More

    4 ಕೋಟಿ ರೂ. ಸಂಗ್ರಹಿಸಿದ ಮಾಹಿತಿ; ಇಂದು ಇಡಿ ಕಛೇರಿಯಲ್ಲಿ ಮಾಜಿ ಸಚಿವ ಅನಿಲ್​ ದೇಶ್​ಮುಖ್​ ವಿಚಾರಣೆ

    ಮುಂಬೈ : ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್​ ದೇಶ್​ಮುಖ್​ ವಿರುದ್ಧ ಮನಿ ಲಾಂಡಂರಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್​ಫೋರ್ಸ್​ಮೆಂಟ್​ ಡೈರೆಕ್ಟೊರೇಟ್​(ಇಡಿ), ಇಂದು 11 ಗಂಟೆಗೆ ದೇಶ್ಮುಖ್​ ಅವರನ್ನು ವಿಚಾರಣೆಗೆ ಕರೆಸಿದೆ. ನಿನ್ನೆಯ ದಿನ ದೇಶ್​ಮುಖ್​ರ ವಿವಿಧ ನಿವಾಸಗಳಿಗೆ ತೆರಳಿ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳಿಗೆ 12 ಬಾರ್​ ಮಾಲೀಕರಿಂದ 4 ಕೋಟಿ ರೂ.ಗಳನ್ನು ಪಡೆದಿರುವ ಬಗ್ಗೆ ಸುಳಿವು ಸಿಕ್ಕಿದೆ ಎನ್ನಲಾಗಿದೆ.

    ನಿನ್ನೆ ದೇಶ್​ಮುಖ್​ ಅವರ ಪಿಎ ಕುಂದನ್​ ಶಿಂದೆ ಮತ್ತು ಪಿಎಸ್​ ಸಂಜೀವ್​ ಪಾಲಂಡೆ ಅವರನ್ನು 9 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು, ಬಂಧನಕ್ಕೊಳಪಡಿಸಿದ್ದಾರೆ. ಪ್ರಿವೆಂಷನ್ ಆಫ್​ ಮನಿ ಲಾಂಡಂರಿಂಗ್​ ಆ್ಯಕ್ಟ್​(ಪಿಎಂಎಲ್​​ಎ)ನ ಅಡಿಯಲ್ಲಿ ಬಂಧಿಸಲಾಗಿರುವ ಇವರನ್ನು ಇಂದು ವಿಶೇಷ ಪಿಎಂಎಲ್​ಎ ಕೋರ್ಟ್​ನ ಮುಂದೆ ಹಾಜರುಪಡಿಸಲಾಗುವುದು ಎನ್ನಲಾಗಿದೆ.

    ಇದನ್ನೂ ಓದಿ: ರೇಖಾ ಕದಿರೇಶ್​ ಕೊಲೆ: ಮತ್ತೆ ಮೂವರ ಬಂಧನ, ಹತ್ಯೆ ವೇಳೆ ಒಬ್ಬೊಬ್ಬರೂ ಒಂದೊಂದು ಕೃತ್ಯವೆಸಗಿದ್ದರು…

    ದೇಶ್​ಮುಖ್​ ಅವರ ನಾಗ್ಪುರ ಮನೆ ಮತ್ತು ಮುಂಬೈನ ವೊರ್ಲಿ ಮತ್ತು ಮಲಾಬಾರ್​ ಹಿಲ್​ಗಳಲ್ಲಿರುವ ಎರಡು ಮನೆಗಳಿಗೆ ಇಡಿ ಅಧಿಕಾರಿಗಳು ಹೋಗಿ ತನಿಖೆ ನಡೆಸಿದ್ದಾರೆ. ಶಿಂದೆ ಮತ್ತು ಪಾಲಂಡೆ ಅವರ ಮನೆಗಳಿಗೂ ತೆರಳಿ ರೇಡ್​ ನಡೆಸಿದ ನಂತರ ಇಬ್ಬರನ್ನೂ ದಕ್ಷಿಣ ಮುಂಬೈನಲ್ಲಿರುವ ಇಡಿ ಕಛೇರಿಗೆ ವಿಚಾರಣೆಗೆ ಕರೆತಂದು, ಆನಂತರ ಅವರನ್ನು ಬಂಧನಕ್ಕೊಳಪಡಿಸಲಾಯಿತು ಎನ್ನಲಾಗಿದೆ.

    ಮಾಜಿ ಸಹಾಯಕ ಇನ್ಸ್​ಪೆಕ್ಟರ್​ ಸಚಿನ್ ವಾಜ್​​ 12 ಬಾರ್​ಗಳ ಮಾಲೀಕರಿಂದ ಸುಮಾರು 4 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದರು. ಈ ಹಣವನ್ನು ದೇಶ್​ಮುಖ್​ರ ಹತ್ತಿರದ ಸಂಬಂಧಿಗೆ ಸೇರಿದ ಮಹಾರಾಷ್ಟ್ರದ ಹೊರಗಿನ ಶೆಲ್ ಕಂಪನಿಗಳ ಮೂಲಕ ದೇಶ್​ಮುಖ್​ ಅವರಿಗೆ ವರ್ಗಾಯಿಸಲಾಗಿತ್ತು ಎಂಬುದು ತಿಳಿದುಬಂದಿದೆ. ದೇಶ್​ಮುಖ್​ ಅವರನ್ನು ಬಂಧನಕ್ಕೊಳಪಡಿಸಲು ಸಾಕಷ್ಟು ಸಾಕ್ಷ್ಯಗಳು ಸಂಗ್ರಹವಾಗಿವೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    105 ಪ್ರಕರಣಗಳ ಆರೋಪಿ, ಕುಖ್ಯಾತ ಸರಗಳ್ಳನಿಗೆ 3 ವರ್ಷ ಜೈಲು

    ಮಾಸ್ಕ್​ ವಿವಾದ : ಗ್ರಾಹಕನ ಮೇಲೆ ಗುಂಡು ಹಾರಿಸಿದ ಸೆಕ್ಯುರಿಟಿ ಗಾರ್ಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts