More

    ಲಖನೌದಿಂದ ಅಯೋಧ್ಯೆಗೆ ಪಾದಯಾತ್ರೆ: ಬಾಲರಾಮ ದೇವರಿಗೆ ಪ್ರಾರ್ಥನೆ ಸಲ್ಲಿಸಿದ 350 ಮುಸ್ಲಿಮರು!

    ಅಯೋಧ್ಯೆ: ಲಖನೌದಿಂದ 6 ದಿನ ಪಾದಯಾತ್ರೆಮೂಲಕ ಅಯೋಧ್ಯೆ ಬಂದ 350 ಮುಸ್ಲಿಮರು ರಾಮಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ರಾಷ್ಟ್ರೀಯ ಮಂಚ್‍ನ ಸಂಚಾಲಕ ರಾಜಾ ರಯೀಸ್ ಮತ್ತು ಪ್ರಾಂತೀಯ ಸಂಚಾಲಕ ಶೇರ್ ಅಲಿ ಖಾನ್ ನೇತೃತ್ವದಲ್ಲಿ 350 ಭಕ್ತರು ಪಾದಯಾತ್ರ ಮೂಲಕ ಬಂದು ಬಾಲರಾಮದೇವರ ದರ್ಶನ ಪಡೆದುಕೊಂಡರು.

    ಇದನ್ನೂ ಓದಿ: ವಿಶ್ವದ ಅತ್ಯಂತ ಕಡಿಮೆ ಭ್ರಷ್ಟ ದೇಶಗಳ ಪಟ್ಟಿ ಬಹಿರಂಗ..ಭಾರತಕ್ಕೆ ಯಾವ ಸ್ಥಾನ?

    ಎಲ್ಲರ ಬಾಯಲ್ಲಿ ಶ್ರೀ ರಾಮನ ಸ್ಮರಣೆ ಭಕ್ತಿ ಬಾವ ನೋಡಿ ಎಲ್ಲರೂ ಬೆರಗಾಗಿದ್ದಾರೆ, ಸುಮಾರು 350 ಮುಸ್ಲಿಂ ಭಕ್ತರು 150 ಕಿ.ಮೀ ದೂರ ಪಾದಯಾತ್ರೆಯನ್ನು ಕೈಗೊಂಡಿದ್ದರು. ಪ್ರತಿ ದಿನ 25 ಕಿ.ಮಿ ನಂತೆ ತಮ್ಮ ಪ್ರಯಾಣವನ್ನು ನಿರಂತರವಾಗಿ ಮುಂದುವರಿಸಿದ್ದಾರೆ. ಆರು ದಿನಗಳ ಪಾದಯಾತ್ರೆ ನಂತರ, ಅಂತಿಮವಾಗಿ ಅಯೋಧ್ಯೆ ತಲುಪಿ ಶ್ರೀ ರಾಮನ ಮುಂದೆ ನಿಂತು ಪ್ರಾರ್ಥನೆ ಮಾಡಿ ದರ್ಶನ ಪಡೆದೆವು ಎಂದು ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ಹೇಳಿದ್ದಾರೆ.

    ಶ್ರೀರಾಮ ಮಂದಿರದ ಸಂಕೀರ್ಣದಿಂದ ಮುಸ್ಲಿಂ ಭಕ್ತರು ಏಕತೆ, ಸಮಗ್ರತೆ, ಸಾರ್ವಭೌಮತೆ ಮತ್ತು ಸಾಮರಸ್ಯದ ಸಂದೇಶವನ್ನು ಸಾರಿದರು. ಅಸುದ್ದೀನ್ ಓವೈಸಿಯಂತಹ ನಾಯಕರ ಉಪಸ್ಥಿತಿಯು ದೇಶದಲ್ಲಿ ಮುಸ್ಲಿಮರ ಅಶಿಕ್ಷಿತ, ತುಳಿತಕ್ಕೊಳಗಾದ, ಹಿಂದುಳಿದ, ಬಡ ಮತ್ತು ಅಸುರಕ್ಷಿತ ಸ್ಥಿತಿಯನ್ನು ಶಾಶ್ವತಗೊಳಿಸುತ್ತದೆ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ಪ್ರತಿಪಾದಿಸಿದೆ.

    ಶ್ರೀರಾಮ ಮಂದಿರದಲ್ಲಿ ರಾಮ್ ಲಾಲಾ ದರ್ಶನದ ನಂತರ ದೇವಾಲಯದ ಆವರಣದಲ್ಲಿ ಮಾತನಾಡಿದ ಮಂಚ್ ಸಂಚಾಲಕ ರಾಜಾ ರಯೀಸ್, ರಾಮನು ಎಲ್ಲರಿಗೂ ಪೂರ್ವಜ ಎಂದು ಪ್ರತಿಪಾದಿಸಿದ್ದಾರೆ. ಜಾತಿ ಮತ್ತು ಧರ್ಮಕ್ಕಿಂತ ದೇಶ ಮತ್ತು ಮಾನವೀಯತೆ ಆದ್ಯತೆಯಾಗಿದೆ. ಯಾವುದೇ ಧರ್ಮವು ಇತರರಿಗೆ ಟೀಕೆ, ಅಪಹಾಸ್ಯ ಅಥವಾ ತಿರಸ್ಕಾರವನ್ನು ಕಲಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದರು.

    ದೇಶದಲ್ಲಿ ಪ್ರೀತಿ ಮತ್ತು ಐಕ್ಯತೆಯ ಸಂಸ್ಕೃತಿಯನ್ನು ಬಲಪಡಿಸಲು ವಿವಿಧ ಧರ್ಮಗಳನ್ನು ಗೌರವಿಸುವುದು, ಏಕತೆಯನ್ನು ಬೆಳೆಸುವುದು ಮತ್ತು ಸಹ ನಾಗರಿಕರ ಸಂತೋಷ ಮತ್ತು ದುಃಖದಲ್ಲಿ ಭಾಗಿಯಾಗುತ್ತದೆ ಇದು ನಮ್ಮ ಪ್ರಾಮುಖ್ಯತೆ ಎಂದಿದ್ದಾರೆ.

    ಈ ಮನೆ ಮುಂದೆ ಪಾರ್ಕಿಂಗ್​ ಮಾಡಿದ್ರೆ ಶಾಪಕ್ಕೆ ಗುರಿಯಾಗ್ತೀರಿ ಹುಷಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts