More

    4.80 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ

    ಮೂಡಲಗಿ, ಬೆಳಗಾವಿ: ಸುಣಧೋಳಿ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ಅನುದಾನ ನೀಡಿ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಶಿವಾನಂದ ಶ್ರೀಗಳು ಹೇಳಿದರು. ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಸುಣಧೋಳಿ ಕ್ರಾಸ್‌ದಿಂದ ಸುಣಧೋಳಿ ಗ್ರಾಮದವರೆಗೆ ಸುಮಾರು 3 ಕಿಮೀ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ 4.80 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂಡಲಗಿ, ಕುಲಗೋಡ, ಖಾನಟ್ಟಿ, ಬೆಟಗೇರಿ ಗ್ರಾಮಗಳಲ್ಲಿ ಹೊಸ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿದ್ದಾರೆ ಎಂದರು.

    ಸುಣಧೋಳಿಯ ಸೊಗಲ ಮಠದ ಶ್ರೀ ಚಿದಾನಂದ ಶರಣರು, ನಾಗಪ್ಪ ಶೇಖರಗೋಳ, ಮಲ್ಲಿಕಾರ್ಜುನ ಯಕ್ಸಂಬಿ, ವೀರಭದ್ರ ವಾಲಿ, ಸದಾಶಿವ ದೇವನಗೋಳ, ಶಿವಾನಂದ ವಾಲಿ, ಭೀಮಪ್ಪ ಹುವನ್ನವರ, ಗ್ರಾಪಂ ಸದಸ್ಯರಾದ ಶ್ರೀಕಾಂತ ದೇವರಮನಿ, ಗದಿಗೆಪ್ಪ ಅಮಣಿ, ಸಿದ್ಧಾರೂಢ ಪಾಶಿ, ಮುಖಂಡರಾದ ಈಶ್ವರ ಅಮಣಿ, ಅಮೀತ ಹಿರೇಮಠ, ಸುರೇಶ ಮಹಾಲಿಮಗಪೂರ, ಬಸವರಾಜ ಗೌಡ್ರ, ಸಿದ್ಲಿಂಗಪ್ಪ ಅಜ್ಜಪ್ಪನವರ, ಬಸವರಾಜ ಪಾಶಿ, ಸಿದ್ದಾರೂಢ ಕಮತಿ, ಸಿದ್ಧಾರೂಢ ದೇವನಗೋಳ, ಉದ್ದಪ್ಪ ಮಾದರ, ಸುರೇಶ ಕಂಕಣವಾಡಿ, ಸಿದ್ಧಾರೂಢ ಕಮತಿ, ರವೀಂದ್ರ ಹಟ್ಟಿಹೋಳಿ, ರಾಮಣ್ಣ ಬೆಣ್ಣಿ, ನವೀನ ಕಮತಿ, ಶಂಕರ ಪಾಟೀಲ, ಬಾಳಪ್ಪ ಕಮತಿ, ಮುತ್ತೆಪ್ಪ ಜಿಡ್ಡಿಮನಿ, ಪರಶುರಾಮ ಭಜಂತ್ರಿ, ಜಗದೀಶ ಕಮತಿ, ಭೀಮಪ್ಪ ಕಮತಿ, ಶಶಿಕಾಂತ ಬೆಣ್ಣಿ, ಪ್ರಮೋದ ನುಗ್ಗಾನಟ್ಟಿ, ಇಮಾಮ ಮೋಮಿನ, ಬಾಲಚಂದ್ರ ಪಾಟೀಲ, ರೇವಪ್ಪ ನಾಯಿಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts