More

    ಪರಿಷತ್​ ಅಖಾಡಕ್ಕಿಳಿದ ಕೈ ಅಭ್ಯರ್ಥಿಗಳು, ‘ಮೇಲ್ಮನೆ’ ಪ್ರವೇಶ ಸನಿಹ

    ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೇ ದಿನವಾದ ಗುರುವಾರ ಬಿಜೆಪಿಯಿಂದ 4, ಕಾಂಗ್ರೆಸ್​ 2 ಹಾಗೂ ಜೆಡಿಎಸ್​ನಿಂದ ಒಬ್ಬರು ನಾಮಪತ್ರ ಸಲ್ಲಿಸಿದ್ದು, ಪಕ್ಷೇತರರಾಗಿ ಪಿ.ಸಿ.ಕೃಷ್ಣೇಗೌಡ ದಾಖಲಿಸಿದ ಉಮೇದುವಾರಿಕೆಗೆ ನಿಯಮದಂತೆ ಸೂಚಕರಾಗಿ 10 ಶಾಸಕರು ಸಹಿ ಮಾಡಿಲ್ಲ. ಹೀಗಾಗಿ ಚುನಾವಣೆ ಘೋಷಿತ ಸ್ಥಾನಗಳಷ್ಟೇ ಅಭ್ಯರ್ಥಿಗಳು ಕಣಕ್ಕಿಳಿದಂತಾಗಿದೆ.

    ಪರಿಷತ್ ಅಭ್ಯರ್ಥಿಗಳಾಗಿ ಕಾಂಗ್ರೆಸ್​ನಿಂದ ಕಾಂಗ್ರೆಸ್​ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್​ ಮತ್ತು ನಸೀರ್​ ಅಹ್ಮದ್​ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್, ಯು.ಟಿ.ಖಾದರ್, ಹ್ಯಾರೀಸ್ ಸಾಥ್​ ನೀಡಿದರು. ಹರಿಪ್ರಸಾದ್​ ಮೊದಲ ಬಾರಿಗೆ, ನಸೀರ್​ ಅಹ್ಮದ್​ 2ನೇ ಬಾರಿಗೆ “ಹಿರಿಯರ ಮನೆ” ಪ್ರವೇಶಿಸುವ ದಿನಗಳು ಹತ್ತಿರವಾಗಿವೆ. ಇದನ್ನೂ ಓದಿರಿ ನಾಲ್ವರನ್ನು ಪರಿಷತ್​ ಅಖಾಡಕ್ಕಿಳಿಸಿದ ಬಿಜೆಪಿ, ಕಟೀಲ್​ರಿಂದ ಗುರುವಿನ ಗುಣಗಾನ

    ಪರಿಷತ್​ ಅಖಾಡಕ್ಕಿಳಿದ ಕೈ ಅಭ್ಯರ್ಥಿಗಳು, 'ಮೇಲ್ಮನೆ' ಪ್ರವೇಶ ಸನಿಹನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ನಾನು 40ಕ್ಕೂ ಹೆಚ್ಚು ವರ್ಷ ಕಾರ್ಯಕರ್ತನಾಗಿ ದುಡಿದಿದ್ದೇನೆ. ಪರಿಷತ್ ಸ್ಥಾನ ನೀಡುವಂತೆ ನಾನು ಅರ್ಜಿ ಹಾಕಿರಲಿಲ್ಲ. ನನಗೆ ನಿರೀಕ್ಷೆಯೂ ಇರಲಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.

    17 ರಾಜ್ಯಗಳಲ್ಲಿ ಕೆಲಸ ಮಾಡಿದ್ದೇನೆ. ರಾಷ್ಟ್ರದ ಬಗ್ಗೆ ಸಂಸತ್ತಿನಲ್ಲಿ‌ ಧ್ವನಿ ಎತ್ತಿದ್ದೆ. ಈಗ ರಾಜ್ಯದ ಜನರ ಪರವಾಗಿ ಧ್ವನಿ ಎತ್ತಲು ಅವಕಾಶ ಸಿಕ್ಕಿದೆ. ಅದನ್ನು ನಿಭಾಯಿಸುವೆ ಎಂದರು.

    ಇದನ್ನೂ ಓದಿರಿ ಇಂಚರ ಗೋವಿಂದರಾಜುಗೆ ಜೆಡಿಎಸ್​ ಟಿಕೆಟ್​ ಕೊಟ್ಟಿದ್ದರ ಹಿಂದಿದೆ ಮಾಸ್ಟರ್​ ಪ್ಲ್ಯಾನ್​…

    ಇಂಚರ ಗೋವಿಂದರಾಜುಗೆ ಜೆಡಿಎಸ್​ ಟಿಕೆಟ್​ ಕೊಟ್ಟಿದ್ದರ ಹಿಂದಿದೆ ಮಾಸ್ಟರ್​ ಪ್ಲ್ಯಾನ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts