಷ್ಟು ನೌಕರರಿಗೆ ಸಾರಿಗೆ ಇಲಾಖೆ ಕೆಲಸಕ್ಕೆ ಹಾಜರಾಗುವಂತೆ ನೋಟಿಸ್ ನೀಡಿ, ಕಾನೂನು ಕ್ರಮಕ್ಕೆ ಮುಂದಾಗಿದೆ.

    ಕುಮಟಾದಲ್ಲಿ ಸಾರಿಗೆ ನೌಕರರು ಕ್ವಾರ್ಟರ್ಸ್ ಬಿಡುವಂತೆ ನೋಟಿಸ್ ನೀಡಲಾಗಿದ್ದರೂ ನಂತರ ಅದನ್ನು ಹಿಂಪಡೆಯಲಾಗಿದೆ ಎಂದು ಶಿರಸಿ ವಿಭಾಗೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಐದು ಬಸ್​ಗಳ ಓಡಾಟ ಅಂಕೋಲಾ: ಏಪ್ರಿಲ್ 7 ರಿಂದ ಆರಂಭವಾದ ಸಾರಿಗೆ ನೌಕರರ ಮುಷ್ಕರ 4ನೇ ದಿನ ಪೂರೈಸಿದ್ದು, ಶನಿವಾರ ಸಾರಿಗೆ ಸಂಸ್ಥೆಯ ಅಂಕೋಲಾ ಘಟಕದಿಂದ ಪ್ರಯಾಣಿಕರ ಅನುಕೂಲಕ್ಕಾಗಿ 5 ಬಸ್​ಗಳು ವಿವಿಧ ಮಾರ್ಗಗಳಲ್ಲಿ ಸಂಚಾರ ಆರಂಭಿಸಿವೆ. ಇಲ್ಲಿನ ಘಟಕದಲ್ಲಿ ಚಾಲಕ ಮತ್ತು ನಿರ್ವಹಕ ಸೇರಿ ಒಟ್ಟು 158 ನೌಕರರು ಇದ್ದು, ಅವರಲ್ಲಿ 10 ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪ್ರಯಾಣಿಕರ ಬೇಡಿಕೆ ಪರಿಶೀಲಿಸಿ, ಹೆಚ್ಚಿನ ಪ್ರಯಾಣಿಕರಿಗೆ ಉಪಯುಕ್ತವಾದ ಯಲ್ಲಾಪುರ, ಕಾರವಾರ, ಕುಮಟಾ, ಗೋಕರ್ಣ ಹಾಗೂ ಮಂಜಗುಣಿ ಮಾರ್ಗಗಳಿಗೆ ಬಸ್ ಸಂಚಾರ ನಡೆಸುವಂತೆ ಸೂಚನೆ ನೀಡಿರುವುದಾಗಿ ಘಟಕ ವ್ಯವಸ್ಥಾಪಕ ಯುಗ ಬಾನವಳಿಕರ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts