More

    72 ಖಾಸಗಿ ಆಸ್ಪತ್ರೆಗಳಿಂದ 3,331 ಬೆಡ್​ಗಳು ಕೊವಿಡ್​-19 ಸೋಂಕಿತರಿಗೆ ಮೀಸಲು; ಶೇ.22ರಷ್ಟು ಈಗಲೇ ಭರ್ತಿ

    ಬೆಂಗಳೂರು: ದಿನದಿಂದ ದಿನಕ್ಕೆ ಕೊವಿಡ್​-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್​ಗಳು ಸಾಕಾಗುತ್ತಿಲ್ಲ. ಹಾಗಾಗಿ ಕಳೆದ ವಾರ ಮುಖ್ಯಮಂತ್ರಿ ಯಡಿಯೂರಪ್ಪನವರು ಖಾಸಗಿ ಆಸ್ಪತ್ರೆ ಮಾಲೀಕರೊಂದಿಗೆ ಸಭೆ ನಡೆಸಿ, ಬೆಡ್​ಗಳ ವ್ಯವಸ್ಥೆ ಮಾಡುವಂತೆ ಕೇಳಿದ್ದರು. ಅದೀಗ ಸಾಕಾರಗೊಂಡಿದೆ.

    ಒಟ್ಟು 72 ಖಾಸಗಿ ಆಸ್ಪತ್ರೆಗಳಿಂದ ಒಟ್ಟು 3331 ಹಾಸಿಗೆಗಳನ್ನು ಕೊವಿಡ್​-19 ಸೋಂಕಿತರಿಗಾಗಿ ಮೀಸಲಿಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್​ ತಿಳಿಸಿದ್ದಾರೆ. ಟ್ವೀಟ್​ ಮಾಡಿರುವ ಅವರು, ಬೆಂಗಳೂರು ನಗರಾದ್ಯಂತ ಒಟ್ಟು 72 ಆಸ್ಪತ್ರೆಗಳಲ್ಲಿ 3331 ಹಾಸಿಗೆಗಳನ್ನು ಕರೊನಾ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಶನಿವಾರ ಸಂಜೆಯವರೆಗೆ 733 ಹಾಸಿಗೆಗಳು ಭರ್ತಿಯಾಗಿದ್ದು, ಇನ್ನೂ 2598 ಹಾಸಿಗೆಗಳು ಅಂದರೆ ಶೇ.78 ಹಾಸಿಗೆಗಳು ಖಾಲಿ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ‘ಕೇಂದ್ರ ಸರ್ಕಾರಕ್ಕೆ ಟಾರ್ಗೆಟ್​ ಚೀನಾ ಅಲ್ಲ…ಏನಿದ್ದರೂ ಕಾಂಗ್ರೆಸ್​ ಮೇಲೆ ಕಣ್ಣು…’

    ಇತ್ತೀಚೆಗೆ ಕರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬೆಡ್​ಗಳ ಕೊರತೆಯ ಆತಂಕ ಎದುರಾಗಿತ್ತು. ಈ ಮಧ್ಯೆ ಸೋಂಕು ತಗುಲಿದ್ದರೂ ಯಾವುದೇ ಲಕ್ಷಣಗಳು ಇಲ್ಲದೆ ಇರುವವರಿಗೆ ಮನೆಯಲ್ಲೇ ಕ್ವಾರಂಟೈನ್​ನಲ್ಲಿದ್ದು ಚಿಕಿತ್ಸೆ ಪಡೆಯುವುದಕ್ಕೂ ರಾಜ್ಯ ಸರ್ಕಾರ ಅಸ್ತು ಎಂದಿದೆ. (ಏಜೆನ್ಸೀಸ್​)

    72 ಖಾಸಗಿ ಆಸ್ಪತ್ರೆಗಳಿಂದ 3,331 ಬೆಡ್​ಗಳು ಕೊವಿಡ್​-19 ಸೋಂಕಿತರಿಗೆ ಮೀಸಲು; ಶೇ.22ರಷ್ಟು ಈಗಲೇ ಭರ್ತಿ

    72 ಖಾಸಗಿ ಆಸ್ಪತ್ರೆಗಳಿಂದ 3,331 ಬೆಡ್​ಗಳು ಕೊವಿಡ್​-19 ಸೋಂಕಿತರಿಗೆ ಮೀಸಲು; ಶೇ.22ರಷ್ಟು ಈಗಲೇ ಭರ್ತಿ

    72 ಖಾಸಗಿ ಆಸ್ಪತ್ರೆಗಳಿಂದ 3,331 ಬೆಡ್​ಗಳು ಕೊವಿಡ್​-19 ಸೋಂಕಿತರಿಗೆ ಮೀಸಲು; ಶೇ.22ರಷ್ಟು ಈಗಲೇ ಭರ್ತಿ 72 ಖಾಸಗಿ ಆಸ್ಪತ್ರೆಗಳಿಂದ 3,331 ಬೆಡ್​ಗಳು ಕೊವಿಡ್​-19 ಸೋಂಕಿತರಿಗೆ ಮೀಸಲು; ಶೇ.22ರಷ್ಟು ಈಗಲೇ ಭರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts