More

    ಉಗ್ರರಿಂದ ಜನರನ್ನು ರಕ್ಷಿಸಿ ಹುತಾತ್ಮರಾದ ಐವರು ಭಾರತೀಯ ಯೋಧರು

    ಜಮ್ಮು: ಒಂದೆಡೆ ಕರೊನಾ ಸೋಂಕಿನ ಸಮರ ನಡೆಯುತ್ತಿದ್ದರೆ, ಅತ್ತ ಶತ್ರುಗಳ ನಾಶದಲ್ಲಿ ನಮ್ಮ ಯೋಧರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದಾರೆ.

    ಉಗ್ರರು ಒತ್ತೆಯಾಗಿಟ್ಟುಕೊಂಡಿದ್ದ ಜನರನ್ನು ಸುರಕ್ಷಿತವಾಗಿ ಬಿಡಿಸುವ ಹಿನ್ನೆಲೆಯಲ್ಲಿ ಸತತ ಎಂಟು ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಲ್ ಅಶುತೋಷ್ ಶರ್ಮಾ ಸೇರಿದಂತೆ ಮೇಜರ್, ಇಬ್ಬರು ಯೋಧರು ಮತ್ತು ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಹುತಾತ್ಮರಾಗಿದ್ದಾರೆ. ನಿನ್ನೆ ರಾತ್ರಿಯಿಂದ ಒಂದೇ ಸಮನೆ ಎಂಟು ಗಂಟೆಯವರೆಗೆ ನಡೆದಿರುವ ಭೀಕರ ಗುಂಡಿನ ಕಾಳಗ ಇದಾಗಿದೆ. ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾ ನಗರದ ಸಮೀಪ ಕಾಳಗ ನಡೆದಿದೆ. ಪ್ರತಿದಾಳಿಗೆ ಇಬ್ಬರು ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ.

    ಉಗ್ರರು ಅಡಗಿದ್ದ ಮನೆಯ ಪ್ರದೇಶದೊಳಕ್ಕೆ ಐವರು ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಇಳಿದಿತ್ತು. ದಿಟ್ಟತನದ ಹೋರಾಟದಲ್ಲಿ ನಾಗರಿಕರನ್ನು ರಕ್ಷಿಸುವಲ್ಲಿ ತಂಡ ಯಶಸ್ವಿಯಾಗಿತ್ತು. ಈ ವೇಳೆ ಉಗ್ರರು ನಡೆಸಿದ ಭಾರೀ ಗುಂಡಿನ ದಾಳಿಗೆ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ: ಇನ್ನೊಂದು ವರ್ಷ ಕರೊನಾ ಹೊಸ ರೂಲ್ಸ್​: ಫಾಲೋ ಮಾಡದಿದ್ರೆ ಬೀಳತ್ತೆ ದಂಡ!

    21ನೇ ರಾಷ್ಟ್ರೀಯ ರೈಫಲ್ಸ್ ಯೂನಿಟ್​ನ ಕರ್ನಲ್ ಅಶುತೋಷ್ ಅವರು ಈ ಹಿಂದೆ ಹಲವಾರು ಭಯೋತ್ಪಾದಕ ನಿಗ್ರಹ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇವರಿಗೆ ಸೇನಾ ಪದಕ ಕೂಡ ಎರಡು ಬಾರಿ ಲಭಿಸಿತ್ತು.

    ಭದ್ರತಾ ಪಡೆಯ ಮೇಜರ್ ಸೂದ್, ನಾಯಕ್ ರಾಜೇಶ್ ಮತ್ತು ಲ್ಯಾನ್ಸ್ ನಾಯಕ್ ದಿನೇಶ್ ಹುತಾತ್ಮರಾಗಿರುವ ಯೋಧರು. ಹಂದ್ವಾರಾದ ಚಾಂಗಿಮುಲ್ಲಾ ಮನೆಯೊಂದರ ಒಳಗೆ ಜನರನ್ನು ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಜನರನ್ನು ರಕ್ಷಿಸುವಲ್ಲಿ ಇವರು ಸಫಲರಾಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts