More

    40 ಜನ ಗರ್ಭಿಣಿಯರ ವರದಿ ನೆಗೆಟಿವ್

    ಗೊಳಸಂಗಿ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೊನಾ ರ‌್ಯಾಪಿಡ್ ಕಿಟ್ ಮೂಲಕ 40 ಜನ ಗರ್ಭಿಣಿಯರ ಗಂಟಲು ದ್ರವ ಮಾದರಿಗಳನ್ನು ಮಂಗಳವಾರ ಪರೀಕ್ಷೆ ಮಾಡಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಡಿ. ನಂದಿನಿ ಮಾತನಾಡಿ, ಈ ಹಿಂದೆ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ಸುಮಾರು 1-2 ವಾರ ಕಾಯಬೇಕಿತ್ತು. ಆದರೆ, ಪ್ರಸ್ತುತ ದ್ರವ ಸಂಗ್ರಹಿಸಿದ ಕೆಲವೇ ನಿಮಿಷಗಳಲ್ಲಿ ಲಿತಾಂಶ ಸಿಗುವ ವಿಧಾನವನ್ನು ನಮ್ಮ ಇಲಾಖೆ ಕಂಡುಕೊಂಡಿದೆ. ಇಂದು ಗೊಳಸಂಗಿ ಗ್ರಾಮದ 40, ನಿಡಗುಂದಿ ತಹಸೀಲ್ದಾರ್ ಕಚೇರಿಯ 5 ಜನ ಸಿಬ್ಬಂದಿ ಪ್ರಾಥಮಿಕ ಸಂಪರ್ಕದಲ್ಲಿರುವ 7 ಜನ ಸೇರಿದಂತೆ ಒಟ್ಟು 40 ಜನ ಗರ್ಭಿಣಿಯರ ಗಂಟಲು ದ್ರದ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ಲಿತಾಂಶ ನೆಗೆಟಿವ್ ಬಂದಿರುವುದು ಹರ್ಷದಾಯಕ ಸಂಗತಿ ಎಂದರು.
    ಪ್ರಯೋಗಾಲಯ ತಂತ್ರಜ್ಞ ಶಿವಯೋಗಪ್ಪ ಕಂದಗಲ್, ಆರೋಗ್ಯ ಸಹಾಯಕರಾದ ಪೂರ್ಣಿಮಾ ನಾಟಿಕಾರ, ಎ್.ಆರ್.ಕುಂಟೋಜಿ, ನಿಂಗರಾಜ ಬಸರಕೋಡ, ಅರ್ಚನಾ ಸಿಂಹಾಸನ, ಅಶ್ವಿನಿ ಮೋರೆ, ತೌಸೀಫ್ ಗಣಿ, ಬಸವರಾಜ ಹಡಪದ ಮತ್ತಿತರರು ಇದ್ದರು.

    40 ಜನ ಗರ್ಭಿಣಿಯರ ವರದಿ ನೆಗೆಟಿವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts