More

    ಪರಿಷತ್​ ಚುನಾವಣೆ: ನಾಲ್ಕು ಕ್ಷೇತ್ರಗಳ ಮತ ಎಣಿಕೆ ಮುಂದೂಡಿಕೆ!

    ಬೆಂಗಳೂರು: ನಾಲ್ಕು ಕ್ಷೇತ್ರಗಳ ಪರಿಷತ್ ಚುನಾವಣೆ ಮತ ಎಣಿಕೆ ದಿನಾಂಕ ಮುಂದೂಡಿಕೆಯಾಗಿದ್ದು, ಚುನಾವಣಾ ಆಯೋಗ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ.
    ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ.28ರಂದು ಮತದಾನ ನಡೆದಿದೆ.

    ತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ನಿಂತಿದ್ದು, ಅದರು ಬಹಿರಂಗಕ್ಕೆ ಇನ್ನು ಕಲವೇ ಗಂಟೆಗಳು ಬಾಕಿ ಇತ್ತು. ಅಷ್ಟರಲ್ಲಿ ಅಧಿಸೂಚನೆಗೆ ತಿದ್ದುಪಡಿ ಮಾಡಿರುವ ಚುನಾವಣಾ ಆಯೋಗ. ಮತ ಎಣಿಕೆಗೆ ನಿಗದಿಯಾಗಿದ್ದ ದಿನಾಂಕವನ್ನು ಮುಂದೂಡಿದೆ. ಇದೀಗ ನವೆಂಬರ್ 2ರ ಬದಲು ನವೆಂಬರ್ 10ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

    ಈಶಾನ್ಯ ಶಿಕ್ಷಕರ ಕ್ಷೇತ್ರದ ವಾಪ್ತಿಗೆ ಕಲಬುರಗಿ, ಬಳ್ಳಾರಿ, ಬೀದರ್​, ರಾಯಚೂರು, ಕೊಪ್ಪಳ, ಯಾದಗಿರಿ ಒಳಪಟ್ಟಿದೆ. ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಸೇರಿವೆ. ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರ ಹೊಂದಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಬೆಂಗಳೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿ ಒಳಗೊಂಡಿದೆ. ಈ ನಾಲ್ಕು ಕ್ಷೇತ್ರಗಳ ಫಲಿತಾಂಶ ಏನಾಗಲಿದೆ ಎಂದು ತಿಳಿಯಲು ನ.10ರವರೆಗೂ ಕಾಯಲೇಬೇಕು.

    ‘ಯತ್ನಾಳ್​ ಮಾನಸಿಕ ಸ್ಥಿತಿ ಸರಿ ಇಲ್ಲ, ಚಿಕಿತ್ಸೆ ಕೊಡಿಸುವುದು ಗೆಳೆಯನಾಗಿ ನನ್ನ ಕರ್ತವ್ಯ’

    ನಾನು ಮಾಜಿ ಡಿಸಿಎಂ ಅಣ್ಣನ ಮಗಳು… ಮದುವೆ ಆಗದಿದ್ರೆ ರೇಪ್​ ಕೇಸ್​ ಹಾಕ್ತೀನಿ: ಬೆಚ್ಚಿಬೀಳಿಸುತ್ತೆ ಆಕೆಯ ಹಿಸ್ಟರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts