More

    ಅಂಬಾರಿಯ ಕನಸು ಚೂರುಚೂರು; ಒಂದೇ ವಾರದಲ್ಲಿ 36 ಬಸ್​ಗಳಿಗೆ ಹಾನಿ, 19 ಸಿಬ್ಬಂದಿಯ ಬಂಧನ

    ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಆರಂಭವಾದ ಒಂದೇ ವಾರದಲ್ಲಿ ಸಾರಿಗೆ ನಿಗಮಗಳ 36 ಬಸ್​ಗಳಿಗೆ ಹಾನಿಯಾಗಿದೆ. ಮುಷ್ಕರನಿರತ ಸಿಬ್ಬಂದಿಯ ಆಕ್ರೋಶಕ್ಕೆ ಲಕ್ಸುರಿ ಬಸ್​​ಗಳೂ ಲಗಾಡಿಯಾಗಿವೆ. ಈ ಮೂಲಕ ಅಂಬಾರಿಯ ಕನಸೂ ಚೂರುಚೂರಾದಂತಾಗಿದೆ.

    ಸಾರಿಗೆ ನೌಕರರ ಮುಷ್ಕರ ಆರಂಭವಾಗುತ್ತಿದ್ದಂತೆ ನೌಕರರ ವಲಯದಲ್ಲೇ ಎರಡು ವಿಭಾಗವಾಗಿದ್ದು, ಒಂದು ವರ್ಗದವರು ಮುಷ್ಕರ ನಡೆಸಿದರೆ, ಇನ್ನೊಂದು ವರ್ಗದವರು ಬೀದಿಗಳಿದು ಬಸ್​ ತಡೆಯುವ ಮೂಲಕ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಹೀಗೆ ತಮ್ಮ ಮುಷ್ಕರಕ್ಕೆ ವಿರುದ್ಧವಾಗಿ ಕೆಲವು ಸಹೋದ್ಯೋಗಿಗಳು ಬಸ್​ಗಳನ್ನು ರಸ್ತೆಗಿಳಿಸಿದ್ದರ ಬಗ್ಗೆ ಮುಷ್ಕರನಿರತರು ಆಕ್ರೋಶ ವ್ಯಕ್ತಪಡಿಸಿ ಕಲ್ಲು ತೂರಾಟ ಇತ್ಯಾದಿ ನಡೆಸಿದ್ದರಿಂದಾಗಿ ಸರ್ಕಾರಿ ಬಸ್​ಗಳು ಹಾನಿಗೀಡಾಗಿವೆ.

    ಅಂಬಾರಿಯ ಕನಸು ಚೂರುಚೂರು; ಒಂದೇ ವಾರದಲ್ಲಿ 36 ಬಸ್​ಗಳಿಗೆ ಹಾನಿ, 19 ಸಿಬ್ಬಂದಿಯ ಬಂಧನ

    ಐಷಾರಾಮಿ ಬಸ್​ಗಳನ್ನೂ ಲೆಕ್ಕಿಸದೆ ಕಲ್ಲು ತೂರಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬಸ್​ಗಳು ಜಖಂಗೊಂಡಿವೆ. ಅದರಲ್ಲೂ ‘ಅಂಬಾರಿ ಡ್ರೀಮ್​ ಕ್ಲಾಸ್- ಟ್ರಾವೆಲ್​ ವಿದ್​ ಡ್ರೀಮ್ಸ್​’ ಎಂದು ಬರೆದಿರುವ ಲಕ್ಸುರಿ ಬಸ್​ಗೂ ಕಲ್ಲು ಬಿದ್ದಿದ್ದು, ಅದರ ದುಬಾರಿ ಗ್ಲಾಸ್​ಗಳು ಹಾನಿಗೊಂಡು ಅಂಬಾರಿಯ ಕನಸೂ ಚೂರುಚೂರಾದಂತಾಗಿದೆ. ಹೀಗೆ ರಾಜ್ಯದ ನಾಲ್ಕು ನಿಗಮಗಳಲ್ಲಿ ಏ. 7ರಿಂದ 13ರ ಅವಧಿಯಲ್ಲಿ ಸರ್ಕಾರದ ಒಟ್ಟು 36 ಬಸ್​ಗಳು ಹಾನಿಗೀಡಾಗಿವೆ. ಈ ಸಂಬಂಧ 115 ಸಿಬ್ಬಂದಿ ವಿರುದ್ಧ ಒಟ್ಟು 72 ಪ್ರಕರಣಗಳು ದಾಖಲಾಗಿದ್ದು, 19 ಮಂದಿಯನ್ನು ಬಂಧಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

    ಅಂಬಾರಿಯ ಕನಸು ಚೂರುಚೂರು; ಒಂದೇ ವಾರದಲ್ಲಿ 36 ಬಸ್​ಗಳಿಗೆ ಹಾನಿ, 19 ಸಿಬ್ಬಂದಿಯ ಬಂಧನ

    ಅಂಬಾರಿಯ ಕನಸು ಚೂರುಚೂರು; ಒಂದೇ ವಾರದಲ್ಲಿ 36 ಬಸ್​ಗಳಿಗೆ ಹಾನಿ, 19 ಸಿಬ್ಬಂದಿಯ ಬಂಧನ

    ಅಂಬಾರಿಯ ಕನಸು ಚೂರುಚೂರು; ಒಂದೇ ವಾರದಲ್ಲಿ 36 ಬಸ್​ಗಳಿಗೆ ಹಾನಿ, 19 ಸಿಬ್ಬಂದಿಯ ಬಂಧನ

    ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

    ಅಮ್ಮಾ ತಾಯಿ.. ಭಿಕ್ಷೆ ನೀಡಿ.. ಸಂಬಳ ಕೊಟ್ಟಿಲ್ಲ, ದಯವಿಟ್ಟು ಭಿಕ್ಷೆ ಹಾಕಿ: ಹಬ್ಬದ ದಿನವೇ ಸಾರಿಗೆ ಸಂಸ್ಥೆ ನೌಕರರಿಂದ ಭಿಕ್ಷಾಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts