More

    ದ.ಕ ಜಿಲ್ಲೆಯಲ್ಲಿ ನಾಲ್ವರಿಗೆ ಪಾಸಿಟಿವ್

    ಮಂಗಳೂರು: ಮಹಾರಾಷ್ಟ್ರದಿಂದ ಬಂದ ಮೂವರು ಹಾಗೂ ದುಬೈನಿಂದ ಮರಳಿದ ಓರ್ವರು ಸೇರಿದಂತೆ 4 ಮಂದಿಗೆ ದ.ಕ ಜಿಲ್ಲೆಯಲ್ಲಿ ಗುರುವಾರ ಕರೊನಾ ದೃಢಪಟ್ಟಿದೆ.
    ಜೂನ್ 1ರಂದು ದುಬೈನಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ 28 ವರ್ಷದ ಮಹಿಳೆ, ಮುಂಬೈನಿಂದ ಮೇ 13ರಂದು ಆಗಮಿಸಿ ಕಾರ್ಕಳದಲ್ಲಿ 10 ದಿನ ಕ್ವಾರಂಟೈನ್ ಪೂರ್ಣಗೊಳಿಸಿ ಮಂಗಳೂರಿಗೆ ಆಗಮಿಸಿದ್ದ 48ರ ಪುರುಷ, 50ರ ಪುರುಷ ಹಾಗೂ 34ರ ಯುವಕ ಸೋಂಕಿತರು. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮಗು ಬಿಡುಗಡೆ: 2 ವರ್ಷದ ಮಗು ಸಹಿತ 61ರ ಗಂಡಸು ಹಾಗೂ 42 ವರ್ಷದ ಗಂಡಸು ಒಟ್ಟು ಮೂರು ಮಂದಿ ಕೋವಿಡ್ ರೋಗಮುಕ್ತರಾಗಿ ಮನೆಗೆ ತೆರಳಿದ್ದಾರೆ. ಪ್ರಸ್ತುತ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 60 ಕೋವಿಡ್ ರೋಗಿಗಳು ದಾಖಲಾಗಿದ್ದು ಎಲ್ಲರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ.

    ಮುದ್ರೆ ಪರಿಶೀಲಿಸಿ: ಎಲ್ಲ ಅಂಗಡಿ, ವಾಣಿಜ್ಯ ಸಂಸ್ಥೆ, ಕಚೇರಿ, ಕಾರ್ಖಾನೆ, ಮಾಲ್, ಧಾರ್ಮಿಕ ಸ್ಥಳ, ಹೋಟೆಲ್ ಇತ್ಯಾದಿಗಳಲ್ಲಿ ಗ್ರಾಹಕರು, ಸಂದರ್ಶಕರು ಪ್ರವೇಶಿಸುವ ಮೊದಲು ಅವರ ಕೈಯ ಹಿಂಭಾಗದಲ್ಲಿ ಕ್ವಾರಂಟೈನ್ ಮುದ್ರೆ ಹಾಕಿದೆಯೇ ಎಂದು ಪರಿಶೀಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
    ಕ್ವಾರಂಟೈನ್ ಮುದ್ರೆ ಹೊಂದಿರುವವರನ್ನು ಅವರ ಕ್ವಾರಂಟೈನ್ ಅವಧಿ ಪೂರ್ಣವಾಗುವವರೆಗೆ ಅಥವಾ ಅವರ ಕೋವಿಡ್ ತಪಾಸಣೆ ನೆಗೆಟಿವ್ ವರದಿ ಸ್ವೀಕೃತವಾಗುವ ವರೆಗೂ ಪ್ರವೇಶಿಸಲು ಅವಕಾಶ ನೀಡಬಾರದು. ಅಂತಹ ಪ್ರಕರಣ ಕಂಡುಬಂದಲ್ಲಿ 100ಕ್ಕೆ ಕರೆ ಮಾಡಿ ಪೊಲೀಸರಿಗೆ ತಿಳಿಸಬೇಕು ಎಂದು ಡಿಸಿ ಸೂಚಿಸಿದ್ದಾರೆ.

    ಕಾಸರಗೋಡಲ್ಲಿ 12 ಮಂದಿಗೆ ಸೋಂಕು
    ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ ಮೂವರು ಮಹಿಳೆಯರ ಸಹಿತ 12 ಮಂದಿಗೆ ಕೋವಿಡ್-19 ಸೋಂಕು ಬಾಧಿಸಿದೆ. 6 ಮಂದಿ ಮಹಾರಾಷ್ಟ್ರದಿಂದ, 5 ಮಂದಿ ವಿದೇಶದಿಂದ ಆಗಮಿಸಿದ್ದರೆ, ಒಬ್ಬರಿಗೆ ಸಂಪರ್ಕದಿಂದ ರೋಗ ತಗುಲಿದೆ. ಪ್ರಸಕ್ತ ಜಿಲ್ಲೆಯಲ್ಲಿ 109 ಮಂದಿ ಸೋಂಕು ಖಚಿತಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts