More

    ಭಾರತೀಯ ಯೋಧರ ಸಾಹಸಗಾಥೆ: ನಾಲ್ಕು ಉಗ್ರ ಸಂಘಟನೆ ಮುಖ್ಯಸ್ಥರು ಖತಂ

    ಜಮ್ಮು: ಭಾರತೀಯ ಯೋಧರ ಶೌರ್ಯ, ಸಾಹಸ ಇನ್ನೊಮ್ಮೆ ಸಾಬೀತಾಗಿದೆ. ಪಾಕ್​ ಉಗ್ರರ ಸೆಣೆಸಾಟ ಮುಂದುವರೆದಿದ್ದು ಕಳೆದ ಕೆಲವು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಪ್ರಮುಖ ಉಗ್ರ ಸಂಘಟನೆಗಳ ಮುಖ್ಯಸ್ಥರನ್ನು ಸೇನೆ ಹೊಡೆದುರುಳಿಸಿದೆ.

    ಈ ಬಗ್ಗೆ ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಲಷ್ಕರ್-ಎ- ತಯಬಾ, ಜೈಷ್ -ಎ- ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ , ಅನ್ಸಾರ್ ಘಾಜ್ವಾತ್ -ಉಲ್- ಹಿಂದ್ ಸಂಘಟನೆಯ ನಾಲ್ವರು ಮುಖ್ಯಸ್ಥರನ್ನು ಸೇನೆ ಹೊಡೆದುಹಾಕಿದೆ ಎಂದಿರುವ ವಿಜಯ್​ಕುಮಾರ್​ ಅವರು, ಭದ್ರತಾ ಪಡೆಗಳನ್ನು ಅಭಿನಂದಿಸುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

    ಕೆಲ ತಿಂಗಳುಗಳಿಂದ ಉಗ್ರರ ಜತೆ, ಜಮ್ಮುವಿನ ಗಡಿಯಲ್ಲಿ ನಮ್ಮ ಯೋಧರು ಸೆಣೆಸಾಟ ನಡೆಸುತ್ತಲೇ ಇದ್ದಾರೆ. ಇದಾಗಲೇ ಹಲವಾರು ಉಗ್ರರು ಹತ್ಯೆಗೀಡಾಗಿದ್ದಾರೆ. ಇದೀಗ ಒಂದೇ ಬಾರಿ ಪ್ರಮುಖರೇ ಮೃತಪಟ್ಟಿದ್ದಾರೆ. ಪ್ರಮುಖ ಉಗ್ರ ಸಂಘಟನೆಯ ಮುಖ್ಯಸ್ಥರೇ ಮೃತಪಟ್ಟಿರುವ ಕಾರಣ, ಅವರಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಅವರು ಹೇಳಿದರು.

    ಇದನ್ನೂ ಓದಿ: ಗನ್​ಮ್ಯಾನ್​ಗೆ ಕರೊನಾ: ಬಿಜೆಪಿ ಶಾಸಕ, ಇಡೀ ಕುಟುಂಬ ಕ್ವಾರಂಟೈನ್​

    ಕುಲ್ಗಾಮ್​ನಲ್ಲಿ ಶನಿವಾರ ನಡೆದ ಕಾರ್ಯಾಚರಣೆ ವೇಳೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಮತ್ತಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಇವರ ಪೈಕಿ ಒಬ್ಬ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಸೇರಿದವನು. ಈತ ಜಿಇಎಂ ಉಗ್ರನಾಗಿದ್ದು ಶೂಟರ್​. ಸ್ಫೋಟಕ ಕೃತ್ಯದಲ್ಲಿ ಪರಿಣತಿ ಹೊಂದಿದವ. ಈತನನ್ನು ಹತ್ಯೆ ಮಾಡಿದ ಸ್ಥಳದಿಂದ ಎಕೆ-47, ಪಿಸ್ತೂಲ್ ಮತ್ತಿತರ ಶಸಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಅವರು ನೀಡಿದರು.

    ಕಥುವಾ ಜಿಲ್ಲೆಯ ಹೀರಾನಗರ್ ತಾಲೂಕಿನ ರಥುವಾ ಗ್ರಾಮದ ಬಳಿ ಶಸ್ತ್ರಾಸ್ತ್ರ ಹೊತ್ತೊಯ್ಯುತ್ತಿದ್ದ ಡ್ರೋನ್​ ಅನ್ನು ಸೇನಾಪಡೆಗಳು ಹೊಡೆದುರುಳಿಸಿದೆ. ಎಂ. 4 ರೈಫಲ್ಸ್ ಸೇರಿದಂತೆ ಅನೇಕ ಶಸಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದ ಡ್ರೋನ್​ ಮೂಲಕ ಉಗ್ರ ಫಾರ್ಕನ್​ಗೆ ಈ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾಗುತ್ತಿರುವ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ಹೆಚ್ಚಿನ ವಿವರ ಹಾಕಲಾಗಿದೆ ಎಂದು ತಿಳಿಸಿದರು.
    ಶ್ರೀನಗರದ ಜಾಬಿದಾಲ್ ಬಳಿ ನಡೆದ ಎನ್​ಕೌಂಟರ್ ಕುರಿತಂತೆ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ವಿಜಯ್ ಕುಮಾರ್, ಉಗ್ರರನ್ನು ಶರಣಾಗುವಂತೆ ಕೇಳಿಕೊಂಡೆವು. ಶರಣಾಗುವುದು ದೂರದ ಮಾತು,. ನಮ್ಮ ಯೋಧರ ಕಡೆ ಕೈ ಗ್ರೇನೆಡ್ ಗಳನ್ನು ಎಸೆದರು.

    ಇದರಿಂದ ಎನ್​ಕೌಂಟರ್​ ನಡೆಸಲಾಯಿತು. ನಂತರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟರು. ಮೃತರ ಪೈಕಿ ಇಬ್ಬರ ಗುರುತನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್​)

    ನಿದ್ದೆ ಮಾತ್ರೆ ತಿನ್ನದ ಅಜ್ಜಿ, ಮೊಮ್ಮಗಳ ರೂಮಲ್ಲಿ ಕಂಡಳು ಭಯಾನಕ ದೃಶ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts