More

    ಪೋರ್ನ್​ ವಿಡಿಯೋ ನೋಡುವವರಿಗೆ ಶಾಕ್​ ಕೊಡಲು ತೆರೆಮರೆಯಲ್ಲಿ ನಡೆಯುತ್ತಿದೆ ಪೊಲೀಸರ ಕಸರತ್ತು!

    ತಿರುವನಂತಪುರಂ: ಅಂತರ್ಜಾಲದಲ್ಲಿ ಮಕ್ಕಳ ಪೋರ್ನ್ ವಿಡಿಯೋಗಳನ್ನು ಹುಡುಕುವುದು, ಅಪ್​ಲೋಡ್​ ಮತ್ತು ಡೌನ್​​ಲೌಡ್​ ಮಾಡುವವರ ಮೇಲೆ ಕೇರಳ ಪೊಲೀಸರು ನಿಗಾ ಇಟ್ಟಿದ್ದು, ಅಂಥವರಿಗೆ ಶಾಕ್​ ನೀಡುವುದಕ್ಕಾಗಿಯೇ ಡೇಟಾಬೇಸ್​ ಅನ್ನು ತಯಾರಿಸಿದ್ದಾರೆ.

    ಕೇಳರದ ಸೈಬರ್​ಡೊಮ್​ ಮತ್ತು ಕೌಂಟರಿಂಗ್​ ಚೈಲ್ಡ್​ ಸೆಕ್ಸುವಲ್​ ಎಕ್ಸ್​ಪ್ಲೋಟೇಶನ್ ವಿಂಗ್​ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 350 ಮಂದಿಯ ಡೇಟಾವನ್ನು ಸಂಗ್ರಹಿಸಿದೆ.

    ಇದನ್ನೂ ಓದಿ: ಮುಕೇಶ್​ ಅಂಬಾನಿ ಮೊಮ್ಮಗು ನೋಡಲು ಮೋದಿ ಹೋಗಿದ್ರಾ- ವೈರಲ್​ ಫೋಟೋದ ಸತ್ಯಾಂಶ ಏನು?

    ಡಾರ್ಕ್​ನೆಟ್​ ವೆಬ್​ಸೈಟ್​ ಮತ್ತು ಜಾಲತಾಣ ವೇದಿಕೆಯಲ್ಲಿ ನಿಯಮಿತವಾಗಿ ವಿಡಿಯೋಗಳನ್ನು ಅಪ್​ಲೋಡ್​ ಮತ್ತು ಡೌನ್​ಲೋಡ್​ ಮಾಡುವುದು ಹಾಗೂ ಚೈಲ್ಡ್​ ಪೋರ್ನ್​ ವಿಡಿಯೋಗಳಿಗಾಗಿ ಹುಡುಕುವವರ ಮೇಲೆ ನಿಗಾ ಇಡಲಾಗಿದ್ದು, ಪೊಲೀಸ್​ ಇಲಾಖೆಯ ತಯಾರಿಸಿರುವ ಸಾಫ್ಟ್​ವೇರ್​ ಮೂಲಕ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಒಟ್ಟು 350 ಮಂದಿಯಲ್ಲಿ ಅರ್ಧಕಷ್ಟು ಜನರ ವಿರುದ್ಧ ಸಾಕ್ಷ್ಯಾಧಾರ ಸಹ ಲಭ್ಯವಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಕಾರ್ಯಾಚರಣೆಯಲ್ಲಿ ಇತರೆ ಏಜೆನ್ಸಿಗಳು ಸಹ ಸಹಕಾರ ನೀಡಬೇಕೆಂದು ಪೊಲೀಸರು ಕೇಳಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆಯಂತೆ. ಕಾರ್ಯಾಚರಣೆಗೆ ಪಿ-ಹಂಟ್​ ಎಂದು ಹೆಸರಿಸಲಾಗಿದ್ದು, ಇಂಟರ್ಪೋಲ್​ ಏಜೆನ್ಸಿಯ ಸಹಾಯದಿಂದ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಅಪಘಾತಕ್ಕೀಡಾದ ಸಂತ್ರಸ್ತರಿಗೆ ತಕ್ಷಣ ನೆರವಾದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

    ಚಾಟ್​ ರೂಮ್ಸ್​ ಮತ್ತು ವೆಬ್​ಸೈಟ್​ಗಳು ಕೇವಲ ಚೈಲ್ಡ್​ ಪೋರ್ನ್​ ವಿಡಿಯೋಗಳನ್ನು ಮಾತ್ರ ತುಂಬಾ ವಿನಿಮಯ ಮಾಡುತ್ತಿದ್ದು, ತನಿಖಾ ತಂಡವು ಅವುಗಳ ಜಾಲವನ್ನು ಪತ್ತೆಹಚ್ಚಿದೆ. ಜೂನ್​ ಮತ್ತು ಅಕ್ಟೋಬರ್​ವರೆಗೆ ಕಾರ್ಯಾಚರಣೆ ನಡೆದಿದ್ದು, ಅನೇಕ ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಕೇರಳ ಪೊಲೀಸರ ಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ರಾಜ್ಯಗಳು ಸಹ ಇದೇ ದಾರಿಯನ್ನು ಅನಸರಿಸಿದರೆ ಅಚ್ಚರಿಪಡಬೇಕಾಗಿಲ್ಲ. (ಏಜೆನ್ಸೀಸ್​)

    ಇದನ್ನೂ ಓದಿ: ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ಆ ನರ್ಸ್​ ಚಿತ್ರೀಕರಿಸಿ ರವಾನಿಸುತ್ತಿದ್ದುದೇಕೆ?

    ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಸ್ನೇಕ್​ ಡ್ಯಾನಿ ದುರಂತ ಸಾವು: 75 ಬಾರಿ ಬಚಾವ್​ ಆದ್ರೂ ಬೆಂಬಿಡದ ಮೃತ್ಯು!

    ಅಮ್ಮನಿಗೆ 118 ಬಾರಿ ಚಾಕು ಇರಿದು ಕೊಂದ ಮಗ! ಪೊಲೀಸರಿಗೆ ಕರೆ ಮಾಡಿ ಬಾಡಿ ಬ್ಯಾಗ್​ ತರಲು ಹೇಳಿದ

    ಗೋಡೆ ಕುಸಿದು ಗೃಹಿಣಿ ಸಾವು ಪ್ರಕರಣಕ್ಕೆ ಟ್ವಿಸ್ಟ್​: ಅನಾಮಧೇಯ ಕರೆಯಿಂದ ಗಂಡನ ಕರಾಳ ಮುಖ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts