More

    34 ವಿದ್ಯಾರ್ಥಿಗಳು ಹಾಜರು

    ರೋಣ: ಕೋವಿಡ್ ನೆಪದಿಂದ ಹಿಂದೇಟು ಹಾಕುತ್ತಿದ್ದ ಪಾಲಕರು ತಮ್ಮ ಮಕ್ಕಳನ್ನು ಪಟ್ಟಣದ ಇಂದಿರಾ ಗಾಂಧಿ ವಸತಿ ಶಾಲೆಗೆ ಸೇರಿಸುತ್ತಿದ್ದಾರೆ. ಇದರಿಂದ ವಸತಿ ಶಾಲೆಗೆ ಪ್ರವೇಶ ಪಡೆದ 45 ಮಕ್ಕಳಲ್ಲಿ 34 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

    ವಸತಿ ಶಾಲೆಯಲ್ಲಿ 9ನೇ ತರಗತಿಗಳು ಫೆ. 1ರಿಂದ ಆರಂಭವಾಗಿದ್ದರೂ ಪಾಲಕರು ಕೋವಿಡ್ ನೆಪವೊಡ್ಡಿ ಮಕ್ಕಳನ್ನು ವಸತಿ ಶಾಲೆಗೆ ಕಳುಹಿಸಿರಲಿಲ್ಲ. ಈ ಕುರಿತು ವಿಜಯವಾಣಿಯಲ್ಲಿ ಫೆ. 17ರಂದು ಸಮಗ್ರ ವರದಿ ಪ್ರಕಟವಾಗಿತ್ತು. ಅದರಿಂದ ಎಚ್ಚೆತ್ತ ಪಾಲಕರು ಮಕ್ಕಳನ್ನು ವಸತಿ ಶಾಲೆಗೆ ತಂದುಬಿಟ್ಟಿದ್ದಾರೆ. ಬುಧವಾರ 26, ಗುರುವಾರ 8 ಸೇರಿ 34 ಮಕ್ಕಳು ಪ್ರವೇಶ ಪಡೆದಿದ್ದಾರೆ.

    ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ದಿನವೇ 20 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ ಎಂದು ವಸತಿ ಶಾಲೆ ಮುಖ್ಯೋಪಾಧ್ಯಾಯ ಎಸ್.ಎಚ್. ಬಂಡಿವಡ್ಡರ ತಿಳಿಸಿದರು.

    ವೈದ್ಯಕೀಯ ಅಂಕಿ-ಅಂಶಗಳನ್ನು ಗಮನಿಸಿದರೆ ಸಣ್ಣ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಅವರಿಗೆ ಕೋವಿಡ್​ನಿಂದ ಸಮಸ್ಯೆಯಾಗಿರುವುದು ವಿರಳ. ಆ ನಿಟ್ಟಿನಲ್ಲಿ ಪಾಲಕರು ಕೋವಿಡ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಪೌಷ್ಟಿಕಾಂಶದ ಆಹಾರ ನೀಡಲಾಗುತ್ತದೆ.
    | ಪ್ರಶಾಂತ ವರಗಪ್ಪನವರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts